ಗೋಣಿಕೊಪ್ಪ ವರದಿ, ಜು. ೨೮: ರಾಷ್ಟç ಮತ್ತು ವಿದೇಶಗಳಲ್ಲಿ ದೊರೆಯುವ ಅರಣ್ಯ ಪೂರಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಉತ್ಸುಕತೆ ತೋರಬೇಕು ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಎನ್ ಮೂರ್ತಿ ಸಲಹೆ ನೀಡಿದರು.ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಅರಣ್ಯ ಪದವೀಧರರು ಉಪ ವಲಯ, ವಲಯ ಅಧಿಕಾರಿ, ಸಹಾಯಕ ಸಂರಕ್ಷಣಾಧಿಕಾರಿ ಹುದ್ದೆ ನಿಭಾಯಿಸುವಷ್ಟು ಮಾತ್ರ ಮಾನಸಿಕವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಶೇ. ೧೦ ರಷ್ಟು ವಿದ್ಯಾರ್ಥಿಗಳಾದರೂ ಐಎಫ್‌ಎಸ್, ಫಾರಿನ್ ಸರ್ವಿಸ್ ಮೂಲಕ ಹುದ್ದೆ ಗಿಟ್ಟಿಸಿಕೊಳ್ಳಲು ವಿಪುಲ ಅವಕಾಶವಿದೆ. ವಿದೇಶಗಳಲ್ಲಿ ಕೂಡ ಸರ್ಕಾರದ ಆರ್ಥಿಕ ಪ್ರೋತ್ಸಾಹದೊಂದಿಗೆ ಅರಣ್ಯ ವಿಜ್ಞಾನ ಮುಂದುವರಿಸಲು ಅವಕಾಶವಿದೆ. ಇಲಾಖೆಯಲ್ಲಿ ಮತ್ತಷ್ಟು ನೀತಿ ಅನುಷ್ಠಾನಗೊಳಿಸಲು ಐಎಫ್‌ಎಸ್ ಶಿಕ್ಷಣಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ ಜಗದೀಶ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಒಬ್ಬ ಪದವೀಧರರನ್ನು ರೂಪಿಸಲು ಸರ್ಕಾರ ೯೬ ಲಕ್ಷ ವಿನಿಯೋಗಿಸುತ್ತಿದೆ. ವೈಯಕ್ತಿಕ ಬದುಕಿನೊಂದಿಗೆ ಸಮಾಜಕ್ಕೆ ಹೆಚ್ಚು ಅರ್ಪಣೆಯಾಗುವಂತೆ ಸೇವೆ ನೀಡಲು ಮಾನಸಿಕವಾಗಿ ಸಿದ್ದರಾಗಬೇಕು. ಕಿರಿಯ ವಿದ್ಯಾರ್ಥಿಗಳಿಗೆ ಅರಣ್ಯ ಶಾಸ್ತçದಲ್ಲಿನ ಧನಾತ್ಮಕ ವಿಚಾರವನ್ನು ತಿಳಿಸುವ ಗುಣ ರೂಡಿಸಿಕೊಳ್ಳಬೇಕು ಎಂದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಕುಲ ಸಚಿವ ಡಾ. ಆರ್. ಲೋಕೇಶ, ವಿದ್ಯಾರ್ಥಿ ಕಲ್ಯಾಣ ಮುಖ್ಯಸ್ಥ ಡಾ. ಎನ್. ಶಿವಶಂಕರ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್‌ಗೌಡ ಪಾಟೀಲ್ ಇದ್ದರು.

ಕಾಲೇಜು ಮತ್ತು ವಿದ್ಯಾರ್ಥಿ ನಿಲಯದ ವರದಿ ವಾಚಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ಹಾಗೂ ವಿಶೇಷ ಸಾಧಕರಿಗೆ ಬಹುಮಾನ ವಿತರಣೆ, ವಸತಿ ನಿಲಯದ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು.