ಕುಶಾಲನಗರ, ಜು. ೨೮: ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಸುರಿದ ಮಳೆ ಹಿನ್ನೆಲೆ ದಾಖಲೆ ಪ್ರಮಾಣದ ನೀರು ಹಾರಂಗಿಗೆ ಹರಿದು ಬಂದಿದೆ. ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಆದ ಕಾರಣ ಜಲಾಶಯಕ್ಕೆ ಈ ಸಾಲಿನಲ್ಲಿ ಒಟ್ಟು ೨೨.೭೮ ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದೆ. ಈ ಸಂದರ್ಭ ನದಿಗೆ ೨೦.೬೫ ಟಿಎಂಸಿ ನೀರು ಹರಿಸಲಾಗಿದೆ.
ಪ್ರಸಕ್ತ ಜಲಾಶಯಕ್ಕೆ ೩೧೧೪ ಕೂಸೆಕ್ಸ್ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಗೆ ೧೦೩೩ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಪ್ರಸಕ್ತ ಹಾರಂಗಿ ಅಣೆಕಟ್ಟಿನಲ್ಲಿ ೭.೮೨ ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಇದೆ ಎಂದು ಹಾರಂಗಿ ಅಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.