ಪೊನ್ನಂಪೇಟೆ, ಜು. ೩೧: ಯಾವುದೇ ಜನಾಂಗ ಸಾಮಾಜಿಕವಾಗಿ ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣ ಅತಿ ಮುಖ್ಯ. ವ್ಯಕ್ತಿ ಸುಶಿಕ್ಷಿತನಾದರೆ ಮಾತ್ರ ವಿಕಸಿತ ಬದುಕು ಸಾಧ್ಯ. ಸಮಾಜದ ಎಲ್ಲ ವರ್ಗದವರಿಗೂ ಇಂದು ಶಿಕ್ಷಣ ಎಂಬುದು ಹಿಂದೆAದಿಗಿAತಲೂ ತೀರಾ ಅಗತ್ಯವಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲೆಯ ಅನಿವಾಸಿಗಳ ಸಾಮಾಜಿಕ, ಧಾರ್ಮಿಕ ಮತ್ತು ಸಾಂತ್ವನ ವೇದಿಕೆಯಾಗಿರುವ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್ (ಕೆ.ಎಸ್. ಡಬ್ಲ್ಯೂ.ಎ.) ಯು.ಎ.ಇ. ಸಮಿತಿ ವತಿಯಿಂದ ದುಬೈನ ದೇರಾದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಣದ ಕುರಿತು ಯಾರು ನಿರ್ಲಕ್ಷ್ಯ ವಹಿಸಬಾರದು. ಸಾಮಾಜಿಕ ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು. ಕೆ.ಎಂ.ಎ. ಸಂಸ್ಥೆಯ ಘಟಕವೊಂದನ್ನು ದುಬೈನಲ್ಲಿ ಅಸ್ತಿತ್ವಕ್ಕೆ ತರಲು ಚಿಂತಿಸಲಾಗುತ್ತಿದ್ದು, ಸಂಸ್ಥೆಯ ಸದಸ್ಯತ್ವ ಪಡೆಯುವುದರ ಮೂಲಕ ಕೈಜೋಡಿಸುವಂತೆ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಎಸ್. ಡಬ್ಲ್ಯೂ.ಎ.ಯ ಯು.ಎ.ಇ. ಸಮಿತಿ ಅಧ್ಯಕ್ಷರಾದ ಹರಿಶ್ಚಂದ್ರ ಅಬೂಬಕರ್ ಹಾಜಿ ಕೊಟ್ಟಮುಡಿ ಅವರು ಮಾತನಾಡಿ, ಕಳೆದ ೨೦ ವರ್ಷಗಳಿಂದ ಕೆ.ಎಂ.ಎ. ಸಂಸ್ಥೆಗೆ ದಿಟ್ಟವಾದ ನೇತೃತ್ವ ನೀಡುತ್ತಿರುವ ಸೂಫಿ ಹಾಜಿ ಅವರ ಸಾಮಾಜಿಕ ಚಿಂತನೆ ಮಾದರಿ ಯಾದದ್ದು. ಈ ಹಿನ್ನೆಲೆಯಲ್ಲಿ ಕೆ.ಎಸ್. ಡಬ್ಲ್ಯೂ.ಎ. ವತಿಯಿಂದ ಅವರನ್ನು ಸನ್ಮಾನಿಸಿರುವುದಾಗಿ ತಿಳಿಸಿದರು. ಇದಕ್ಕೂ ಮೊದಲು ಕೆ.ಎಸ್. ಡಬ್ಲ್ಯೂ.ಎ. ಸಲಹಾ ಸಮಿತಿಯ ಪ್ರಮುಖರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಕೂವಲೇರ ಅಹ್ಮದ್ ಚಾಮಿಯಾಲ, ಜೋಯಿಪೊರ ಇಸ್ಮಾಯಿಲ್ ಮೂರ್ನಾಡು, ಹಂಝ ಸಖಾಫಿ ಕೊಟ್ಟಮುಡಿ, ಹಾರಿಸ್ ಕೊಟ್ಟಮುಡಿ, ಹರಿಶ್ಚಂದ್ರ ಅಶ್ಫಾಕ್ ಚೋಕಂಡಳ್ಳಿ ಮೊದಲಾದವರು ಮಾತನಾಡಿದರು. ಸಮಿತಿ ಪ್ರಮುಖರಾದ ಇಬ್ರಾಹಿಂ ನಾಪೋಕ್ಲು, ಸಲೀಂ ಗುಂಡಿಕೆರೆ, ಮುಝಮ್ಮಿಲ್ ಚಾಮಿಯಾಲ, ಹಾರಿಸ್ ಕುಂಜಿಲ, ಝುಬೈರ್ ಎಮ್ಮೆಮಾಡು, ನಿಝಾರ್ ಗುಂಡಿಕೆರೆ, ಅಶ್ರಫ್ ಕೊಟ್ಟಮುಡಿ, ಮಜೀದ್ ಕೊಟ್ಟಮುಡಿ, ಬಶೀರ್ ಕೊಟ್ಟಮುಡಿ ಮೊದಲಾದವರು ಭಾಗವಹಿಸಿದ್ದರು.
ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಅಬ್ದುಲ್ ಜಲೀಲ್ ನಿಝಾಮಿ ನೇತೃತ್ವ ನೀಡಿದರು. ಕೆ.ಎಸ್. ಡಬ್ಲ್ಯೂ.ಎ.ಯ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಪ್ಪಂದಿರ ರಿಯಾಝ್ ಕೊಂಡAಗೇರಿ ಸ್ವಾಗತಿಸಿದರು. ಮುಜೀಬ್ ಕಡಂಗ ವಂದಿಸಿದರು.