ಗೋಣಿಕೊಪ್ಪ ವರದಿ, ಆ. ೮: ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಶಾಲೆಯಲ್ಲಿ ಆಯೋಜಿಸಿದ್ದ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಟ್ಟದ ಭಾಷಣ, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಮಾರು ೨೦ ಶಿಕ್ಷಣ ಸಂಸ್ಥೆಗಳ ೨೫೦ ವಿದ್ಯಾರ್ಥಿಗಳು ಭಾಗವಹಿಸಿ ದೇಶಭಕ್ತಿ ಮೂಡಿಸಿದರು. ಭಾಷಣ, ದೇಶಭಕ್ತಿ ಗೀತೆಯೊಂದಿಗೆ ಭಾರತಾಂಭೆಯನ್ನು ಸ್ಮರಿಸಿ, ದೇಶದ ಹಿತಕ್ಕೆ ಪೂರಕ ಸಂದೇಶಗಳನ್ನು ಸಾರಿದರು. ಎಲ್‌ಕೆಜಿ ತರಗತಿಯಿಂದ ಕಾಲೇಜು ಹಂತದವರೆಗೂ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡರು. ಒಂದೊAದು ಬಹುಮಾನಕ್ಕೆ ೨, ೪ ಸ್ಪರ್ಧಿಗಳು ಸಮ ಅಂಕದ ಸಾಧನೆ ಮೂಲಕ ಗುಣಮಟ್ಟದ ಸ್ಪರ್ಧೆ ನೀಡಿದರು.

ಫಲಿತಾಂಶ (ಕ್ರಮವಾಗಿ ಪ್ರ, ದ್ವಿ, ತೃ) ಪ್ರಾಥಮಿಕ ವಿಭಾಗ: ೧-೪ನೇ ತರಗತಿ ಇಂಗ್ಲೀಷ್ ಭಾಷಣದಲ್ಲಿ ಕಾಪ್ಸ್ ಶಾಲೆಯ ಸಿ.ಪಿ. ಲಿಯಾ, ಕಾಲ್ಸ್ ಶಾಲೆಯ ಜ್ಯೋತ್ಸಾö್ನ ಗಂಗಮ್ಮ, ಕಾಪ್ಸ್ನ ದಯಂತ ಚೌದರಿ, ಕನ್ನಡ ಭಾಷಣದಲ್ಲಿ ಕಾಲ್ಸ್ ಶಾಲೆಯ ಜಮ್ಮಡ ಮಯಾಂಕ್ ಮುತ್ತಪ್ಪ, ಕೆ.ಕೆ. ಮುತ್ತಮ್ಮ, ಕಾಪ್ಸ್ನ ಬಿ.ಐ. ಸಮರ್ಥ್ ಪೊನ್ನಪ್ಪ, ದೇಶಭಕ್ತಿ ಗೀತೆಯಲ್ಲಿ ಕಾಲ್ಸ್ನ ಸ್ವಯಂ ನಾಣಯ್ಯ, ಲಯನ್ಸ್ನ ಟಿ.ಎಂ. ವಂದನಾ, ರೋಟರಿಯ ರಿದಾ ಫಾತಿಮ, ೫-೭ ತರಗತಿ ವಿಭಾಗದಲ್ಲಿ ಕಾಪ್ಸ್ ಶಾಲೆಯ ಎ.ಸಿ. ಬೋಪಯ್ಯ, ಕಾಲ್ಸ್ನ ಚರಿಷ್ಮಾ ಕಾವೇರಮ್ಮ, ಲಯನ್ಸ್ ಶಾಲೆಯ ಟಿ.ಜಿ. ಶಕ್ತ, ಕನ್ನಡ ವಿಭಾಗದಲ್ಲಿ ಕಾಪ್ಸ್ನ ಕೆ.ಬಿ. ಪೂವಕ್ಕ, ತ್ರಿಷಾ ಸೋಮಯ್ಯ, ಲಯನ್ಸ್ ಶಾಲೆಯ ಪಿ.ಎಸ್. ಶಾಶ್ವತ್, ಕಾಲ್ಸ್ನ ಸುಹಾನಾ ಅಪ್ಪಯ್ಯ, ಲಯನ್ಸ್ನ ದೆರಿನ್ ಬ್ರೊನ್ ಸೈಮನ್, ಜೆ.ಸಿ. ಶಾಲೆಯ ಕೆ.ಪಿ. ಪೂಜಿತಾ ಬಹುಮಾನ ಪಡೆದುಕೊಂಡರು. ದೇಶಭಕ್ತಿ ಗೀತೆಯ ಎಲ್‌ಕೆಜಿ, ಯುಕೆಜಿ ವಿಭಾಗದಲ್ಲಿ ಜೆ.ಸಿ. ತಮ್ಮಯ್ಯ, ಎಸ್. ಜಯಸೂರ್ಯ, ಶ್ರೇಯ ಚೋಂದಮ್ಮ ಪಡೆದರು.

ಪ್ರೌಢ ವಿಭಾಗ: ದೇಶಭಕ್ತಿ ಗೀತೆಯಲ್ಲಿ ಲಯನ್ಸ್ ಶಾಲೆಯ ಬಿಷನ್, ಎಸ್‌ಎಂಎಸ್ ಶಾಲೆಯ ಎಸ್. ದಿವಿಕಾ, ಸರ್ವಧೈವತಾ ಶಾಲೆಯ ಯು.ಎ. ಕ್ರೀಷ್ಮಾ, ಕನ್ನಡ ಭಾಷಣದಲ್ಲಿ ಲಯನ್ಸ್ ಶಾಲೆಯ ಅದಿರ್ಕಾ, ಕಾಲ್ಸ್ನ ಹಿತಾ ಅಕ್ಕಮ್ಮ ಮತ್ತು ಲಯನ್ಸ್ನ ಬಿ.ಪಿ. ರಕ್ಷಾ, ೩ನೇ ಬಹುಮಾನವನ್ನು ಕಾಲ್ಸ್ ಶಾಲೆಯ ಕೆ. ತನ್ವಿ ಉತ್ತಪ್ಪ, ಕಾಪ್ಸ್ನ ಎನ್.ಪಿ. ಪ್ರಥಮ್ ಕಿರಣ್ ಪಡೆದುಕೊಂಡರು. ಇಂಗ್ಲೀಷ್ ಭಾಷಣದಲ್ಲಿ ಲಯನ್ಸ್ ಶಾಲೆಯ ಭಾಷಿತಾ, ದೀತ್ಯಾ, ಕಾಪ್ಸ್ ಶಾಲೆಯ ಎಂ. ನಿಯತಿ ಕಾಳಯ್ಯ ಮತ್ತು ಕಾಲ್ಸ್ ಶಾಲೆಯ ಮೀಷಾ ಮುತ್ತಮ್ಮ ಹಾಗೂ ಸಾತ್ವಿಕ್ ತಿಮ್ಮಯ್ಯ ಪಡೆದುಕೊಂಡರು. ಕನ್ನಡ ಭಾಷಣದಲ್ಲಿ ಕಾಪ್ಸ್ನ ಎಸ್.ಆರ್. ನಿಕ್ಷೇಪ್, ಕೆ.ಜಿ. ಕಾಶಿಶ್ ಕಾವೇರಮ್ಮ, ಸಿಐಪಿಯುಸಿ ಕಾಲೇಜಿನ ಕಾಂಚನ್ ಕಾಮಾಕ್ಷಿ ಮತ್ತು ವಿರಾಜಪೇಟೆ ಕಾವೇರಿ ಕಾಲೇಜಿನ ಎನ್. ನೌಷದ್, ಇಂಗ್ಲೀಷ್ ವಿಭಾಗದಲ್ಲಿ ಕಾಪ್ಸ್ ಶಾಲೆಯ ಕೆ.ಪಿ. ನಿಭವ್ ನಂಜಪ್ಪ, ಸಿಐಪಿಯು ಕಾಲೇಜಿನ ಪಿ.ಎ. ಪ್ರತ್ಯಕ್ಷ ಮತ್ತು ಕಾಲ್ಸ್ನ ದರ್ಶನ್ ದೇವಯ್ಯ, ಸಿಐಪಿಯು ಕಾಲೇಜಿನ ಯಾನಾ ಸೀತಮ್ಮ ಮತ್ತು ವಿದ್ಯಾನಿಕೇತನ ಕಾಲೇಜಿನ ತಂಗಮ್ಮ ಪಡೆದುಕೊಂಡರು. ದೇಶಭಕ್ತಿಗೀತೆಯಲ್ಲಿ ಎಸ್‌ಎಂಎಸ್ ಕಾಲೇಜಿನ ಪಿ.ಆರ್. ಲಕ್ಷಾ ಚೋಂದಮ್ಮ, ಕಾಪ್ಸ್ ಶಾಲೆಯ ಎಲ್. ತನುಶ್ರೀ ಮತ್ತು ಗ್ರೀಷ್ಮಾ ಪ್ರಭುಸ್ವಾಮಿ ಹಾಗೂ ವೀರಾಜಪೇಟೆ ಸರ್ಕಾರಿ ಕಾಲೇಜಿನ ಎಂ.ಟಿ. ಫಿಜಾ ಪಡೆದುಕೊಂಡರು.