ಮಡಿಕೇರಿ, ಜು. ೨೯: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ತಾ. ೩೧ ರÀಂದು ಪತ್ರಿಕಾ ದಿನಾಚರಣೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಆಗಮಿಸಲಿದ್ದಾರೆ. ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಿದ್ದಾರೆ.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕೆÀ್ಷ ಬಿ.ಆರ್ ಸವಿತಾರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಸಂಘದ ಉಪಾಧ್ಯಕ್ಷರು, ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯಕ್ರಮದ ಸಂಚಾಲಕ ಹೆಚ್.ಜೆ.ರಾಕೇಶ್ ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ಶೇ. ೮೦ ಕ್ಕಿಂತ ಅಧಿಕ ಅಂಕ ಪಡೆದ ಒಟ್ಟು ೨೩ ವಿದ್ಯಾರ್ಥಿಗಳು ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಬಾಚರಣಿಯಂಡ ಪರಿಧಿ ಪೊನ್ನಮ್ಮ, ಎಸ್.ಪಿ.ಚಿತ್ತಾರ, ಎಸ್.ಪಿ.ಇಂಚರ, ತಿಷ್ಯಾ, ಈಶ್ವಾನಿ, ಲಕ್ಷಿತಾ ಕೆ.ಎಸ್, ನಿವೇದ್ ಬಾಲಾಜಿ, ಧರುಣ್, ಸಂಸ್ಕೃತಿ, ಕೆ.ಜಿ.ಶಿವಾನಿ, ವಿ.ಎ.ಚಿಂತನ್, ಮಚ್ಚಮಾಡ ಆಯುಷ್ ಕುಟ್ಟಪ್ಪ, ಮಚ್ಚಮಾಡ ಆಕಾಶ್ ಚಿಟ್ಟಿಯಪ್ಪ, ಅಜ್ಜಿನಿಕಂಡ ಡಾನ್ ನಾಚಯ್ಯ, ಶಶಾಂಕ್ ಬೋಪಣ್ಣ, ದೀಕ್ಷಾ, ಸಮರ್ಥ್, ಚೇತನಾ ರೈ, ಸಮೃದ್ದಿ, ರಕ್ಷನ್, ಹಿಮಾನಿ, ಎ.ಇಂಚರ, ರೋಷನ್ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಗುವುದೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪತ್ರಿಕಾ ದಿನಾಚರಣೆ - ಪ್ರತಿಭಾ ಪುರಸ್ಕಾರ