ಮಡಿಕೇರಿ, ಆ. ೮: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಡಿ ನಡೆಯುತ್ತಿರುವ ಗಾಳಿಬೀಡಿನ ಜವಾಹರ್ ನವೋದಯ ವಿದ್ಯಾಲಯವು ಸಿ. ಬಿ. ಎಸ್. ಇ. ಫಲಿತಾಂಶ ದಲ್ಲಿ ಉತ್ತಮ ಸಾಧನೆ ಮಾಡಿದೆ. ಹತ್ತನೆಯ ತರಗತಿಯಲ್ಲಿ ಅಂಕಿತಾ ಜಿ. ಎ. ೫೦೦ ಕ್ಕೆ ೪೮೬ ಅಂಕಗಳನ್ನು ಪಡೆದು ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಜನ್ ಡಿ. ೪೭೮ ಅಂಕಗಳೊAದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ತಲಾ ೪೭೬ ಅಂಕಗಳೊAದಿಗೆ ಆಕಾಶ್ ಸಿ. ಗೌಡ ಮತ್ತು ಸಮನ್ವಿತಾ ಬಿ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹನ್ನೆರಡನೆಯ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕುಮಾರಿ ವೆರೋನಿಕಾ ೯೫% ಅಂಕಗಳೊAದಿಗೆ ಪ್ರಥಮ ಸ್ಥಾನ ರಾಜೇಶ್ ಕೆ. ಜಿ. ದ್ವಿತೀಯ ಎನ್. ವಾಯ್ . ಹಿತೇಶ್ ತೃತೀಯ ಸ್ಥಾನ ಪಡೆದಿದ್ದಾರೆ. ಎಂದು ಪ್ರಾಂಶುಪಾಲ ಪಂಕಜಾಕ್ಷನ್ ಅವರು ತಿಳಿಸಿದ್ದಾರೆ.