ಕೂಡಿಗೆ, ಆ. ೭: ಕೂಡಿಗೆ ಕೃಷಿ ಕ್ಷೇತ್ರದ ಅವರಣದಲ್ಲಿ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ, ಈಗಾಗಲೇ ರಾಜ್ಯ ಸರ್ಕಾರದ ವತಿಯಿಂದ ಇಲಾಖೆಯ ಮೂಲಕ ಬಿಡುಗಡೆಯಾಗಿರುವ ೮೦ ಲಕ್ಷ ರೂ ಹಣದಲ್ಲಿ ಶಾಲೆಯ ದುರಸ್ತಿ ಕಾರ್ಯದ ಕಾಮಗಾರಿಯನ್ನು ನಡೆಸುವ ಬಗ್ಗೆ ಸಂಬAಧಿಸಿದ ಇಂಜಿನಿಯರ್ ಮತ್ತು ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದರು.

ಮೊದಲು ಇಲಾಖೆಯ ವತಿಯಿಂದ ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಯಾವ ಯಾವ ಕಾಮಗಾರಿಗಳ ಪಟ್ಟಿಗೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಕೆಆರ್‌ಡಿಎಲ್ ಇಂಜಿನಿಯರ್‌ಗಳಿAದ ಮಾಹಿತಿಯನ್ನು ಸಂಗ್ರಹಿಸಿ ನಂತರ ಕ್ರೀಡಾ ಶಾಲೆಯ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯದ ದುರಸ್ತಿ, ಶಾಲೆಗೆ ಬಣ್ಣದ ವ್ಯವಸ್ಥೆ, ಮತ್ತು ಶಾಲೆಯ ಮುಂಭಾಗದ ಕಾಂಕ್ರೀಟೀಕರಣ, ಪಿಯುಸಿ ವಿದ್ಯಾರ್ಥಿಗಳು ವಸತಿ ನಿಲಯ ದುರಸ್ತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಬೃಹತ್ ಪ್ರಮಾಣದ ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಶಾಲೆಗೆ ಪ್ರಮುಖವಾಗಿ ಆಗಬೇಕಾದ ದುರಸ್ತಿ ಕೆಲಸವನ್ನು ಕೈಗೊಳ್ಳುವ ಬಗ್ಗೆ ಸ್ಧಳ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸುವಂತೆ ಸೂಚನೆ ನೀಡಿದರು.

ನಂತರ ಶಾಸಕರು ಕ್ರೀಡಾ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕ್ರೀಡೆ ಮತ್ತು ತರಬೇತಿ ಹಾಗೂ ಪಾಠಪ್ರವಚನ ಬಗ್ಗೆ ಶಾಲೆಯ ವ್ಯವಸ್ಥೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದರು.

ನಂತರ ಪ್ರತ್ಯೇಕವಾಗಿ ಕ್ರೀಡಾ ಶಾಲೆ ಮುಖ್ಯೋಪಾಧ್ಯಾಯ ಸೇರಿದಂತೆ ಶಿಕ್ಷಕರ ವೃಂದ ಮತ್ತು ಕ್ರೀಡಾ ತರಬೇತುದಾರ ಮತ್ತು ವಸತಿ ನಿಲಯದ ಮೇಲ್ವಿಚಾರಕ ಸೇರಿದಂತೆ ಎಲ್ಲಾ ಸಿಬ್ಬಂದಿಗಳೊAದಿಗೆ ಶಾಲೆಯ ಪ್ರಗತಿಯ ಬಗ್ಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಜಿಲ್ಲಾ ಬಿಜೆಪಿ ಎಸ್‌ಟಿ ಘಟಕದ ಕಾರ್ಯದರ್ಶಿ ಪ್ರಭಾಕರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್, ಕುಮಾರಸ್ವಾಮಿ, ಶಾಲೆಯ ಆಡಳಿತಾಧಿಕಾರಿ ಎನ್.ಡಿ. ಜಯರಾಮ, ಮುಖ್ಯೋಪಾಧ್ಯಾಯ ದೇವ್‌ಕುಮಾರ್ ಹಾಕಿ ತರಬೇತಿದಾರ ಬಿ.ಎಸ್. ವೆಂಕಟೇಶ್ ಸೇರಿದಂತೆ ವಿವಿಧ ವಿಭಾಗ ತರಬೇತುದಾರಾದ ಮಂಜುನಾಥ, ಸುರೇಶ್, ದಿನಾಮಣಿ ಹಾಜರಿದ್ದರು.