ಕುಶಾಲನಗರ, ಆ. ೭: ಚೆಟ್ಟಳ್ಳಿಯ ಪತ್ರಿಕಾ ವಿತರಕಿ ಪಿ. ಧನಲಕ್ಷಿö್ಮ ಅವರನ್ನು ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಚೆಟ್ಟಳ್ಳಿಯ ಕೇಂದ್ರೀಯ ಪ್ರಾಯೋಗಿಕ ತೋಟಗಾರಿಕಾ ಕೇಂದ್ರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ, ತಾಲೂಕು ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮತ್ತಿತರರು ಸನ್ಮಾನಿಸಿದರು.
ಇದೇ ಸಂದರ್ಭ ಮಹಿಳಾ ಪತ್ರಕರ್ತರು ಮತ್ತು ಪತ್ರಕರ್ತರ ಕುಟುಂಬ ಸದಸ್ಯರಿಗೆ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವರಮಹಾಲಕ್ಷಿö್ಮ ಹಬ್ಬದ ಪ್ರಯುಕ್ತ ಸೀರೆಯನ್ನು ಕೊಡುಗೆಯಾಗಿ ನೀಡಲಾಯಿತು.