ಕರಿಕೆ, ಆ. ೧: ಮಂಕಿ ಪಾಕ್ಸ್ ಎಂಬ ಸಾಂಕ್ರಾಮಿಕ ರೋಗ ಕೇರಳ ಜಿಲ್ಲೆಯಲ್ಲಿ ಕಾಣಿಸಿಗೊಂಡ ಪರಿಣಾಮ ಕೇರಳದ ಗಡಿ ಗ್ರಾಮ ಕರಿಕೆ ಚೆಂಬೇರಿ ಚೆಕ್ ಪೋಸ್ಟ್ನಲ್ಲಿ ಆರೋಗ್ಯ ಇಲಾಖೆ ಹಗಲು ಪಾಳಿಯಲ್ಲಿ ಓರ್ವ ಆರೋಗ್ಯ ನಿರೀಕ್ಷಕರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿದೆ. ಪೊಲೀಸ್ ಇಲಾಖೆ ಸಹಕಾರದಿಂದ ಕೇರಳದಿಂದ ಬರುವ ವಾಹನಗಳ ತಪಾಸಣೆ ನಡೆಸುತ್ತಿದೆ. ಆದರೆ ರಾತ್ರಿ ವೇಳೆ ಕರ್ತವ್ಯಕ್ಕೆ ಯಾವುದೇ ಸಿಬ್ಬಂದಿ ನಿಯೋಜನೆ ಮಾಡಿರುವುದಿಲ್ಲ. ಈ ಬಗ್ಗೆ ರಾತ್ರಿ ವೈರಸ್ ಗಡಿ ಪ್ರವೇಶ ಮಾಡುವುದಿಲ್ಲವೇ ಎಂದು ಆರೋಗ್ಯ ಇಲಾಖೆಯನ್ನು ಗ್ರಾಮಸ್ಥರು ಪ್ರಶ್ನೆ ಮಾಡಿದ್ದು, ಈ ಬಗ್ಗೆ ರಾತ್ರಿ ಪಾಳಿಯಲ್ಲೂ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ. ಕೆಲದಿನಗಳ ಹಿಂದೆ ಈ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆದಿತ್ತು.

-ಸುಧೀರ್ ಹೊದ್ದೆಟ್ಟಿ