ನಾಪೋಕ್ಲು, ಜು. ೩೦: ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಸುರಿದ ಗಾಳಿ, ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಆದರೆ ಸರ್ಕಾರ ಇಲ್ಲಿಯವರೆಗೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲವೆAದು ಕಕ್ಕಬ್ಬೆ ಗ್ರಾ.ಪಂ ವ್ಯಾಪ್ತಿಯ ಬೆಳೆಗಾರರು ಆರೋಪಿಸಿದ್ದಾರೆ.
ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯವಕಪಾಡಿ ಗ್ರಾಮದ ಬೆಳೆಗಾರ ಪಾಂಡAಡ ನರೇಶ್, ಕಕ್ಕಬ್ಬೆ ವ್ಯಾಪ್ತಿಯಲ್ಲಿ ಕಳೆದ ಬಾರಿಗಿಂತ ಪ್ರಸ್ತುತ ವರ್ಷ ಹೆಚ್ಚು ಮಳೆಯಾಗಿದ್ದು, ಕಾಫಿ ಬೆಳೆ ಕೊಳೆತು ನೆಲಕಚ್ಚಿದೆ. ಆದರೆ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆAದು ಟೀಕಿಸಿದರು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಬೆಳೆಗಾರರು ಮತ್ತಷ್ಟು ಸಮಸ್ಯೆ ಎದುರಿಸಲಿದ್ದಾರೆ. ಕಾಫಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಬೆಳೆಗಾರರು ನಿರಂತರ ಸಮಸ್ಯೆಯಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಸAಬAಧಪಟ್ಟ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಸರ್ವೆ ನಡೆಸಿ ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಸಬೇಕು. ಬೆಳೆಗಾರರ ನಷ್ಟಕ್ಕೆ ಅನುಗುಣವಾಗಿ ಸರ್ಕಾರ ಪರಿಹಾರ ನೀಡಬೇಕೆಂದು ನರೇಶ್ ಒತ್ತಾಯಿಸಿದರು. ನಾಲಾಡಿ ಗ್ರಾಮದ ಬೆಳೆಗಾರ ಅಲ್ಲಾರಂಡ ಸನ್ನು ಅಯ್ಯಪ್ಪ ಮಾತನಾಡಿ ನಾಲ್ಕು ನಾಡು ವ್ಯಾಪ್ತಿಯ ಕಕ್ಕಬ್ಬೆ, ಕುಂಜಿಲ, ಯವಕಪಾಡಿ, ಮರಂದೋಡ ಸೇರಿದಂತೆ ವಿವಿಧೆಡೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಫಿ, ಬಾಳೆ ಹಾಗೂ ಇತರ ಕೃಷಿ ಫಸಲನ್ನು ನಾಶಪಡಿಸುತ್ತಿದೆ. ಅತಿಯಾದ ಮಳೆಯಿಂದಾದ ನಷ್ಟದೊಂದಿಗೆ ವನ್ಯಜೀವಿಗಳ ದಾಳಿಯಿಂದಲೂ ಬೆಳೆಗಾರರು ಬೇಸತ್ತು ಹೋಗಿದ್ದಾರೆ. ಸರ್ಕಾರ ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಕ್ಕಬ್ಬೆ ವಿಎಸ್ಎಸ್ಎನ್ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಕುಂಜಿಲ ಗ್ರಾಮದ ಕಲ್ಯಾಟಂಡ ಸುಧಾ ಗಣಪತಿ ಉಪಸ್ಥಿತರಿದ್ದರು.