ಶನಿವಾರಸಂತೆ, ಜು. ೨೯ : ಸಮೀಪದ ಶಿರಂಗಾಲ ಬೆಳ್ಳಾರಳ್ಳಿ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಲಕ್ಷಿö್ಮ (೩೪) ಅವರಿಗೆ ಕಟ್‌ಮಂಡಲ (ಕೊಳಕು ಮಂಡಲ) ಹಾವು ಕಚ್ಚಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಕ್ಷಿö್ಮ ಗುರುವಾರ ಮನೆಯಲ್ಲಿ ಮಕ್ಕಳ ಜತೆ ಕುಳಿತು ಟಿವಿ ನೋಡುತ್ತಿರುವಾಗ ಅಡುಗೆ ಕೋಣೆಯಿಂದ ಬಂದ ಹಾವು ಕಾಲಿಗೆ ಕಚ್ಚಿದ್ದು ಇರುವೆಯೆಂದು ಭಾವಿಸಿ ಸುಮ್ಮನಿದ್ದರು. ಬಳಿಕ ಟಿವಿ ಆಫ್ ಮಾಡಲು ಹೋದಾಗ ಪಕ್ಕದಲ್ಲಿದ್ದ ಹಾವು ಕಾಣಿಸಿದೆ. ರಾತ್ರೆ ಮನೆಮದ್ದು ಮಾಡಿಕೊಂಡು, ನೋವು ಹೆಚ್ಚಾದಾಗ ಶುಕ್ರವಾರ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದರು.
ಲಕ್ಷಿö್ಮ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸ್ ಕಾನ್ಸ್ಟೇಬಲ್ ನಿಶಾ ಹಾಗೂ ಸಿಬ್ಬಂದಿ ಲೋಹಿತ್ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.