ಗೋಣಿಕೊಪ್ಪಲು, ಆ. ೩: ಗ್ರಾಮೀಣ ಭಾಗದಲ್ಲಿರುವ ಬಹುತೇಕ ರೈತರಿಗೆ ನಿಗದಿತ ಸಮಯದಲ್ಲಿ ಸೆಸ್ಕ್ ಇಲಾಖೆ ನೀಡುವ ವಿದ್ಯುತ್ ಬಿಲ್ ಸರಿಯಾಗಿ ತಲುಪುತ್ತಿಲ್ಲ. ಪರಿಣಾಮ ಗ್ರಾಮೀಣ ಭಾಗದಲ್ಲಿರುವ ರೈತರಿಗೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಬರುತ್ತಿದೆ. ಇದರಿಂದ ರೈತರು ಕಷ್ಟದಲ್ಲಿ ಸಿಲುಕಿದ್ದಾರೆ. ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ರೈತ ಸಂಘ ಸೆಸ್ಕ್ ಅಧಿಕಾರಿಗಳನ್ನು ಒತ್ತಾಯಿಸಿದೆ.
ವೀರಾಜಪೇಟೆ ಸೆಸ್ಕ್ ಉಪ ವಿಭಾಗಕ್ಕೆ ಸೇರಿದ ಬಿ. ಶೆಟ್ಟಿಗೇರಿ, ಕೊಂಗಣ, ಕುಂದ, ಸಿದ್ದಾಪುರ, ಬೇಟೋಳಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ವಾಸಿಸುತ್ತಿರುವ ರೈತರಿಗೆ ವಿದ್ಯುತ್ ಉಪಯೋಗಿಸದಿದ್ದರು ಸಾವಿರಗಟ್ಟಲೆ ವಿದ್ಯುತ್ ಬಿಲ್ ಬರುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಬಗೆಹರಿಸಲು ಸೆಸ್ಕ್ ಅಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ವೀರಾಜಪೇಟೆಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ರೈತರ ಹಾಗೂ ವಿದ್ಯುತ್ ಗ್ರಾಹಕರ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಗ್ರಾಮೀಣ ಭಾಗದಲ್ಲಿ ರೈತರ ಮನೆಗಳು ದೂರ ದೂರ ಇರುವ ಕಾರಣ ವಿದ್ಯುತ್ ಬಿಲ್ ನೀಡಲು ಸೆಸ್ಕ್ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಆಗಮಿಸುತ್ತಿಲ್ಲ. ಇದರಿಂದಾಗಿ ರೈತರ ವಿದ್ಯುತ್ ಬಿಲ್ಗಳು ನಿಗದಿತ ಸಮಯದಲ್ಲಿ ಸಂದಾಯ ಮಾಡಲು ಸಾಧ್ಯವಾಗುತ್ತಿಲ್ಲ. ಇಲಾಖೆಯು ಅನಾವಶ್ಯಕವಾಗಿ ವಿದ್ಯುತ್ ಬಿಲ್ಗೆ ಬಡ್ಡಿ ವಿಧಿಸುತ್ತಿದೆ. ವಿದ್ಯುತ್ ಉಪಯೋಗಿಸದಿದ್ದರು ಲೈನ್ಮನೆ ಗಳಿಗೆ, ೧೦ ಹೆಚ್.ಪಿ. ಮೋಟಾರ್ಗೆ ಸಾವಿರಾರು ರೂಪಾಯಿ ಬಿಲ್ ಬಾಕಿ ಇದೆ ಎಂದು ಸಿಬ್ಬಂದಿಗಳು ಆಗೊಮ್ಮೆ ಈಗೊಮ್ಮೆ ಬಿಲ್ ನೀಡಿ ಹೋಗುತ್ತಿ ದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರೈತ ಸಂಘದ ಬಿ.ಶೆಟ್ಟಿಗೇರಿ ಭಾಗದ ಹಿರಿಯ ಮುಖಂಡರಾದ ಕೊಲ್ಲೀರ ಬೋಪಣ್ಣ, ಉಮೇಶ್ ಕೇಚಮಯ್ಯ, ಚೇರಂಡ ಜಗನ್ ಹಾಗೂ ತೀತರಮಾಡ ಸದಾ, ಸಭೆಯಲ್ಲಿದ್ದ ಹಿರಿಯ ಅಧಿಕಾರಿ ಎಇಇ ಸುರೇಶ್ ಅವರನ್ನು ಪ್ರಶ್ನಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮನುಸೋಮಯ್ಯ ಈ ಬಗ್ಗೆ ಅಧಿಕಾರಿ ಗಳು ಸ್ಪಷ್ಟ ಉತ್ತರ ನೀಡುವಂತೆ ತಿಳಿಸಿದರು. ಈ ವೇಳೆ ಸಭೆಯಲ್ಲಿದ್ದ ವಿದ್ಯುತ್ ಬಿಲ್ ಸಂಬAಧಿಸಿದ ಇಂಜಿನಿಯರ್ ಶ್ರೀಕಾಂತ್ ಮಾತನಾಡಿ, ಇಲಾಖೆ ವತಿಯಿಂದ ನೇಮಕ ಮಾಡಿರುವ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಗ್ರಾಹಕರಿಗೆ ಬಿಲ್ ನೀಡುತ್ತಿಲ್ಲ. ಈ ಬಗ್ಗೆ ಸಿಬ್ಬಂದಿ ಗಳಿಗೆ ನೋಟೀಸ್ ನೀಡಲಾಗಿದೆ. ರೈತರ ಮನೆಗಳಿಗೆ ತೆರಳದೆ ವಿದ್ಯುತ್ ಬಿಲ್ಲನ್ನು ಕಂಪ್ಯೂಟರ್ಗೆ ಅಪ್ಲೋಡ್ ಮಾಡುತ್ತಿ ರುವುದು ತನಿಖೆಯಿಂದ ಹೊರ ಬಂದಿದೆ. ಹೀಗಾಗಿ ರೈತರ ವಿದ್ಯುತ್ ಬಿಲ್ನಲ್ಲಿ ವ್ಯತ್ಯಾಸವಾಗಿರು ವುದನ್ನು ಕಚೇರಿಯಲ್ಲಿ ಸರಿಪಡಿಸಿ ಕೊಡಲು ಕ್ರಮ ಕೈಗೊಳ್ಳುತ್ತೇವೆ, ಮುಂದೆ ಇಂತಹ ಸಮಸ್ಯೆ ಆಗದ ರೀತಿಯಲ್ಲಿ ಎಚ್ಚರ ವಹಿಸುತ್ತೇವೆ ಎಂದು ಸಮಜಾಯಿಷಿಕೆ ನೀಡಿದರು. ಈ ವೇಳೆ ಮಾತನಾಡಿದ ಕೊಲ್ಲೀರ ಬೋಪಣ್ಣ ಗ್ರಾಮೀಣ ಭಾಗದ ಮನೆಗಳು ಹೊರಗಿನಿಂದ ಬರುವ ವಿದ್ಯುತ್ ಬಿಲ್ ಕಲೆಕ್ಟರ್ಗಳಿಗೆ ತಿಳಿದಿರುವುದಿಲ್ಲ. ಅಲ್ಲದೆ ಇವರಿಗೆ ನಿಗದಿತ ಸಮಯದಲ್ಲಿ ಇಲಾಖೆಯಿಂದ ವೇತನ ಲಭಿಸುತ್ತಿಲ್ಲ. ಹೀಗಾಗಿ ಯುವಕರು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಆಯಾ ಪಂಚಾಯಿತಿ ವ್ಯಾಪ್ತಿಯ ಯುವಕ, ಯುವತಿಯರನ್ನು ಸೆಸ್ಕ್ ಇಲಾಖೆಯ ವಿದ್ಯುತ್ ಬಿಲ್ ಕಲೆಕ್ಟರ್ಗಳನ್ನಾಗಿ ನೇಮಿಸುವಂತೆ ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಹಿರಿಯ ಅಧಿಕಾರಿಗಳೊಂದಿಗೆ ಈ ವಿಷಯ ವನ್ನು ಪ್ರಸ್ತಾಪಿಸಲಾಗುತ್ತದೆ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ವಿದ್ಯುತ್ ಮೀಟರ್ನಲ್ಲಿ ಸಮಸ್ಯೆ ಕಂಡು ಬಂದಾಗ, ಹೆಚ್ಚಿನ ವಿದ್ಯುತ್ ಬಿಲ್ ಕಾಣಿಸಿಕೊಂಡ ಸಂದರ್ಭ ಬಿಲ್ ಕಲೆಕ್ಟರ್ಗಳು ಇಂತಹ ಪ್ರಕರಣಗಳನ್ನು ಇಲಾಖೆಯ ಕಡತಗಳಲ್ಲಿ ನಮೂದಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಮುಂದಿನ ಬಿಲ್ಗಳಲ್ಲಿ ತೊಂದರೆ ಆಗದಂತೆ ಕಚೇರಿಯಲ್ಲಿರುವ ಹಿರಿಯ ಲೆಕ್ಕಾಧಿಕಾರಿಗಳು ಇವುಗಳನ್ನು ಬಗೆಹರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಅನಾವಶ್ಯಕವಾಗಿ ರೈತರಿಗೆ ಹೆಚ್ಚಿನ ವಿದ್ಯುತ್ ಬಿಲ್ ಬರುವುದು ಕಡಿವಾಣ ಹಾಕಬಹುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಶುಭಾಶ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಬಿ. ಶೆಟ್ಟಿಗೇರಿ ಮುಖಂಡರಾದ ಚೇರಂಡ ಜಗನ್ ಮಾತನಾಡಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಸಭೆಯಲ್ಲಿ ವಿವಿಧ ಭಾಗದ ರೈತ ಮುಖಂಡರಾದ ತೀತಿಮಾಡ ಬೋಪಣ್ಣ, ಗಿರೀಶ್, ಮಮತ, ಚಂದುರ ರೋಹಿತ್, ತೀತಿಮಾಡ ಸದಾ, ಚೇರಂಡ ರೋಶನ್, ಕೊಲ್ಲೀರ ಪೂಣಚ್ಚ, ಚೆಂದುರ ರಾಜ, ಸುಗುಣ, ಮುಡಿಯಂಡ ದರ್ಶನ್, ಸಿ.ಎಸ್. ಈರಪ್ಪ, ಜೀವನ್, ಚೆರಿಯಂಡ ಡಾಲು, ಧನು, ಬೇಟೋಳಿಯ ಶೈಲೇಶ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.