ಮಡಿಕೇರಿ, ಆ. ೨: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ವತಿಯಿಂದ ಕಕ್ಕಡ ಪದಿನೆಟ್ಟ್ ಕಾರ್ಯವನ್ನು ಇಂದು ಸಂಭ್ರಮದಿAದ ಆಚರಿಸಲಾಯಿತು. ನಗರದ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ ಆವರಣದಲ್ಲಿ ಆಚರಣೆ ನಡೆಯಿತು.
ಆರಂಭದಲ್ಲಿ ದೇವರನ್ನು ಪ್ರಾರ್ಥಿಸಿ, ಅಕ್ಕಿ ಹಾಕುವದರೊಂದಿಗೆ ಕೋವಿ ಕತ್ತಿ ಸಹಿತವಾಗಿ ಭತ್ತದ ಪೈರಿನೊಂದಿಗೆ ಮೆರವಣಿಗೆಯಲ್ಲಿ ಗದ್ದೆಗೆ ತೆರಳಿ ಸಾಮೂಹಿಕವಾಗಿ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಾಟಿ ಕಾರ್ಯ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ೨೭ನೆಯ ವರ್ಷದ ಸಾರ್ವತ್ರಿಕ ಕಕ್ಕಡ ಆಚರಣೆಯ ಬಗ್ಗೆ ನಾಚಪ್ಪ ಅವರು ವಿವರಿಸಿದರು. ಕೊಡವ ಲ್ಯಾಂಡ್‌ಗೆ ಸ್ವಾಯತ್ತತೆ, ಎಸ್.ಟಿ. ಸ್ಥಾನಮಾನ, ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವುದು, ಕೋವಿಹಕ್ಕು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಚರ್ಚಿಸಿ ಈ ಬಗ್ಗೆ ಎಲ್ಲೂ ದಾರಿ ತಪ್ಪದೆ ನಿರಂತರವಾಗಿ ಹೋರಾಟ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಯಿತು.
ಜನಾಂಗದ ಬೇಕು - ಬೇಡಿಕೆಗಳಿಗೆ ಸಾಂವಿಧಾನಿಕ ಭದ್ರತೆ ಅಗತ್ಯ ಈ ನಿಟ್ಟಿನಲ್ಲಿ ಜನಾಂಗದವರು ಸಂವಿಧಾನದಲ್ಲಿ ಅಡಕವಾಗಿರುವ ವಿಚಾರಗಳನ್ನು ಅರಿತುಕೊಳ್ಳಬೇಕೆಂದು ನಾಚಪ್ಪ ಹೇಳಿದರು. ಈ ಆಚರಣೆ ಕೊಡವರ ಜನಪದೀಯ ಆಚರಣೆಗಳಲ್ಲಿ ಒಂದಾಗಿರುವುದಾಗಿ ಅವರು ವಿವರಿಸಿದರು.
ವೇದಿಕೆಯಲ್ಲಿ ಬಾಚಮಂಡ ರಾಜಾಪೂವಣ್ಣ, ಪಟ್ಟಮಾಡ ಕುಶ, ಬೊಟ್ಟಂಗಡ ಗಿರೀಶ್, ಪುಲ್ಲೆರ ಸ್ವಾತಿ, ಕಲಿಯಂಡ ಮೀನಾ, ಪಟ್ಟಮಾಡ ಲಲಿತಾ ಗಣಪತಿ ಹಾಜರಿದ್ದರು. ಈ ಸಂದರ್ಭ ಬೇಡಿಕೆಗಳ ನಿರಂತರ ಹೋರಾಟದ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಲೆ| ಕ| ಬಿ.ಎಂ. ಪಾರ್ವತಿ, ಅಜ್ಜಿನಿಕಂಡ ಇನಿತ್ ಮಾಚಯ್ಯ, ಅರೆಯಡ ಸವಿತ, ನಂದಿನೆರವAಡ ನಿಶಾ, ವಿಜು, ಅಜ್ಜಿಕುಟ್ಟಿರ ಲೋಕೇಶ್, ಚೆಂಬಾAಡ ಜನತ್, ಪುಟ್ಟಿಚಂಡ ಡಾನ್ ಸೇರಿದಂತೆ ಸಿಎನ್‌ಸಿಯ ಬೆಂಬಲಿಗರು, ಪ್ರಮುಖರು ಪಾಲ್ಗೊಂಡಿದ್ದರು.