ಮೂರ್ನಾಡು, ಜು. ೨೯: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಲಾಯಿತು.

ದಿನದ ಮಹತ್ವದ ಬಗ್ಗೆ ವಾಣಿಜ್ಯ ಉಪನ್ಯಾಸಕರಾದ ಕಾಲೇಟಿರ ಸೋಮಯ್ಯ ಅವರು ತಿಳಿಸಿಕೊಟ್ಟರು. ಪರಿಸರದ ವಿನಾಶವನ್ನು ತಪ್ಪಿಸದೇ ಹೋದಲ್ಲಿ ಅದು ಜೀವಕುಲದ ನಾಶಕ್ಕೆ ಮೂಲ ಕಾರಣವಾಗುತ್ತದೆ. ಪ್ರತಿದಿನವೂ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಮೂಡಿಸುತ್ತಿದ್ದರೂ ಕೂಡ ಪರಿಸರ ಮಲಿನವಾಗುವುದು ಹಾಗೂ ನಾಶವಾಗುವುದು ನಿಂತಿಲ್ಲ. ಇಂದು ಅನೇಕ ಜೀವಸಂಕುಲಗಳು ಮಾನವನ ದುರಾಸೆಯಿಂದ ಅಳಿವಿನ ಅಂಚಿನಲ್ಲಿವೆೆ. ಕಾಡನ್ನು ಕಡಿದು ನಾಡಾಗಿ ಪರಿವರ್ತಿಸುತ್ತಿರುವುದರಿಂದ ಪರಿಸರದಲ್ಲಿ ಬದಲಾವಣೆಗಳು ಉಂಟಾಗಿ ಅಕಾಲದಲ್ಲಿ ಮಳೆಯಾಗುತ್ತಿದೆ. ಆದ್ದರಿಂದ ಮನುಷ್ಯನ ಉಳಿವಿಗೆ ಅತ್ಯಗತ್ಯವಾಗಿ ಬೇಕಾದ ಪರಿಸರವನ್ನು ಎಲ್ಲರೂ ಉಳಿಸಿ ಬೆಳೆಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.