ಮಡಿಕೇರಿ, ಆ. ೧: ಮಡಿಕೇರಿ ಹೊರ ವಲಯದಲ್ಲಿರುವ ಪ್ರವಾಸಿ ತಾಣ ಅಬ್ಬಿಫಾಲ್ಸ್ ವೀಕ್ಷಣೆಗೆ ಶುಲ್ಕ ವಿಧಿಸಲಾಗುತ್ತಿದೆ...!
ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ, ಖಾಸಗಿ ಜಾಗದಲ್ಲಿರುವ ಅಬ್ಬಿಫಾಲ್ಸ್ ವೀಕ್ಷಣೆಗೆ ಇಂದಿನಿAದ ಶುಲ್ಕ ವಿಧಿಸಲಾಗುತ್ತಿದೆ. ಗ್ರಾ.ಪಂ. ವತಿಯಿಂದ ಓರ್ವರಿಗೆ ರೂ.೧೦ರಂತೆ ಶುಲ್ಕ ನೀಡಬೇಕಾಗಿದೆ.
ಈಗಾಗಲೇ ಅಬ್ಬಿಫಾಲ್ಸ್ ಬಳಿ ವಾಹನ ನಿಲುಗಡೆಗೆ ಟೆಂಡರ್ ಮೂಲಕ ಶುಲ್ಕ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ. ಇದೀಗ ಯಾವುದೇ ಮಾಹಿತಿ ನೀಡದೆ ವೀಕ್ಷಣೆಗೂ ಶುಲ್ಕ ವಿಧಿಸುತ್ತಿದ್ದು, ಪ್ರವಾಸಿಗರು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಾವುದೇ ಮಾಹಿತಿ, ಟೆಂಡರ್ ಆಹ್ವಾನಿಸದೇ ನೇರವಾಗಿ ಪಂಚಾಯಿತಿಯಿAದ ಶುಲ್ಕ ವಿಧಿಸುತ್ತಿರುವ ಬಗ್ಗೆ ಕೆಲವು ಟೆಂಡರ್‌ದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.