ಶನಿವಾರಸಂತೆ, ಜು. ೩೧: ಸಮೀಪದ ಗೋಪಾಲಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ೬೫ ವಿದ್ಯಾರ್ಥಿಗಳಿಗೆ ದಾನಿ, ಕಾಂಗ್ರೆಸ್ ಯುವ ಜಿಲ್ಲಾ ಅಧ್ಯಕ್ಷ ಮಿಥುನ್ ಗೌಡ ಹಾಗೂ ಕರವೇ (ಶಿವರಾಮೇಗೌಡ ಬಣ) ಸಹಭಾಗಿತ್ವದಲ್ಲಿ ಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ದಾನಿ ಮಿಥುನ್ ಗೌಡ ಮಾತನಾಡಿ, ಸರಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಿಕ್ಷಣದಿಂದ ವಂಚಿತರಾಗದAತೆ ಪೋಷಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಪುಸ್ತಕ ದಾನಿಯನ್ನು ಸನ್ಮಾನಿಸಿ ಗೌರವಿಸಿದರು. ತಾಲೂಕು ಕಾಂಗ್ರೆಸ್ ಯುವ ಅಧ್ಯಕ್ಷ ಕಿರಣ್, ಗ್ರಾ.ಪಂ. ಸದಸ್ಯರಾದ ಡಿ.ಕೆ. ಪ್ರಸನ್ನ, ಮನು, ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್, ಪದಾಧಿಕಾರಿಗಳಾದ ಹರೀಶ್, ರಾಜಣ್ಣ, ರಾಣಿ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಇದ್ದರು.