(ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಜು. ೩೧: ಕೊಡಗಿನಲ್ಲಿ ಪ್ರವಾಸೋದ್ಯಮದ ಕೇಂದ್ರಬಿAದುವಾಗಿರುವ ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ವನ್ಯ ಪ್ರಾಣಿಗಳನ್ನು ಅತ್ಯಂತ ಸಮೀಪದಲ್ಲಿ ದರ್ಶನ ಮಾಡುವ ಸಲುವಾಗಿ ಅರಣ್ಯ ಇಲಾಖೆಯು ಸಫಾರಿಯನ್ನು ಆರಂಭಿಸಿದೆ. ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಅರಣ್ಯ ಇಲಾಖೆಯ ವಾಹನದಲ್ಲಿ ರಾಷ್ಟಿçÃಯ ಉದ್ಯಾನವನದಲ್ಲಿ ಸಫಾರಿ ನಡೆಸುವ ಮೂಲಕ ವನ್ಯ ಪ್ರಾಣಿಗಳ ಚಲನ ವಲನಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದೆ.

ರಾಜ್ಯ ಹಾಗೂ ರಾಷ್ಟçದ ವಿವಿಧ ಭಾಗದಿಂದ ಆಗಮಿಸುವ ಪ್ರವಾಸಿಗರು ಇಲಾಖೆ ವತಿಯಿಂದ ನಡೆಯುವ ಸಫಾರಿಯಲ್ಲಿ ಪಾಲ್ಗೊಂಡು ಅರಣ್ಯದಲ್ಲಿರುವ ವನ್ಯ ಪ್ರಾಣಿಗಳನ್ನು ವೀಕ್ಷಿಸಿ ತೆರಳುತ್ತಿದ್ದಾರೆ. ವಾರ್ಷಿಕವಾಗಿ ಪ್ರವಾಸಿಗರಿಂದ ಹೆಚ್ಚಿನ ಆದಾಯವು ಸಫಾರಿಯ ಮೂಲಕ ಇಲಾಖೆಗೆ ಸಂದಾಯವಾಗುತ್ತಿದೆ. ಇದೀಗ ಈ ಸಫಾರಿ ಮಾರ್ಗಗಳನ್ನು ಇಲಾಖೆ ಹೆಚ್ಚು ಮಾಡಿದೆ. ಈತನಕ ಮೂರು ಭಾಗದಿಂದ ಸಫಾರಿಯನ್ನು ವೀಕ್ಷಿಸಬಹುದಾಗಿತ್ತು. ಇದೀಗ ಹೆಚ್ಚುವರಿಯಾಗಿ ೨ ಕಡೆಯಿಂದ ಸಫಾರಿ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಇತ್ತೀಚೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿತಿಮತಿ ಸಮೀಪದ ಮಜ್ಜಿಗೆ ಹಳ್ಳಬಳಿ ಇದ್ದ ನರ್ಸರಿ ಸ್ಥಳದಲ್ಲಿ ಈ ಕೇಂದ್ರ ಆರಂಭಕ್ಕೆ ನಿರ್ಧರಿಸಿದ್ದು, ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ತೆರಳುವ ಸಫಾರಿ ಮಾರ್ಗಕ್ಕೆ ಕೊಡಗು ಸಿಸಿಎಫ್ ಬಿ.ಎನ್. ಮೂರ್ತಿ ಹಾಗೂ ನಾಗರಹೊಳೆ

(ಮೊದಲ ಪುಟದಿಂದ) ಡಿಸಿಎಫ್‌ರವರು ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಸಂಬAಧ ಈಗಾಗಲೇ ಕೆಲಸಗಳು ಪ್ರಾರಂಭವಾಗಿದ್ದು, ಒಟ್ಟಾರೆ ಇನ್ನು ಮುಂದೆ ಪ್ರವಾಸಿಗರಿಗೆ ಐದು ಭಾಗದಿಂದ ಸಫಾರಿ ನಡೆಸಬಹುದಾಗಿದೆ.

ಹೊಸದಾಗಿ ಆರಂಭಿಸಲಾಗುವ ಒಂದು ಸಫಾರಿ ಕೇಂದ್ರವನ್ನು ಹುಣಸೂರು, ಗೋಣಿಕೊಪ್ಪ ತಲಚೇರಿ ರಸ್ತೆಯಲ್ಲಿರುವ ತಿತಿಮತಿ ಬಳಿ ಮತ್ತು ಮತ್ತೊಂದು ಕೇಂದ್ರವನ್ನು ಆನೆಚೌಕೂರು ವನ್ಯ ಜೀವಿ ವ್ಯಾಪ್ತಿಯ ಪಿರಿಯಾಪಟ್ಟಣದಿಂದ ಮಾಲ್ದಾರೆಗೆ ಹೋಗುವ ಮಾರ್ಗದ ಮುತ್ತೂರು ಗ್ರಾಮದ ಸಮೀಪ ಮಾಡಲು ಈಗಾಗಲೇ ಜಾಗ ಗುರುತಿಸಲಾಗಿದೆ.

ಈ ಯೋಜನೆಯು ಮುಂಬರುವ ನವೆಂಬರ್, ಡಿಸೆಂಬರ್ ಹೊತ್ತಿಗೆ ಬೆಳಗ್ಗೆ ಮತ್ತು ಸಂಜೆ ವೇಳೆ ವಾಹನಗಳು ವನ್ಯಜೀವಿಗಳ ದರ್ಶನಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಿವೆ ಎಂದು ಅಂದಾಜಿಸಲಾಗಿದೆ. ಮೈಸೂರು ಕಡೆಯಿಂದ ಕೊಡಗಿನ ಭಾಗಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಯಾವುದೇ ಕೇಂದ್ರವಿರಲಿಲ್ಲ. ಆದ್ದರಿಂದ ಆ ಭಾಗದಿಂದ ತೆರಳುವವರಿಗೆ ಕಾಡಿನ ದರ್ಶನಕ್ಕೆ ಅನುಕೂಲವಾಗಲಿದೆ. ಈಗಾಗಲೇ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ವ್ಯಾಪ್ತಿಯ ಅಂತರಸAತೆ ವೀರನಹೊಸಹಳ್ಳಿ ಹೆಬ್ಬಾಗಿಲು ಮತ್ತು ನಾಗರಹೊಳೆ ವ್ಯಾಪ್ತಿಯ ನಾಣಚ್ಚಿಯಿಂದ ಮೂರು ಕಡೆಯಿಂದ ಸಫಾರಿ ನಡೆಯುತ್ತಿದೆ. ದಮ್ಮನಕಟ್ಟೆ ಸಫಾರಿ ನಡೆಯುತ್ತಿದೆ. ದಮ್ಮನಕಟ್ಟೆ ಸಫಾರಿ ವ್ಯಾಪ್ತಿ ಕಬಿನಿ ಹಿನ್ನೀರು ವ್ಯಾಪ್ತಿಗೆ ಬರಲಿದ್ದು, ಪ್ರವಾಸಿಗರಿಗೆ ಆನೆ, ಹುಲಿ, ಚಿರತೆ, ಕಪ್ಪು ಚಿರತೆಯಂಥ ಪ್ರಾಣಿಗಳ ದರ್ಶನವಾಗುವುದರಿಂದ ಹೆಚ್ಚಿನ ಬೇಡಿಕೆಯಿದೆ. ಸೋಮವಾರದಿಂದ ಶುಕ್ರವಾರದ ತನಕ ಮುಂಜಾನೆ ೬ರಿಂದ ೯ರ ತನಕ ಮತ್ತು ಶನಿವಾರ ಭಾನುವಾರ ೬ರಿಂದ ೭.೩೦ ಮತ್ತು ೭.೩೦ರಿಂದ ೯ರ ತನಕ ಸಫಾರಿ ಸೌಲಭ್ಯ ದೊರೆಯುತ್ತಿದೆ.

ನಾಗರಹೊಳೆಯ ಮಧ್ಯಭಾಗದಲ್ಲಿದ್ದ ಸಫಾರಿ ಕೇಂದ್ರವನ್ನು ವೀರನಹೊಸಹಳ್ಳಿಗೆ ಸ್ಥಳಾಂತರಿಸಿದ ಮೇಲೆ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ ಎನ್ನಲಾಗಿದೆ. ಹೆಬ್ಬಾಗಿಲಿನಿಂದಲೂ ರಸ್ತೆಯ ಮೂಲಕವೇ ಸಾಗಿ ಮತ್ತೆ ನಾಗರಹೊಳೆ ಕಚೇರಿ ಬಳಿ ಬಂದು ಗೇಮ್ ರೋಡ್‌ನ ಮೂಲಕ ಅರಣ್ಯಕ್ಕೆ ತೆರಳಬೇಕಾಗಿದ್ದರಿಂದ ಹೆಚ್ಚಿನ ಸಮಯ ಪ್ರವಾಸಿಗರ ಪ್ರಯಾಣದಲ್ಲೇ ಕಳೆದುಹೋಗುತ್ತದೆ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ. ಪ್ರವಾಸಿಗರಿಗೆ ಅರಣ್ಯದ ದರ್ಶನ ಮಾಡಿಸುವುದರಿಂದ ಸಹಜವಾಗಿಯೇ ಅರಣ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಲಿದೆ.

ಸಫಾರಿಗಳು ನಡೆಯುವುದರಿಂದ ಪರಿಸರ ಹಾಗೂ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಒಲವು ನಾಗರಿಕರಲ್ಲಿ ಮೂಡಲಿದೆ ಹಾಗೂ ಅರಣ್ಯ ಪ್ರದೇಶದಲ್ಲಿರುವ ವನ್ಯ ಪ್ರಾಣಿಗಳನ್ನು ಸಮೀಪದಿಂದಲೇ ಕಣ್ತುಂಬಿಕೊಳ್ಳುವ ಅವಕಾಶವೂ ದೊರೆಯಲಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ವನ್ಯ ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಿರಲಿ ಎಂಬುದು ಪರಿಸರ ಪ್ರೇಮಿಗಳ ಮನವಿಯಾಗಿದೆ.