ಸುಂಟಿಕೊಪ್ಪ, ಆ. ೭: ಇಂಗ್ಲೇAಡ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ೨೨ನೇ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ೨-೧ ಗೋಲುಗಳಿಂz ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸುವುದರ ಮೂಲಕ ಕಂಚಿನ ಪದಕ ಪಡೆದುಕೊಂಡಿದೆ.

ಕAಬಿಬಾಣೆ ಗ್ರಾಮದ ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿ ಅಂಕಿತಾ ಸುರೇಶ್ ಅವರು ಭಾರತ ತಂಡದ ಕ್ರೀಡಾಪಟುಗಳಿಗೆ ಸಹಾಯಕ ಕೋಚ್ ಆಗಿ ತರಬೇತಿ ನೀಡಿದ್ದರು. ಸುಂಟಿಕೊಪ್ಪದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಹೊನ್ನಂಪಾಡಿ ಸುರೇಶ್ ಕುಶಾಲಪ್ಪ,

(ಮೊದಲ ಪುಟದಿಂದ) ಬಿ.ಕೆ. ಪ್ರಶಾಂತ್, ಮನು ಅಚ್ಚಮ್ಮಯ್ಯ, ಪ್ರೀತಮ್ ಪ್ರಭಾಕರ್, ಹರ್ಷಿತ್, ನಂದಕುಮಾರ್, ನಿಶಾಂತ್ ಶೇಷಪ್ಪ, ಕೆ. ಸುಜೀತ್, ಅಕ್ಷಿತ್ ಪೂಜಾರಿ, ಪರ್ಲಕೋಟಿ ನಂದಕುಮಾರ್ ಹಾಜರಿದ್ದರು.