ಮಡಿಕೇರಿ, ಜು. ೨೯: ನಗರಸಭಾ ಕಚೇರಿ ಆವರಣದಲ್ಲಿನ ಶೌಚಾಲಯವನ್ನು ಸ್ವಚ್ಛಗೊಳಿಸುವಲ್ಲಿ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ನಗರಸಭೆಯ ಆವರಣದಲ್ಲಿನ ಅಶುಚಿತ್ವ ಸೇರಿದಂತೆ ಶೌಚಾಲಯದಲ್ಲಿನ ದುರಾವಸ್ಥೆಯ ಕುರಿತು ‘ಶಕ್ತಿ’ ವರದಿ ಮಾಡಿದ ಬೆನ್ನಲ್ಲೇ ಕಾಡಿನಿಂದ ಆವೃತ್ತವಾಗಿದ್ದ ನಗರಸಭೆಯ ಆವರಣವನ್ನು ಶುಚಿಗೊಳಿಸುವ ಕಾರ್ಯ ಇಂದು ಬೆಳಿಗ್ಗೆ ಬಿರುಸಿನಿಂದ ನಡೆಯುತ್ತಿತ್ತು. ಇದರೊಂದಿಗೆ ಶೌಚಗುಂಡಿಯನ್ನೂ ಕೂಡ ಬಳಕೆಗೆ ಉಪಯುಕ್ತವಾಗುವಂತೆ ಶುಚಿ ಮಾಡಲಾಗಿದೆ.