ತಾಯಿಯ ಎದೆಹಾಲು ಪ್ರಕೃತಿ ದತ್ತವಾದ ದೇವರ ಕೊಡುಗೆ ಯಾಗಿದ್ದು, ಎದೆಹಾಲಿನಿಂದ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಜೊತೆಗೆ ಭವಿಷ್ಯದ ವ್ಯಕ್ತಿಯಾಗಿ ರೂಪಿಸುವ ಚೈತನ್ಯ ಶಕ್ತಿ ಅಡಗಿದ್ದು, ಮಗು ಜನಿಸಿದ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ೧೯೯೧ರಲ್ಲಿ Wಊಔ ಮತ್ತು UಓIಅಇಈ, WಃW ಸಹಯೋಗ ದಲ್ಲಿ ಸ್ತನ್ಯಪಾನ ಸಪ್ತಾಹವನ್ನು ಆರಂಭಿಸಲಾಯಿತು. ಪ್ರತಿ ವರ್ಷ ಆಗಸ್ಟ್ ೧ ರಿಂದ ೭ ರವರೆಗೆ ಸಪ್ತಾಹದೊಂದಿಗೆ ಈ ಕುರಿತು ತಾಯಂದಿರಿಗೆ ಹೆಚ್ಚಿನ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ೧೨೦ಕ್ಕೂ ಹೆಚ್ಚು ದೇಶಗಳಲ್ಲಿ ನಡೆಸಲಾಗುತ್ತಿದೆ.

ಇತ್ತೀಚಿನ ಆಧುನಿಕ ಯುಗದಲ್ಲಿ ಮಹಿಳೆಯರಲ್ಲಿ ತಪ್ಪು ಕಲ್ಪನೆಗಳಿಂದ, ಉದ್ಯೋಗಸ್ಥ ಮಹಿಳೆಯರಿಗೆ ಸಮಯದ ಅಭಾವದಿಂದಲೋ ಅಥವಾ ಯುವತಿಯರ ಸೌಂದರ್ಯ ಕೆಡುತ್ತದೆಂಬ ತಪ್ಪು ತಿಳುವಳಿಕೆಯಿಂದ ಮಗುವಿಗೆ ಎದೆ ಹಾಲು ಬಿಡಿಸಿ ಬಾಟಲಿ ಹಾಲನ್ನು ನೀಡಲು ಮುಂದಾಗುತ್ತಿರುವುದು ವಿಷಾದನೀಯ. ಜೀವನಮಟ್ಟ ಕಡಿಮೆ ಇರುವ, ಶಿಕ್ಷಣ ಮಟ್ಟ ಕಡಿಮೆ ಇರುವುದು, ಎದೆಹಾಲು ಕೊಡುವ ಬಗ್ಗೆ ಶುಚಿತ್ವಕ್ಕೆ ಗಮನ ಹರಿಸದೆ ಇರುವ ಕುಟುಂಬಗಳಲ್ಲಿ ಮತ್ತು ಮೂಢನಂಬಿಕೆಗಳ ಕಾರಣದಿಂದ ಮಗುವು ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರುತ್ತದೆ.

ಇದನ್ನು ನೀಡುವುದರಿಂದ ತಾಯಿ ಮತ್ತು ಮಗುವಿನ ಸಂಬAಧ ಇನ್ನಷ್ಟು ಉತ್ತಮವಾಗುತ್ತದೆ. ಎದೆಹಾಲು ಣಿಸುವಿಕೆಯಿಂದ ತಾಯಿ ಮಗುವಿನ ನಡುವಿನ ಸಂಬAಧ ಬಲಪಡಿಸುತ್ತದೆ. ಇದರಿಂದ ಭಾವನಾತ್ಮಕವಾಗಿ ಮಗುವಿನ ಮೇಲಿನ ವ್ಯಾಮೋಹ ಹೆಚ್ಚುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಮತ್ತು ಪ್ರೀತಿ ಬೆಳೆಯುತ್ತದೆ.

ತಾಯಿಗೆ ಪ್ರಸವದ ನಂತರದ ರಕ್ತ ಸ್ರಾವದಿಂದಾಗುವ ತೊಂದರೆ ಕಡಿಮೆಯಾಗುತ್ತದೆ ಮತ್ತು ಋತುಚಕ್ರವು ನಿಧಾನವಾಗಿ ಆಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಧನಾತ್ಮಕ ಭಾವನೆಗಳನ್ನು ಉತ್ತೇಜಿಸುತ್ತದೆ. ಮಾನಸಿಕ ನೆಮ್ಮದಿ ಸಿಗಲು ಸಾಕಷ್ಟು ಸಹಾಯ ಮಾಡುತ್ತದೆ ಹಾಗೂ ಒಂದು ಮಗುವಿನ ಬಳಿಕ ಅಂತರ ಕಾಯ್ದುಕೊಂಡAತಾಗಲು ಸಹಕಾರಿಯಾಗುತ್ತದೆ.

ಇದರಿಂದಾಗಿ ಮಹಿಳೆಯರಲ್ಲಿನ ಸ್ತನಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರನ್ನು ಸುಲಭವಾಗಿ ತಡೆಗಟ್ಟಬಹುದು. ಎದೆ ಹಾಲು ನೈಸರ್ಗಿಕವಾಗಿ ಸಿಗುವುದರಿಂದ ಯಾವುದೇ ರೀತಿಯ ಹಾಲಿಗಾಗಿ ದುಂದು ವೆಚ್ಚಮಾಡಬೇಕಾಗಿಲ್ಲ.

ಹಾಲುಣಿಸುವ ಕ್ರಮ: ಹುಟ್ಟಿದ ಮಕ್ಕಳಿಗೆ ತಿಂಗಳವರೆಗೆ ದಿನಕ್ಕೆ ಕನಿಷ್ಟ ೮ ರಿಂದ ೧೨ ಬಾರಿ ಹಾಲುಣಿಸಬೇಕು ಮತ್ತು ಮಗು ಪ್ರತಿ ಬಾರಿ ಅತ್ತಾಗಲು ಹಾಲು ಕುಡಿಸ ಬೇಕು. ಆರೋಗ್ಯವಂತ ಮಗುವಿಗೆ ೯೦ ನಿಮಿಷ ಕ್ಕೊಂದು ಬಾರಿ ಹಾಲುಣಿಸ ಬೇಕು. ಮೊಲೆಹಾಲು ಬೇಗ ಜೀರ್ಣವಾಗುವ ಕಾರಣ ಮಗುವಿಗೆ ಬೇಗ ಹಸಿವಾಗುವುದರೊಂದಿಗೆ ಗಂಟಲು ಒಣಗುವ ಸಾಧ್ಯತೆ ಇದ್ದು, ಆಗಾಗ ಹಾಲು ಕುಡಿಸುತ್ತಿರಬೇಕು. ತಾಯಿಗೆ ಮೊದಲು ಮೊಲೆಯುಣಿಸುವ ವಿಧಾನ ಸರಿಯಾಗಿ ತಿಳಿಯದೆ ಮೊಲೆತೊಟ್ಟು ಒಡೆದು ರಕ್ತ ಬರಬಹುದು ಹಾಲುಣಿಸುವಲ್ಲಿ ಕಷ್ಟಪಡಬಹುದು ಮತ್ತು ಎದೆಭಾಗ ಎದೆತೊಟ್ಟು ಶುಚಿಗೊಳಿಸುವುದು ತಿಳಿದಿರಬೇಕಾಗುತ್ತದೆ. ತೆರೆಮರೆಯಲ್ಲಿ ಮಗುವಿಗೆ ಹಾಲುಣಿಸಿದರೆ ಎದೆಹಾಲು ನಿರಾಳವಾಗಿ ಹೆಚ್ಚಾಗುತ್ತದೆ. ತಾಯಿ ತನ್ನ ಮಗುವಿಗೆ ಹಾಲುಣಿಸುವಾಗ ಯಾವುದೇ ಚಿಂತೆ, ಯೋಚನೆಗಳಿ ರಬಾರದು ಆಗ ಹಾಲು ವೃದ್ಧಿಸಿ ಮಗುವಿಗೆ ಸಾಕಷ್ಟು ದೊರೆಯುತ್ತದೆ. ಮಗುವಿಗೆ ಹಾಲುಣಿಸುವ ಕ್ರಮ ಮತ್ತು ಕೂರುವ ಬಗ್ಗೆ ತಿಳಿದಿರಬೇಕು. ಎದೆ ಹಾಲು ನೀಡುವುದರಿಂದ ಕಾಯಿಲೆ ಮಾತ್ರವಲ್ಲದೆ ಶಿಶು ಮರಣವನ್ನೂ ತಪ್ಪಿಸಬಹುದು.

ಈ ಸಮಯದಲ್ಲಿ ತಮ್ಮಲ್ಲೇ ಬೆಳೆಯುವ ಧವಸಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು ಮತ್ತು ಕಾಯಿಪಲ್ಲೆಗಳನ್ನು ತಯಾರಿಸಿ ಸೇವಿಸುವ ಶಿಕ್ಷಣ ತಾಂiÀiAದಿರಿಗೆ ತಿಳಿದಿರಬೇಕು. ಪೌಷ್ಟಿಕ ಆಹಾರವನ್ನು ಮತ್ತು ಸಮತೋಲನ ಆಹಾರವನ್ನು ಹೆಚ್ಚಾಗಿ ಬಳಸಬೇಕು.

ಮಗುವಿಗೆ ೬ ತಿಂಗಳು ಕಡ್ಡಾಯ; ಮಗುವಿಗೆ ತಾಯಿ ಹಾಲಿಗಿಂತ ಸೂಪರ್ ಫುಡ್ ಮತ್ತೊಂದಿಲ್ಲ. ಆದ್ದರಿಂದ ಮೊದಲ ೬ ತಿಂಗಳು ಕಡ್ಡಾಯವಾಗಿ ಎದೆಹಾಲು ನೀಡಬೇಕು. ೬ ತಿಂಗಳ ನಂತರ ೨ ವರ್ಷದವರೆಗೆ ಎದೆಹಾಲು ಮುಂದುವರೆಸುತ್ತಾ ಘನ ಆಹಾರ ನೀಡಲು ಆರಂಭಿಸಬೇಕು. ೨ ವರ್ಷದ ನಂತರವೂ ಎದೆಹಾಲು ನೀಡಲು ಮುಂದುವರೆಸಿದರೆ ಮಗುವಿಗೆ ಅನೇಕ ಪ್ರಯೋಜನಗಳು ಸಿಗಲಿವೆ.

ಮಗುವಿಗೆ ಜನ್ಮ ನೀಡಿದ ತಾಯಿಯೇ ಧನ್ಯ. ಇಂತಹ ಅಪರೂಪದ ಸಮಯವನ್ನು ವ್ಯರ್ಥ ಮಾಡದೇ ನಿಮ್ಮ ಆರೋಗ್ಯ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಮಗುವಿಗೆ ಹಾಲುಣಿಸಿರಿ

- ಜಿ.ವಿ. ಶ್ರೀನಾಥ್, ಗಾವಡಗೆರೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಮಡಿಕೇರಿ. ಮೊ. ೯೯೦೦೯೨೭೨೫೯