ಕೂಡಿಗೆ. ಆ. ೭: ತೋಟಗಾರಿಕೆ ಇಲಾಖೆಯಲ್ಲಿ ಬೆಳೆಸಲಾದ ಕಾಳುಮೆಣಸು ಗಿಡಗಳನ್ನು ಇಲಾಖೆಯ ದರದಲ್ಲಿ ಕೂಡಿಗೆ ಮತ್ತು ಬಳಗುಂದ ತೋಟಗಾರಿಕಾ ಕ್ಷೇತ್ರದಲ್ಲಿ ತಾ. ೮ ರಿಂದ ವಿತರಣೆ ಮಾಡಲಾಗುವುದು.

ಒಂದು ಕಾಳುಮೆಣಸು ಕಡ್ಡಿಗೆ ರೂ. ೫.೫೦ ರಂತೆ ಮತ್ತು ಎಸ್‌ಸಿ, ಎಸ್‌ಟಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ. ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.