ಮಡಿಕೇರಿ, ಆ. ೭ : ಅಗ್ನಿಪಥ್ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಬಂಟ್ಸ್ ಅಸೋಸಿಯೇಷನ್ ಕೊಡಗು ವತಿಯಿಂದ ಹಮ್ಮಿಕೊಂಡಿದ್ದ ‘ಅಗ್ನಿವೀರ್-೨೦೨೨’ ರಸ್ತೆ ಓಟ ಸ್ಪರ್ಧೆ ಭಾನುವಾರ ಮಡಿಕೇರಿಯಲ್ಲಿ ನಡೆಯಿತು.
ಮೂರು ಕಿ.ಮೀ. ರಸ್ತೆ ಓಟ ಸ್ಪರ್ಧೆಯಲ್ಲಿ ಕೊಡ್ಲಿಪೇಟೆಯ ಬಿ.ಪಿ. ಮನು, ಭಾಗಮಂಡಲದ ಎನ್.ಎಚ್. ಮುರಳೀಧರ್, ಸೋಮವಾರಪೇಟೆಯ ಬಿ.ಪಿ. ಯಶ್ವಂತ್, ಮದೆನಾಡುವಿನ ಎಂ.ಎನ್. ಪವನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ತಿಶನ್, ಭಾಗಮಂಡಲದ ಕೆ.ಕೆ. ಯತಿನ್, ಸೂರ್ಲಬ್ಬಿಯ ಐ.ಆರ್. ಮುತ್ತಣ್ಣ, ಟಿ. ಶೆಟ್ಟಿಗೇರಿಯ ಮೋನಿಶ್ ಮಂದಣ್ಣ ದ್ವಿತೀಯ, ಸೂರ್ಲಬ್ಬಿಯ ಎ.ಡಿ. ವಸಂತ್, ಟಿ.ಯು. ಗಣಪತಿ, ರೋಮಾಂಚ್, ಮದೆನಾಡಿನ ಹೇಮಂತ್ ತೃತೀಯ ಸ್ಥಾನ ಪಡೆದರು.
ಪುಲ್ ಅಪ್ಸ್ ಸ್ಪರ್ಧೆಯಲ್ಲಿ ಬಿ.ಪಿ. ಮನು (ಪ್ರ). ದೀಪು ಗಣಪತಿ (ದ್ವಿ), ಐ.ಆರ್. ಮುತ್ತಣ್ಣ (ತೃ) ಬಹುಮಾನ ಗಳಿಸಿದರು.
ಬಹುಮಾನ ವಿತರಣೆ : ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಡಿಕೇರಿಯ ಬಾಲಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಯುವ ಪ್ರತಿಭೆಗಳ ಕ್ರೀಡಾ ಚಟುವಟಿಕೆಗಳಿಗೆ ನೆರವಾಗುವಂಥಹ ಉತ್ತಮ ಗುಣಮಟ್ಟದ ಕ್ರೀಡಾ ಧಿರಿಸನ್ನು ಬಹುಮಾನವಾಗಿ ನೀಡಿದ್ದು ವಿಶೇಷವಾಗಿತ್ತು. ಇದರೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಸ್ಪರ್ಧಿಗೂ ಶೂ ಅನ್ನು ಉಡುಗೊರೆಯಾಗಿ ನೀಡಲಾಯಿತು. ಜಿಲ್ಲೆಯ ವಿವಿಧೆೆಡೆಯ ೧೦೪ ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಾಲಭವನದಲ್ಲಿ ಅಸೋಸಿಯೇಷನ್ ಅಧ್ಯಕ್ಷ ವಸಂತ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ನಿವೃತ್ತ ಸೇನಾಧಿಕಾರಿ ಮೇ. ಡಾ. ಕುಶ್ವಂತ್ ಕೋಳಿಬೈಲು ಮಾತನಾಡಿ, ಅಗ್ನಿಪಥ್ ಯೋಜನೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ನೆರವಾಗಲಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿಗಳಾದ ಐತಪ್ಪ ರೈ, ಜಯಪ್ರಕಾಶ್ ರೈ, ಮಡಿಕೇರಿ ನಗರಸಭೆ ಸದಸ್ಯ ಅರುಣ್ ಶೆಟ್ಟಿ, ಹಿರಿಯರಾದ ಕೊರಗಪ್ಪ ರೈ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಇದೇ ವೇಳೆ ಅಸೋಸಿಯೇಷನ್ ಪದಾಧಿಕಾರಿಗಳು, ನಿರ್ದೇಶಕರಿಗೆ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ತ್ರಿವರ್ಣ ಧ್ವಜ ಹಸ್ತಾಂತರಿಸಲಾಯಿತು. ಬಾಲಕೃಷ್ಣ ರೈ ಸ್ವಾಗತಿಸಿದರು. ಹಿತಶ್ರೀ ಯೋಗೇಶ್ ಶೆಟ್ಟಿ ಪ್ರಾರ್ಥಿಸಿದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು. ಚಂದ್ರಶೇಖರ್ ರೈ ವಂದಿಸಿದರು.
ಚಾಲನೆ : ಕ್ಲಬ್ ಮಹೀಂದ್ರ ಮುಂಭಾಗದಿAದ ಶುರುವಾದ ಸ್ಪರ್ಧೆಗೆ ಉದ್ಯಮಿಗಳಾದ ರವೀಂದ್ರ ರೈ, ಐತಪ್ಪ ರೈ, ಮಡಿಕೇರಿ ನಗರಸಭೆ ಸದಸ್ಯ ಅರುಣ್ ಶೆಟ್ಟಿ ಚಾಲನೆ ನೀಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಜಂಕ್ಷನ್ ಬಳಿ ಸ್ಪರ್ಧೆ ಕೊನೆಗೊಂಡಿತು.