ಮಡಿಕೇರಿ, ಜು. ೨೮: ಮಡಿಕೇರಿ ನಗರದಲ್ಲಿ ಅಕ್ರಮವಾಗಿ ಆನೆದಂತ ಹಾಗೂ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಸಿಐಡಿ ಪೊಲೀಸ್ ಅರಣ್ಯ ಘಟಕದವರು ಈ ಸಂಬAಧ ಐವರು ಆರೋಪಿಗಳನ್ನು ಬಂಧಿಸಿ, ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಿಂಭಾಗದ ರಸ್ತೆಯ ಮುಳಿಯ ಬಸ್ ತಂಗುದಾಣದ ಬದಿಯಲ್ಲಿ ಮಹಾದೇವಸ್ವಾಮಿ, ಗುರು ಜಿ. ಮತ್ತು ಹೇಮಂತ್ ರಾಜ್ ಪಿ. ಎಂಬವರು ಸರ್ಕಾರದ ಪರವಾನಗೆ ಇಲ್ಲದೆ ಅಕ್ರಮವಾಗಿ ಎರಡು ಆನೆ ದಂತಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿ ಸುತ್ತಿರುವಾಗ ಪತ್ತೆ ಮಾಡಿ ಆರೋಪಿ ಗಳನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಗಿದೆ.

ಮತ್ತೊAದು ಪ್ರಕರಣದಲ್ಲಿ ಕನ್ನಂಡ ಪಡೆಬಿರ ವೃತ್ತದ ಬಳಿ ಇರುವ ಬಸ್ ತಂಗುದಾಣದ

(ಮೊದಲ ಪುಟದಿಂದ) ಬಳಿಯಲ್ಲಿ ಸುರೇಶ್ ಮತ್ತು ಶರವಣನ್ ಎಂಬವರು ಅಕ್ರಮವಾಗಿ ಎರಡು ಜೀವಂತ ನಕ್ಷತ್ರ ಆಮೆಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವಾಗ ಪತ್ತೆ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ವಿ. ಶರತ್‌ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪ್ರಭಾರ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ.ಯು. ಸವಿ, ಹೆಡ್‌ಕಾನ್ಸ್ಟೇಬಲ್ ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ ಮತ್ತು ಕಾನ್ಸ್ಟೇಬಲ್ ಗಳಾದ ಮಂಜುನಾಥ ಪಾಲ್ಗೊಂಡಿರುತ್ತಾರೆ.