*ಗೋಣಿಕೊಪ್ಪ, ಆ. ೧: ಐದು ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾ. ೧ ರಿಂದ ೧೫ ರವರೆಗೆ ಆರೋಗ್ಯ ಇಲಾಖೆ ಹಮ್ಮಿಕೊಂಡ ಪಾಕ್ಷಿಕ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿನ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಷ್ಟಿçÃಯ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಅಭಿಯಾನಕ್ಕೆ ಜ್ಯೋತಿ ಬೆಳಗಿಸಿ, ಮಗುವಿಗೆ ಓ.ಆರ್.ಎಸ್. ಮತ್ತು ಝಿಂಕ್ ಟ್ಯಾಬ್ಲೆಟ್‌ಗಳನ್ನ ನೀಡಿ ಜಾಗೃತಿ ಮೂಡಿಸಿದರು.

ನಂತರ ಮಾತನಾಡಿದ ಶಾಸಕರು, ದೇಶದಲ್ಲಿ ಅತಿ ಹೆಚ್ಚು ಮಕ್ಕಳು ಅತಿಸಾರ ಭೇದಿಯಿಂದ ಸಾವನಪುö್ಪತ್ತಿ ದ್ದಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮದಲ್ಲಿ ಮಕ್ಕಳಿರುವ ಪ್ರತಿ ಮನೆ ಮನೆಗೆ ಓ.ಆರ್.ಎಸ್. ಮತ್ತು ಝಿಂಕ್ ಟ್ಯಾಬ್ಲೆಟ್‌ಗಳನ್ನ ನೀಡುವ ಮೂಲಕ ಜಾಗೃತಿ ಮೂಡಿಸಲು ಕ್ರಮಕೈ ಗೊಂಡಿದೆ. ಇದರಿಂದಾಗಿ ಮಕ್ಕಳ ಸಾವಿನ ಸಂಖ್ಯೆ ತಗ್ಗಿಸಲು ಸಾಧ್ಯವಿದೆ ಎಂದು ಹೇಳಿದರು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ತೆರಳಿ ಓ.ಆರ್.ಎಸ್. ಪ್ಯಾಕೆಟ್ ವಿತರಣೆ ಮಾಡುವ ಮೂಲಕ ಇವುಗಳ ಬಳಕೆಯ ಕುರಿತು ಸಹ ತಾಯಂದಿರಿಗೆ ಮಾಹಿತಿ ನೀಡಲಿದ್ದಾರೆ.

ಪ್ರತಿಯೊಬ್ಬರು ಆರೋಗ್ಯವಂತ ರಾಗಿರಲು ಪ್ರಾಥಮಿಕವಾಗಿ ಚಿಕಿತ್ಸೆ ಹೊಂದುವುದು ಮುಖ್ಯ. ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್ ಮೂಲಕ ೫ ಲಕ್ಷದವರೆಗೆ ಶಸ್ತçಚಿಕಿತ್ಸೆ ಇನ್ನಿತರ ಆರೋಗ್ಯ ಸೌಲಭ್ಯಗಳನ್ನ ಹೊಂದಿಸಿಕೊಳ್ಳಲು ವ್ಯವಸ್ಥೆಯನ್ನು ನೀಡಿದೆ. ಆದರೆ, ಫಲಾನುಭವಿಗಳು ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ದಾಖಲಾತಿ ಚೀಟಿಯನ್ನು ಪಡೆದುಕೊಂಡಾಗ ಈ ಸೌಲಭ್ಯವು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿದೆ ಈ ಬಗ್ಗೆ ಪ್ರತಿಯೊಬ್ಬರು ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ, ೨೦೧೪ರಲ್ಲಿ ಈ ಅಭಿÀಯಾನಕ್ಕೆ ಚಾಲನೆ ನೀಡಲಾಗಿದ್ದು, ಐದು ವರ್ಷದೊಳಗಿನ ಮಕ್ಕಳು ಅನಾರೋಗ್ಯದಿಂದ ಸಾವನಪ್ಪುವುದನ್ನು ತಪ್ಪಿಸುವ ಉದ್ದೇಶದೊಂದಿಗೆ ಕಾರ್ಯಕ್ರಮ ಚಾಲ್ತಿಯಲ್ಲಿದೆ.

ಅಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಾಕ್ಷಿಕ ಅಭಿಯಾನದಲ್ಲಿ ೧೫ ದಿನಗಳ ಕಾಲ ತೊಡಗಿಸಿ ಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೋಣಿಕೊಪ್ಪ ಠಾಣೆ ಉಪ ನಿರೀಕ್ಷಕ ದೀಕ್ಷಿತ್ ಈ ಸಂದರ್ಭ ಹಾಜರಿದ್ದರು. ಗೋಣಿಕೊಪ್ಪ ಸಮುದಾಯ ಆರೋಗ್ಯ ಆರ್.ಬಿ.ಎಸ್.ಕೆ. ವೈದ್ಯೆ ಮೂಡಗದ್ದೆ ಅರ್ಚನಾ ಅವರು ಕೈ ತೊಳೆಯುವು ದರಿಂದ ಹಲವು ರೀತಿಯ ಖಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಪ್ರಯೋಗಿಕವಾಗಿ ಕೈ ತೊಳೆಯುವ ಮಾರ್ಗವನ್ನು ತಿಳಿಸಿಕೊಟ್ಟರು. ಆಶಾ ಕಾರ್ಯಕರ್ತರು ಇಲಾಖೆ ಸಿಬ್ಬಂದಿಗಳು ಇದ್ದರು.