ಚೆಯ್ಯಂಡಾಣೆ, ಆ. ೨: ನರಿಯಂದಡ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಬೆಳೆÀಗಳನ್ನು ನಾಶಪಡಿಸುತ್ತಿವೆ.ರೈತರು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಈ ವ್ಯಾಪ್ತಿಯಲ್ಲಿ ಹಗಲಿನಲ್ಲೂ ಕೂಡ ಆನೆಗಳು ಸಂಚರಿಸುತ್ತಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ತೋಟಗಳಿಗೆ ತೆರಳುವ ಕಾರ್ಮಿಕರು, ಗ್ರಾಮಸ್ಥರು ಓಡಾಡಲು ಭಯಪಡುವಂತಾಗಿದೆ.

ಪAಚಾಯಿತಿ ವ್ಯಾಪ್ತಿಯ ನರಿಯಂದಡ, ಕೊಕೇರಿ, ಚೇಲವಾರ, ಎಡಪಾಲ, ಮರಂದೋಡ, ಕರಡ ಗ್ರಾಮಗಳ ಕೃಷಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ದಿನನಿತ್ಯ ಅಪಾರ ಪ್ರಮಾಣದ ಫಸಲನ್ನು ನಾಶಪಡಿಸುತ್ತಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ.

೧೦ ರಿಂದ ೧೫ ಕಾಡಾನೆಗಳು ಬೀಡುಬಿಟ್ಟಿದ್ದು. ಪದೇ ಪದೇ ಕಾಡಾನೆಗಳ ಉಪಟಳದಿಂದ ಕಾಫಿ, ಅಡಿಕೆ, ಬಾಳೆ, ಒಳ್ಳೆ ಮೆಣಸು ಹಾಗೂ ಪೈರು ಬಂದ ಗದ್ದೆಗಳಿಗೆ ಹಾನಿಯಾಗಿದ್ದು. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದಲ್ಲದೆ ಈ ಭಾಗದಲ್ಲಿ ಸರಿ ಸುಮಾರು ೫ ಕ್ಕೂ ಹೆಚ್ಚು ಮನೆಯ ಗೇಟ್‌ಗಳನ್ನು ಹಾನಿಪಡಿಸಿದೆ. ಅರಣ್ಯ ಇಲಾಖೆ ಕೂಡಲೇ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿ ಈ ಭಾಗದ ಗ್ರಾಮಸ್ಥರ ತೊಂದರೆಯನ್ನು ನೀಗಿಸಿ ಕಾಡಾನೆ ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಪರಿಹಾರ ಮೊತ್ತವನ್ನು ಗಿಡಗಳ ಬೆಳವಣಿಗೆ ಆಧಾರದಲ್ಲಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.