ಮಡಿಕೇರಿ, ಜು. ೨೯: ರೋಟರಿ ಮಡಿಕೇರಿ ವುಡ್ಸ್ನ ಸಹಯೋಗದಲ್ಲಿ "ಆರೋಗ್ಯ ಸಿರಿ" ಕಾರ್ಯಕ್ರಮದ ಅಡಿಯಲ್ಲಿ ನಗರದ ಸಾಮ್ಯ ಆಯುರ್ವೇದ ಕ್ಲಿನಿಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ "ಸ್ವರ್ಣಾಮೃತ ಪ್ರಾಶನ" ಕಾರ್ಯಕ್ರಮವನ್ನು ಡಾ. ರವಿ ಅಪ್ಪಾಜಿ ಉದ್ಘಾಟಿಸಿದರು. ನಂತರ ಮಡಿಕೇರಿ, ಜು. ೨೯: ರೋಟರಿ ಮಡಿಕೇರಿ ವುಡ್ಸ್ನ ಸಹಯೋಗದಲ್ಲಿ "ಆರೋಗ್ಯ ಸಿರಿ" ಕಾರ್ಯಕ್ರಮದ ಅಡಿಯಲ್ಲಿ ನಗರದ ಸಾಮ್ಯ ಆಯುರ್ವೇದ ಕ್ಲಿನಿಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ "ಸ್ವರ್ಣಾಮೃತ ಪ್ರಾಶನ" ಕಾರ್ಯಕ್ರಮವನ್ನು ಡಾ. ರವಿ ಅಪ್ಪಾಜಿ ಉದ್ಘಾಟಿಸಿದರು. ನಂತರ ಪ್ರಯತ್ನವನ್ನು ಶ್ಲಾಘಿಸಿದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ವಕೀಲ ರತನ್ ತಮ್ಮಯ್ಯ ಮಾತನಾಡಿ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸ್ವರ್ಣ ಪ್ರಾಶನ ಉಪಯುಕ್ತ ಎಂದರು.
ರೋಟರಿ ವುಡ್ಸ್ ನ ಸದಸ್ಯೆ ಹಾಗೂ ಸಾಮ್ಯ ಕ್ಲಿನಿಕ್ ಮಾಲಿಕೆ ಡಾ. ಅಧಿತಿ ಪಿ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವರ್ಣ ಪ್ರಾಶನದ ಅಗತ್ಯತೆ ಮತ್ತು ಇಂದಿನ ಪರಿಸ್ಥಿತಿಯಲ್ಲಿ ೧೬ ವರ್ಷದ ಒಳಗಿನ ಮಕ್ಕಳು ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿಸಿದರು.
ಮಡಿಕೇರಿ ವುಡ್ಸ್ನ ಅಧ್ಯಕ್ಷ ಸಂಪತ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭ ಮಡಿಕೇರಿ ವುಡ್ಸ್ನ ಖಜಾಂಜಿ ಕವಿತಾ, ಉಪಾಧ್ಯಕ್ಷೆ ಪದ್ಮಗಿರಿ, ಡಾ. ಅನುಶ್ರೀ, ರೋಟರಿ ಪಬ್ಲಿಕ್ ಇಮೇಜ್ ಚೇರ್ಮನ್ ಅನಿಲ್ ಹೆಚ್.ಟಿ., ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಹಾಗೂ ರೋಟರಿ ಮಿಸ್ಟಿ ಹಿಲ್ಸ್ನ ಅಂಬೆಕಲ್ ಜೀವನ್, ಡಾ. ಉದಯಶಂಕರ್, ಡಾ. ಈಶ್ವರಿ, ಡಾ. ರಾಜಾರಾಮ್ ಹಾಗೂ ಇತರರು ಇದ್ದರು.
ವುಡ್ಸ್ನ ಕಾರ್ಯದರ್ಶಿ ವಸಂತ್ ಕುಮಾರ್ ವಂದಿಸಿದರು.