ಮಡಿಕೇರಿ, ಜು.೨೮: ಸೂರಿಲ್ಲದ ಬಡವರ್ಗದವರಿಗೆ ತಲೆಗೊಂದು ಸೂರು ಒದಗಿಸಬೇಕೆಂಬದು ಸರಕಾರದ ಉದ್ದೇಶ., ಈ ನಿಟ್ಟಿನಲ್ಲಿ ಸರಕಾರ ಹಲವಷ್ಟು ಯೋಜನೆ ಗಳನ್ನೂ ಜಾರಿಗೆ ತಂದಿದೆ. ಸೂರಿಲ್ಲ ದವರು ಸರಕಾರೀ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ನಿವೇಶನ ಪಡೆದು ಕೊಳ್ಳಬಹುದಾಗಿದೆ. ಹಲವಾರು ಮಂದಿ ಇದರ ಸದುಪಯೋಗ ಕೂಡ ಪಡೆದು ಕೊಂಡಿದ್ದಾರೆ. ಸಾಕಷ್ಟು ಮಂದಿ ದುರುಪಯೋಗ ಪಡಿಸಿ ಕೊಂಡಿರುವದೂ ಕೂಡ ಅಲ್ಲಲ್ಲಿ ಕಂಡುಬರುತ್ತಿದೆ. ಇದಕ್ಕೆ ನಿದರ್ಶ£ ÀವೆಂಬAತೆ ಮಡಿಕೇರಿ ನಗರ ಸಭಾ ವ್ಯಾಪ್ತಿಯಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರ ಹೆಸರಿನಲ್ಲೂ ನಿವೇಶನದ ಹಕ್ಕು ವಿತರಣೆ ಮಾಡಲಾಗಿದೆ. ಹೆಂಡತಿಯ ಹೆಸರಿನಲ್ಲಿ ಸಿಕ್ಕಿದ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ ಇತ್ತ ಗಂಡನ ಹೆಸರಿನಲ್ಲಿರುವ ಮತ್ತೊಂದು ನಿವೇಶನಕ್ಕಾಗಿ ಬೇಲಿ ಹಾಕಿ ಕೊಂಡಿರುವದು ಕಂಡುಬAದಿದೆ..! ಇದರೊಂದಿಗೆ ಸುಳ್ಳು ವಿಳಾಸ ನೀಡಿ ಗ್ರಾಮಾಂತರ ಪ್ರದೇಶದ ವ್ಯಕ್ತಿಯೋರ್ವರು ಕೂಡ ನಿವೇಶನಕ್ಕಾಗಿ ಬೇಲಿ ಹಾಕಿಕೊಂಡಿರುವದು ಕಂಡು ಬಂದಿದೆ..!ಮಡಿಕೇರಿ ತಾಲೂಕಿನ ಕೆ.ಬಾಡಗ ಗ್ರಾಮದ ರಾಚಯ್ಯ ಎಂಬವರ ಪುತ್ರ ಹೆಚ್.ಆರ್.ಮರಿಸಿದ್ದ ಎಂಬವರಿಗೆ ೧೯೭೨ರಲ್ಲಿ ಕೆ.ಬಾಡಗ ಗ್ರಾಮದ ೮೬/೩ ಸ.ನಂ. ವ್ಯಾಪ್ತಿ ಪ್ರದೇಶದಲ್ಲಿ ೫೦/೬೦ ಅಡಿ ನಿವೇಶನದ ಹಕ್ಕು ಪತ್ರ ನೀಡಲಾಗಿದೆ. ಅಂದಿನ ಮಡಿಕೇರಿ ತಾಲೂಕು ತಹಶೀಲ್ದಾರರು ಹಕ್ಕು ಪತ್ರ ನೀಡಿದ್ದರು. ಇದೇ ಹಕ್ಕು ಪತ್ರವನ್ನು ಬಳಸಿಕೊಂಡು ಇದೀಗ ವಿದ್ಯಾನಗರದ ಬಳಿಯ ಬೆಲೆಬಾಳುವ ಜಾಗಕ್ಕೆ ಬೇಲಿ ಹಾಕಿ ಸುಳ್ಳು ವಿಳಾಸ ನೀಡಿ ನಮೂನೆ-೩ರನ್ನೂ ಕೂಡ ಪಡೆದುಕೊಳ್ಳಲಾಗಿದೆ. ಹೆಂಡತಿ ಹೆಸರಿನಲ್ಲೊಂದು ಮನೆ..!ಇತ್ತ., ಮರಿಸಿದ್ದ ತನ್ನ ಪತ್ನಿ ಹೆಚ್. ಎ. ಮಂಜುಳಾ ಹೆಸರಿನಲ್ಲಿ ಕೆ.ಬಾಡಗ ಗ್ರಾಮದ ಸ.ನಂ.೫೬/೧೦ರಲ್ಲಿರುವ ೩೦x೪೦ ವಿಸ್ತೀರ್ಣದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ೨೫.೬.೨೦೧೪ರಲ್ಲಿ ಅಂದಿನ ತಹಶೀಲ್ದಾರರು
ಮಂಜೂರು ಮಾಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಹಲವು ವರ್ಷ ಗಳಿಂದ ನೆಲೆಸಿದ್ದಾರೆ.
(ಮೊದಲ ಪುಟದಿಂದ)
ವಿದ್ಯಾನಗರದಲ್ಲಿ ಬೇಲಿ..!
೧೯೭೨ರಲ್ಲಿಯೇ ಹಕ್ಕು ಪತ್ರ ದೊರೆತಿದ್ದರೂ ಇದುವರೆಗೂ ಎಲ್ಲಿಯೂ ನಿವೇಶನ ಗುರುತು ಮಾಡಿರಲಿಲ್ಲ. ಸ.ನಂ.೮೬/೩ ಎಂದು ನಮೂದಿಸಿದರೆ ಪೂರ್ಣ ಕರ್ಣಂಗೇರಿ ಪ್ರದೇಶವನ್ನೇ ತೋರಿಸುತ್ತದೆ.