ಕುಶಾಲನಗರ, ಆ. ೦೩: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ವೇಳೆ ಭಾರಿ ಪ್ರಮಾಣದ ಮಳೆ ಸುರಿದಿದೆ.
ಸಮೀಪದ ಬೈಲಕುಪ್ಪೆ ಟಿಬೆಟಿಯನ್ ನಿರಾಶ್ರಿತ ಶಿಬಿರದ ವ್ಯಾಪ್ತಿಯಲ್ಲಿ ನಿರಂತರ ಮಳೆಯಾದ ಹಿನ್ನೆಲೆಯಲ್ಲಿ ಕ್ಯಾಂಪಿನ ಕೆಲವು ಕಡೆ ತಡೆಗೋಡೆಗಳು ಕುಸಿದಿವೆ. ಬೆಳಕು ಒಂದನೇ ಕ್ಯಾಂಪು ಬಳಿ ಕೆರೆಯೊಂದರ ಕೋಡಿ ಹರಿದು ಕೆಲವು ಮನೆಗಳಿಗೆ ನೀರು ಹರಿದು ಅಲ್ಪ ಪ್ರಮಾಣದ ಹಾನಿಯಾದ ಬಗ್ಗೆ ವರದಿಯಾಗಿದೆ. ಕುಶಾಲನಗರದ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಕೂಡ ತೊಂದರೆ ಉಂಟಾದ ದೃಶ್ಯ ಕೆಲವು ಬಡಾವಣೆಗಳಲ್ಲಿ ಕಂಡುಬAತು.