ಶನಿವಾರಸಂತೆ, ಜು. ೩೦: ಮನುಷ್ಯನಿಗೆ ಸಮಾಜ ಸೇವೆಯೇ ದೇವರ ಆಶೀರ್ವಾದವಾಗಿದ್ದು, ರೊಟೇರಿಯನ್‌ಗಳಿಗೆ ಸೇವೆ ಸಂತೃಪ್ತಿ ನೀಡುತ್ತದೆ ಎಂದು ಜಿಲ್ಲಾ ಸಂವಹನ ಅಧ್ಯಕ್ಷ ಸತೀಶ್ ಬೋಳಾರ್ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆಯ ಶಾಂತಮಲ್ಲಪ್ಪ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು. ಸಮಾಜಕ್ಕೆ ಫಲ ಕೊಡುವ ರೋಟರಿ ಸಂಸ್ಥೆ ಎಲ್ಲೋ ಹುಟ್ಟಿ ಇಂದು ದೇಶದಲ್ಲಿ ಸಮಾಜ ಸೇವೆಯ ರೂಪದಲ್ಲಿ ಸಾಕಾರಗೊಳ್ಳುತ್ತಿದೆ. ಸಂಸ್ಥೆಯ ಅಭೂತಪೂರ್ವ ಕಾರ್ಯಕ್ರಮ ಪೋಲಿಯೋ ನಿರ್ಮೂಲನೆಯಿಂದ ಎಷ್ಟೋ ಕುಟುಂಬಗಳಲ್ಲಿ ನೆಮ್ಮದಿ ಮೂಡಿದೆ ಎಂದರು. ರೋಟರಿ ವಲಯ ಉಪರಾಜ್ಯಪಾಲ ಎಸ್.ಕೆ. ಸತೀಶ್ ಮಾತನಾಡಿ, ರೋಟರಿ ರಾಷ್ಟಿçÃಯ ಅಧ್ಯಕ್ಷರು ಇಮಾಜಿನ್ ರೋಟರಿ ಎಂಬ ಪರಿಕಲ್ಪನೆಯಡಿ ೭ ಸಮಾಜಮುಖಿ ಕಾರ್ಯಕ್ರಮಗಳನ್ನು ಘೋಷಿಸಿದ್ದು, ಪ್ರಸಕ್ತ ಸಾಲಿನಲ್ಲಿ ಸಮಾಜಕ್ಕೆ ದೊರಕಲಿದೆ ಎಂದರು.

ನೂತನ ಅಧ್ಯಕ್ಷರಾಗಿ ಬಿ.ಕೆ. ಯತೀಶ್, ಕಾರ್ಯದರ್ಶಿಯಾಗಿ ಪ್ರಕಾಶ್ ಪ್ರಭು, ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಅಶ್ವಥ್ ಕುಮಾರ್, ಶಾಂತಮಲ್ಲಪ್ಪ, ಕುಮಾರ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.

ನಿರ್ಗಮಿತ ಅಧ್ಯಕ್ಷ ದಿನೇಶ್ ಮಿಲ್, ವಲಯ ಸೇನಾನಿ ಹೆಚ್.ವಿ. ದಿವಾಕರ್, ಸುಮನ್, ಮಂಗಳೂರು ವಲಯ ಸೇನಾನಿ ಜೀವನ್ ಪಿಂಟೋ, ನಿರ್ದೇಶಕರಾದ ಡಾ. ಉದಯ ಕುಮಾರ್, ಹೆಚ್.ಎಂ. ದಿವಾಕರ್, ಹೆಚ್.ಜೆ. ಪ್ರವೀಣ್, ಶನಿವಾರಸಂತೆ, ಆಲೂರು ಸಿದ್ದಾಪುರ, ಕುಶಾಲನಗರ, ಕೊಡ್ಲಿಪೇಟೆ ರೋಟರಿ ಪದಾಧಿಕಾರಿಗಳು ಹಾಜರಿದ್ದರು.