ಮಡಿಕೇರಿ, ಜು. ೩೦: ಸರಕಾರ ತನ್ನನ್ನು ಗುರುತಿಸಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿದೆ. ಇದು ತನಗೆ ಸಿಕ್ಕಿದ ಸ್ಥಾನ ಮಾನವಲ್ಲ, ಜಿಲ್ಲೆಯ ಜನತೆಗೆ, ಪಕ್ಷದ ಎಲ್ಲ ಕಾರ್ಯಕರ್ತರಿಗೆ ದೊರೆತ ಸ್ಥಾನವಾಗಿದ್ದು, ಮುತುವರ್ಜಿ ಯೊಂದಿಗೆ ಜವಾಬ್ದಾರಿ ನಿರ್ವಹಣೆ ಮಾಡಲಾಗುವದೆಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ನೂತನ ಅಧ್ಯಕ್ಷ ನಾಪಂಡ ರವಿಕಾಳಪ್ಪ ಹೇಳಿದರು.
ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕಾರ ಮಾಡಿ ಇಂದು ಜಿಲ್ಲೆಗೆ ಆಗಮಿಸಿದ ಅವರನ್ನು ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಮಡಿಕೇರಿ ನಗರ ಬಿಜೆಪಿ ವತಿಯಿಂದ ಕೋರಲಾದ ಆತ್ಮೀಯ ಸ್ವಾಗತ ಸ್ವೀಕಾರ ಮಾಡಿ ಅವರು ಮಾತನಾಡಿದರು. ಮಂಡಳಿ ವ್ಯಾಪ್ತಿಗೆ ಅರಣ್ಯ, ತೋಟಗಾರಿಕೆ, ಕೃಷಿ, ಪರಿಸರ, ಆಯುಷ್ ಇಲಾಖೆಗಳು ಒಳಪಡುತ್ತವೆ. ಪ್ರತಿಯೊಂದು ಜೀವ ಸಂಕುಲ ಉಳಿಸಿಕೊಂಡು ಹೋಗುವದು ಪ್ರತಿಯೋರ್ವರ ಜವಾಬ್ದಾರಿಯಾಗಿದೆ. ಇಲಾಖೆಗಳ ಮೂಲಕ ಜೀವ ಸಂಕುಲ ಉಳಿವಿಗೆ ಒತ್ತು ನೀಡಲಾಗುವದೆಂದು ಹೇಳಿದರು. ಎಲ್ಲರ ಆಶೀರ್ವಾದದಿಂದ ತನಗೆ ಅಧಿಕಾರ ಲಭಿಸಿದ್ದು, ಕಳಂಕ ರಹಿತ ಆಡಳಿತ ನಡೆಸುವದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ಸೇನಾನಿಗಳಿಗೆ ನಮನ
ಬಳಿಕ ದೇಶದ ಪ್ರಪ್ರಥಮ ಮಹಾದಂಡನಾಯಕ ಫೀ.ಮಾ. ಕೆ.ಎಂ.ಕಾರ್ಯಪ್ಪ, ಸ್ವಾತಂತ್ರö್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ, ಜ. ಕೆ.ಎಸ್. ತಿಮ್ಮಯ್ಯ, ಮೇ. ಮಂಗೇರಿರ ಮುತ್ತಣ್ಣ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೋಟೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಿಜೆಪಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮಡಿಕೇರಿ ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಉಪಾಧ್ಯಕ್ಷ ಬಿ.ಕೆ. ಜಗದೀಶ್, ಕಾರ್ಯದರ್ಶಿಗಳಾದ ಕೆ.ಎ. ಅಪ್ಪಣ್ಣ, ಉಮೇಶ್ ಸುಬ್ರಮಣಿ, ಖಜಾಂಚಿ ಎಸ್.ಮುರುಗನ್, ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪ್ರಶಾಂತ್, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಬಿ.ಎಂ. ರಾಜೇಶ್, ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಉಪಾಧ್ಯಕ್ಷ ಬಿ.ಕೆ. ಅರುಣ್ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಪ್ರಬಾರಿ ಬಿ.ಬಿ. ಭಾರತೀಶ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ಮಡಿಕೇರಿ ನಗರ ಸಭಾ ಸದಸ್ಯರುಗಳು, ಪಕ್ಷದ ಕಾರ್ಯಕರ್ತರು ಇದ್ದರು.
ಮಡಿಕೇರಿ ಕೊಡವ ಸಮಾಜದ ಪರವಾಗಿ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಹಾಗೂ ಪದಾಧಿಕಾರಿಗಳು ಸ್ವಾಗತ ಕೋರಿದರು.
ಮಕ್ಕಂದೂರು ಗ್ರಾ.ಪಂ. ಸದಸ್ಯರುಗಳಾದ ಬಿ.ಎನ್. ರಮೇಶ್ ಸುವರ್ಣ, ವಿಮಲಾ ರವಿ, ಸುನಂದ ಅವರುಗಳು ಸ್ವಾಗತ ಕೋರಿದರು.
ಮಕ್ಕಂದೂರು ಕೊಡವ ಸಮಾಜ
ಮಕ್ಕಂದೂರು ಕೊಡವ ಸಮಾಜ, ಪೊಮ್ಮಕ್ಕಡ ಪರಿಷತ್, ಮುಕ್ಕೋಡ್ಲು ವಿನ ವ್ಯಾಲಿ ಡ್ಯೂ ಅಸೋಸಿಯೇಶನ್ ವತಿಯಿಂದ ಸಂಪಿಗೆ ಕಟ್ಟೆ ಬಳಿ ಕೊಡವ ಸಮಾಜದ ಅಧ್ಯಕ್ಷರೂ ಆಗಿದ್ದ ರವಿ ಕಾಳಪ್ಪ ಅವರನ್ನು ಸಾಂಪ್ರದಾಯಿ ಕವಾಗಿ ದುಡಿಕೊಟ್ಟು ಹಾಡಿನೊಂದಿಗೆ ಸ್ವಾಗತ ಕೋರಲಾಯಿತು. ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಸಮಾಜ ಬಾಂಧವರು ಹೆದ್ದಾರಿಯಲ್ಲಿ ಕೆಲ ದೂರದವರೆಗೆ ಮೆರವಣಿಗೆ ಮಾಡು ವದರ ಮೂಲಕ ಬರಮಾಡಿ ಕೊಂಡರು. ಕೊಡವ ಸಮಾಜದ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ವ್ಯಾಲಿ ಡ್ಯೂ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ, ನೇತೃತ್ವದಲ್ಲಿ ಸಮಾಜದ ಪುರುಷ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.
ಜಿಲ್ಲೆಯ ಗಡಿಯಲ್ಲಿ ಸ್ವಾಗತ
ಕುಶಾಲನಗರ : ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ನಿಯೋಜನೆ ಗೊಂಡ ಎನ್.ಎಂ. ರವಿ ಕಾಳಪ್ಪ ಅವರು ಅಧಿಕಾರ ವಹಿಸಿಕೊಂಡು ಜಿಲ್ಲೆಗೆ ಆಗಮಿಸಿದ ಸಂದರ್ಭ ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಕುಶಾಲನಗರದಲ್ಲಿ ಆತ್ಮೀಯ ಸ್ವಾಗತ ಕೋರಿದರು.
ಕೊಡಗು ಗಡಿ ಕೊಪ್ಪ ಕಾವೇರಿ ಪ್ರತಿಮೆ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರವಿ ಕಾಳಪ್ಪ ಅವರಿಗೆ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು. ಈ ಸಂದರ್ಭ ಕಾವೇರಿ ಮಾತೆಗೆ ನಮನ ಸಲ್ಲಿಸಿದರು. ಈ ಸಂದರ್ಭ ನೆರೆದಿದ್ದವರಿಗೆ ಸಿಹಿ ವಿತರಣೆ ಮಾಡಲಾಯಿತು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ. ಮಾಜಿ ಅಧ್ಯಕ್ಷ ಹರೀಶ್ ಸೇರಿದಂತೆ ಪಕ್ಷದ ಪ್ರಮುಖರಾದ ಬಿ. ಅಮೃತ್ರಾಜ್, ಉಮಾಶಂಕರ್, ಎಂ.ಡಿ. ಕೃಷ್ಣಪ್ಪ, ಎಂ.ಎA. ಚರಣ್, ಬೋಸ್ಮೊಣ್ಣಪ್ಪ, ವೈಶಾಖ್, ಪುಂಡರೀಕಾಕ್ಷ, ಮಂಜುಳಾ ಮತ್ತಿತರರು ಇದ್ದರು.
ಸುಂಟಿಕೊಪ್ಪದಲ್ಲಿ ಸ್ವಾಗತ
ಸುಂಟಿಕೊಪ್ಪ : ನಾಪಂಡ ರವಿ ಕಾಳಪ್ಪ ಅವರಿಗೆ ಸುಂಟಿಕೊಪ್ಪ ಬಿಜೆಪಿ ವತಿಯಿಂದ ಸ್ವಾಗತ ಕೋರಲಾಯಿತು. ಕನ್ನಡ ವೃತ್ತದಲ್ಲಿ ಪಕ್ಷದ ಹಿರಿಯರಾದ ಪಿ.ಕೆ. ಮುತ್ತಣ್ಣ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು.
ಈ ಸಂದರ್ಭ ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಒಬಿಸಿ ಮಂಡಲ ಕಾರ್ಯದರ್ಶಿ ಪಿ.ಆರ್. ಸುನಿಲ್ ಕುಮಾರ್, ಶಕ್ತಿ ಕೇಂದ್ರದ ಅಧ್ಯಕ್ಷರು ಗಳಾದ ವಾಸು, ಬಿ.ಕೆ. ಪ್ರಶಾಂತ್, ಕಾರ್ಯಕರ್ತರುಗಳಾದ ರಾಜನ್, ಸಹದೇವನ್, ಆಶೋಕ್ ಮತ್ತಿತರರು ಇದ್ದರು.