ಫಾಜಿಲ್ ಹತ್ಯೆ ಪ್ರಕರಣ - ಐವರ ಬಂಧನ
ಮAಗಳೂರು, ಜು. ೩೧: ದಕ್ಷಿಣ ಕನ್ನಡದ ಸುರತ್ಕಲ್ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಆರೋಪಕ್ಕೆ ಸಂಬAಧಿಸಿದAತೆ ಮಂಗಳೂರು ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ಜುಲೈ ೨೮ರ ರಾತ್ರಿ ಯುವಕ ಫಾಜಿಲ್ನ ಕೊಲೆಗೈದಿದ್ದ ಆರೋಪದ ಮೇರೆಗೆ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಪರಾರಿಯಲ್ಲಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಅಂತೆಯೇ ಕೊಲೆಗೆ ಆರೋಪಿಗಳನ್ನು ಕರೆತಂದಿದ್ದ ಕಾರು ಚಾಲಕನನ್ನೂ ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಮೊದಲು ಘಟನಾ ಸ್ಥಳಕ್ಕೆ ಬಂದಿದ್ದ ಕಾರನ್ನು ಗುರುತಿಸಿದ್ದು, ಈ ವೇಳೆ ಹ್ಯುಂಡೈ ಇಯಾನ್ ಕಾರು ಅನ್ನೋದು ಗೊತ್ತಾಗಿತ್ತು. ನಂತರ ಮಂಗಳೂರಲ್ಲಿದ್ದ ಎಲ್ಲಾ ಇಯಾನ್ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದರಲ್ಲಿ ಬಿಳಿ ಬಣ್ಣದ ಕಾರುಗಳ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಇಯಾನ್ ಕಾರು ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಆರೋಪಿಗಳು ಕೊಲೆ ನಡೆದ ೫೦೦ ಮೀಟರ್ ದೂರದಲ್ಲಿ ಕಾರು ಪಾರ್ಕ್ ಮಾಡಿದ್ದರು. ಪಾರ್ಕ್ ಮಾಡಿ ಕಾರಿನಲ್ಲಿ ಮಂಕಿ ಕ್ಯಾಪ್ ಧರಿಸಿ ಕುಳಿತಿದ್ದರು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಪ್ರಕರಣ ಸಂಬAಧ ಈವರೆಗೂ ೫೧ ಜನರನ್ನು ವಿಚಾರಣೆ ಮಾಡಿದ್ದೇವೆ. ೧೦-೧೨ಕ್ಕೂ ಹೆಚ್ಚು ಕಾರು ವಶಕ್ಕೆ ಪಡೆದು ತನಿಖೆ ಮಾಡಿದ್ದೇವೆ. ಸುರತ್ಕಲ್ ಹೊರವಲಯದಲ್ಲಿ ಅಜಿತ್ ವಶಕ್ಕೆ ಪಡೆದಿದ್ದೇವೆ. ಅಜಿತ್ ಒಂದಷ್ಟು ಮಾಹಿತಿ ಕೊಟ್ಟಿದ್ದಾನೆ. ಅಜಿತ್ ಜೊತೆ ಓರ್ವ ಆರೋಪಿ ಒಡನಾಟ ಹೊಂದಿದ್ದ. ಆರೋಪಿ ಹಲವು ಬಾರಿ ಕಾರು ತೆಗೆದುಕೊಂಡು ಹೋಗುತ್ತಿದ್ದ. ಅದಕ್ಕಾಗಿ ೧೦-೧೨ ಕಾರು ವಶಕ್ಕೆ ಪಡೆದು ಪರಿಶೀಲಿಸಿದ್ದೇವೆ. ಹೀಗಾಗಿ ಪ್ರಕರಣಕ್ಕೆ ಹತ್ತಿರವಾದ ಎಲ್ಲ ಸಾಕ್ಷಿಗಳ ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಸದ ಸಂಜಯ್ ರಾವತ್ ಇ.ಡಿ. ವಶಕ್ಕೆ
ನವದೆಹಲಿ, ಜು. ೩೧: ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬAಧಿಸಿದAತೆ ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವತ್ರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ರಾವತ್ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಇಡಿ ಅವರನ್ನು ವಶಕ್ಕೆ ಪಡೆದಿದೆ. ೧,೦೩೪ ಕೋಟಿ ರೂ.ಗಳ ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬAಧಿಸಿದAತೆ ರಾವತ್ ಅವರನ್ನು ಈ ಹಿಂದೆ ಎರಡು ಬಾರಿ ವಿಚಾರಣೆ ನಡೆಸಲಾಗಿತ್ತು. ಜುಲೈ ೧ರಂದು ರಾವತ್ ಅವರನ್ನು ಸುಮಾರು ೧೦ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಇಡಿ ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಿಕೊಂಡಿತ್ತು.
ಐಸಿಸ್ ಜೊತೆ ನಂಟು ಆರೋಪ-ಇಬ್ಬರ ಬಂಧನ
ಬೆAಗಳೂರು, ಜು. ೩೧: ರಾಷ್ಟಿçÃಯ ತನಿಖಾ ದಳ (ಎನ್ಐಎ) ರಾಜ್ಯದ ಭಟ್ಕಳ, ತುಮಕೂರು ಹಾಗೂ ೫ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಸಿರಿಯಾ ಶಂಕಿತರಿಗೆ ಸಂಬAಧಿಸಿದAತೆ ರಾಜ್ಯವೂ ಸೇರಿ, ಭೋಪಾಲ್, ರೈಸನ್ (ಮಧ್ಯಪ್ರದೇಶ) ೧೩ ಕಡೆಗಳಲ್ಲಿ ದಾಳಿ ನಡೆದಿದ್ದು, ಗುಜರಾತ್ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್, ಬಿಹಾರದ ಅರಾರಿಯಾ, ಮಹಾರಾಷ್ಟçದ ಕೊಲ್ಹಾಪುರ, ನಾಂದೇಡ್ ಜಿಲ್ಲೆಗಳು, ಉತ್ತರಪ್ರದೇಶದ ದೇವಬಂದ್ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ಐಸಿಸ್ ಉಗ್ರ ಸಂಘಟನೆಯೊAದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ೩೦ ವರ್ಷದ ಅಬ್ದುಲ್ ಮುಕ್ತದೀರ್ ಹಾಗೂ ಆತನ ಸಹೋದರನನ್ನು ಎನ್ಐಎ ವಶಕ್ಕೆ ಪಡೆದಿದೆ. ತುಮಕೂರಿನಲ್ಲಿ ರಂಗಸ್ವಾಮಿ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ ಸಾಜಿದ್ ಮಕ್ರಾನಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಪತ್ನಿಗೆ ಇರಿದು ನೇಣಿಗೆ ಶರಣಾದ ಪತಿ
ಬೆಂಗಳೂರು, ಜು. ೩೧: ಪತ್ನಿ ಮಾಡಿದ ಕಬಾಬ್ ರುಚಿಯಾಗಿಲ್ಲ ಎಂದು ಪತಿ ಮಹಾಶಯನೊಬ್ಬ ಆಕೆಗೆ ಚಾಕು ಇರಿದು ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರೆಕೆರೆ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ಪತ್ನಿ ತಯಾರಿಸಿದ ಕಬಾಬ್ ರುಚಿಯಿಲ್ಲ ಎಂದು ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತಾರಕಕ್ಕೇರಿ ಹರಿತವಾದ ವಸ್ತುವಿನಿಂದ ಪತ್ನಿಗೆ ಇರಿದಿದ್ದಾನೆ. ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ ಉದ್ಯೋಗಿ ಸುರೇಶ್ ಎಂಬಾತ ಕೆಲಸ ಮುಗಿಸಿ ಮನೆಗೆ ಬಂದಾಗ ಡ್ರಿಂಕ್ಸ್ ಸೇವಿಸಲು ಬಯಸಿದ್ದ. ಈ ವೇಳೆ ಪತ್ನಿ ಶಾಲಿನಿಗೆ ಕಬಾಬ್ ತಯಾರಿಸಿಕೊಡುವಂತೆ ಹೇಳಿದ್ದಾನೆ. ಅದರಂತೆ ಪತ್ನಿ ಶಾಲಿನಿ ಕಬಾಬ್ ಮಾಡಿಕೊಟ್ಟಿದ್ದು, ಕಬಾಬ್ ತಿಂದ ಸುರೇಶ್ ಪತ್ನಿಗೆ ಕಬಾಬ್ ರುಚಿಯಾಗಿಲ್ಲ ಎಂದು ಮನಸೋ ಇಚ್ಛೆ ಬೈದಾಡಿದ್ದಾನೆ. ಈ ವೇಳೆ ಆಕ್ರೋಶದಿಂದ ಹರಿತವಾದ ಆಯುಧದಿಂದ ಆಕೆಯ ಕೈಗಳನ್ನು ಕತ್ತರಿಸಿ ಪರಾರಿಯಾಗಿದ್ದಾನೆ. ಪತ್ನಿ ಕೂಗುತ್ತಲೇ ಆತ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಆಕೆ ಕಿರುಚಲು ಆರಂಭಿಸಿದ್ದು, ನೆರೆಹೊರೆಯವರು ಆಕೆಯನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಥಳೀಯರಿಂದ ಥಳಿತಕ್ಕೊಳಗಾಗುವ ಭಯದಿಂದ ಸುರೇಶ್ ಮನೆಯಿಂದ ಓಡಿ ಹೋಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸರಿಗೆ ಮೆಡಿಕೋ ಲೀಗಲ್ ಕೇಸ್ ನೀಡಿದ್ದು, ಪರಾರಿಯಾಗಿರುವ ಪತಿಗೆ ಶೋಧ ನಡೆಸಿದಾಗ ಆತ ಸಮೀಪದ ಖಾಲಿ ನಿವೇಶನದಲ್ಲಿ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ನ ಮೂವರು ಕಾಂಗ್ರೆಸ್ ಶಾಸಕರು ಅಮಾನತ್ತು
ನವದೆಹಲಿ, ಜು. ೩೧: ಶನಿವಾರ ಪಶ್ಚಿಮ ಬಂಗಾಳದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮ ವಾಹನದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಬಳಿಕ ಜಾರ್ಖಂಡ್ನ ಮೂವರು ಕಾಂಗ್ರೆಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾನುವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಸಾರ್ವಜನಿಕ ಪ್ರತಿನಿಧಿಯಾಗಲಿ, ಪಕ್ಷದ ಪದಾಧಿಕಾರಿಯಾಗಲಿ, ಕಾರ್ಯಕರ್ತರಾಗಲಿ ಎಲ್ಲರ ಮಾಹಿತಿಯನ್ನು ನಮ್ಮ ಬಳಿ ಇಟ್ಟುಕೊಂಡಿದ್ದೇವೆ. ಈ ಸಂಬAಧ ಯಾರೇ ಶಾಮೀಲಾಗಿದ್ದರೂ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್ನ ಕಾರ್ಯದರ್ಶಿ ಮತ್ತು ಉಸ್ತುವಾರಿ ಅವಿನಾಶ್ ಪಾಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೂವರು ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರು ಎಸ್ಯುವಿಯಲ್ಲಿ ರಾಣಿಹತಿ ಸಮೀಪದ ರಾಷ್ಟಿçÃಯ ಹೆದ್ದಾರಿ-೧೬ ರಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ಅವರ ವಾಹನವನ್ನು ತಡೆದರು. ಈ ವೇಳೆ ವಾಹನದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಬಳಿಕ ಮೂವರನ್ನು ವಶಕ್ಕೆ ಪಡೆದಿದ್ದರು.
ಐಸಿಸ್ನೊಂದಿಗೆ ಸಂಪರ್ಕ ಆರೋಪ - ವಿದ್ಯಾರ್ಥಿ ಬಂಧನ
ತಿರುಪತ್ತೂರ್, ಜು. ೩೧: ಗುಪ್ತಚರ ಇಲಾಖೆಯ ಹಲವು ಗಂಟೆಗಳ ವಿಚಾರಣೆಯ ಬಳಿಕ, ಐಸೀಸ್ನೊಂದಿಗೆ ಆನ್ಲೈನ್ ಸಂಪರ್ಕ ಹೊಂದಿದ್ದ ಆರೋಪದಡಿ ತಮಿಳುನಾಡು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆಂಬೂರ್ನಲ್ಲಿ ಈ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದ್ದು, ಮೀರ್ ಅನಾಸ್ ಅಲಿ (೨೨) ಬಂಧಿತ ವಿದ್ಯಾರ್ಥಿಯಾಗಿದ್ದು, ರಾಣಿಪೇಟ್ನಲ್ಲಿ ಮೇಲ್ವಿಶಾರಮ್ನಲ್ಲಿ ಮೆಕಾನಿಕಲ್ ಇಂಜಿನಿಯರಿAಗ್ ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾನೆ. ಅನಾಸ್ ಎಂಬಾತನ ಆನ್ಲೈನ್ ಚಟುವಟಿಕೆಗಳು ಅನುಮಾನ ಮೂಡಿಸಿದ್ದ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ಕಣ್ಗಾವಲು ಆತನ ಮೇಲಿತ್ತು. ಆತನನ್ನು ಮನೆಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಅಲ್ಲಿಂದ ೩೫ ಕಿ.ಮೀ. ದೂರ ಕರೆದೊಯ್ದು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.