ಹೆಬ್ಬಾಲೆ ಗ್ರಾಮಸಭೆ
ಕೂಡಿಗೆ, ಜು. ೨೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯು ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಸಂತೆ ಮೇಳ ಸಭಾಂಗಣದಲ್ಲಿ ನಡೆಯಿತು.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಮಳೆ ಆಧಾರಿತವಾಗಿ ಜೋಳದ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಜೋಳ ಬೆಳೆಯು ಈಗಾಗಲೇ ಹೂ ಕಡೆಯುವ ಹಂತವಾಗಿದ್ದು ಕೊನೆಯ ಭಾಗದಲ್ಲಿ ಯೂರಿಯಾ ಗೊಬ್ಬರವನ್ನು ಹಾಕುವ ಮೂಲಕ ಜೋಳ ಕಾಳು ಬಲಿಷ್ಠವಾಗಿ ಕಟ್ಟಲು ರೈತರು ಯೂರಿಯಾ ಗೊಬ್ಬರವನ್ನು ಹಾಕುತ್ತಾರೆ, ಆದರೆ ಯೂರಿಯಾ ಗೊಬ್ಬರವು ಕಂಪೆನಿಯಿAದ ಸಕಾಲದಲ್ಲಿ ಬಾರದ ಹಿನ್ನೆಲೆಯಲ್ಲಿ ರೈತರ ಬೇಡಿಕೆ ಹೆಚ್ಚಾಗಿ ಯೂರಿಯಾ ಗೊಬ್ಬರಕ್ಕೆ ಪರದಾಡುವಂತ ಪ್ರಸಂಗ ಎದುರಾಗಿದೆ. ಇದನ್ನು ಸರಿಪಡಿಸಲು ಸಹಕಾರ ಸಂಘಗಳಿಗೆ ಯೂರಿಯಾ ಗೊಬ್ಬರದ ಮಾರಾಟಕ್ಕೆ ಹೆಚ್ಚು ಒದಗಿಸಬೇಕೆಂದು ನೂರಾರು ರೈತರು ಗ್ರಾಮ ಸಭೆಯ ಮೂಲಕ ಕೃಷಿ ಇಲಾಖೆಯ ಅಧಿಕಾರಿಗೆ ಆಗ್ರಹಿಸಿದರು.
೪೭/೨ ಪೈಸಾರಿ ಜಾಗದಲ್ಲಿ ಈಗಾಗಲೇ ಮನೆ ನಿರ್ಮಾಣ ಮಾಡಿಕೊಂಡಿರುವ ಕುಟುಂಬದವರಿಗೆ ೯ ಮತ್ತು ೧೧ ಒಪ್ಪಿಗೆ ಪತ್ರಕ್ಕೆ ಸಂಬAಧಿಸಿದAತೆ ಅನೇಕ ಚರ್ಚೆಗಳು ನಡೆದವು. ಮರೂರು ಗ್ರಾಮದಲ್ಲಿ ಮನೆಗಳ ಪಕ್ಕದಲ್ಲಿ ಹಸುಗಳ ಸಗಣಿ ಗೊಬ್ಬರ ತಿಪ್ಪೆಗಳನ್ನು ಮಾಡಿಕೊಂಡಿ ರುವುದರಿಂದ ತೊಂದರೆಯಾಗಿದ್ದು, ಜೊತೆಗೆ ರೋಗ ರುಜಿನಗಳು ಹರಡುತ್ತಿವೆ. ಇವುಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಾದ ಮಧುಸೂದನ್, ನಟರಾಜ್, ಗಿರೀಶ್ ಕುಮಾರ್, ಮಹದೇವ ಒತ್ತಾಯ ಮಾಡಿದರು. ಇದಕ್ಕೆ ಸಂಬAಧಿಸಿದAತೆ ಸ್ಥಳೀಯರಿಗೆ ಸೂಚನಾ ಪತ್ರವನ್ನು ನೀಡಲಾಗಿದೆ. ಅದರ ಮುಂದಿನ ಕ್ರಮವನ್ನು ನಿಯಮಾನುಸಾರವಾಗಿ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷ ಹೆಚ್.ಎಸ್. ಮಂಜುನಾಥ ತಿಳಿಸಿದರು. ಹಳೆಗೊಟೆ ಮತ್ತು ಹೆಬ್ಬಾಲೆ ವ್ಯಾಪ್ತಿಯಲ್ಲಿ ಉಪ ರಸ್ತೆಗಳ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಗ್ರಾಮಸ್ಥರಾದ ಮಂಜುಳ, ರಮೇಶ್, ಅರವಿಂದ್ ನಾಗರಾಜ್ ಸಭೆಗೆ ತಿಳಿಸಿದರು. ಸಭೆಯಲ್ಲಿ ೧೭/೨ ಪೈಸಾರಿ ಜಾಗಲ್ಲಿ ಶವ ಸಂಸ್ಕಾರಕ್ಕೆ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಅದರ ಬಳಕೆಯ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಅಧ್ಯಕ್ಷ ಮಂಜುನಾಥ ಈಗಾಗಲೇ ಹೆಬ್ಬಾಲೆ ಗ್ರಾಮಸ್ಥರಿಗೆ ಶವ ಸಂಸ್ಕಾರಕ್ಕೆ ಜಾಗ ಗುರುತಿಸಲ್ಪಟಿರುವ ಹಿನ್ನೆಲೆಯಲ್ಲಿ ಇದರ ಪ್ರಯೋಜನ ಪಡೆಯಲು ತಿಳಿಸಿದರು. ಸಭೆಯಲ್ಲಿ ೪೭/೨ ರ ಪೈಸಾರಿ ಜಾಗಕ್ಕೆ ಸಂಬAಧಿಸಿದAತೆ ಮತ್ತು ನಿವೇಶನ ರಹಿತರಿಗೆ ಮನೆಗಳ ನೀಡುವ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿಯನ್ನು ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲದೆ ವಾರ್ಡ್ ಸಭೆಗಳಲ್ಲಿ ಬಂದಿರುವ ತೆರವುಗೊಳಿಸುವಂತೆ ಗ್ರಾಮಸ್ಥರಾದ ಮಧುಸೂದನ್, ನಟರಾಜ್, ಗಿರೀಶ್ ಕುಮಾರ್, ಮಹದೇವ ಒತ್ತಾಯ ಮಾಡಿದರು. ಇದಕ್ಕೆ ಸಂಬAಧಿಸಿದAತೆ ಸ್ಥಳೀಯರಿಗೆ ಸೂಚನಾ ಪತ್ರವನ್ನು ನೀಡಲಾಗಿದೆ. ಅದರ ಮುಂದಿನ ಕ್ರಮವನ್ನು ನಿಯಮಾನುಸಾರವಾಗಿ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷ ಹೆಚ್.ಎಸ್. ಮಂಜುನಾಥ ತಿಳಿಸಿದರು. ಹಳೆಗೊಟೆ ಮತ್ತು ಹೆಬ್ಬಾಲೆ ವ್ಯಾಪ್ತಿಯಲ್ಲಿ ಉಪ ರಸ್ತೆಗಳ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಗ್ರಾಮಸ್ಥರಾದ ಮಂಜುಳ, ರಮೇಶ್, ಅರವಿಂದ್ ನಾಗರಾಜ್ ಸಭೆಗೆ ತಿಳಿಸಿದರು. ಸಭೆಯಲ್ಲಿ ೧೭/೨ ಪೈಸಾರಿ ಜಾಗಲ್ಲಿ ಶವ ಸಂಸ್ಕಾರಕ್ಕೆ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಅದರ ಬಳಕೆಯ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಅಧ್ಯಕ್ಷ ಮಂಜುನಾಥ ಈಗಾಗಲೇ ಹೆಬ್ಬಾಲೆ ಗ್ರಾಮಸ್ಥರಿಗೆ ಶವ ಸಂಸ್ಕಾರಕ್ಕೆ ಜಾಗ ಗುರುತಿಸಲ್ಪಟಿರುವ ಹಿನ್ನೆಲೆಯಲ್ಲಿ ಇದರ ಪ್ರಯೋಜನ ಪಡೆಯಲು ತಿಳಿಸಿದರು. ಸಭೆಯಲ್ಲಿ ೪೭/೨ ರ ಪೈಸಾರಿ ಜಾಗಕ್ಕೆ ಸಂಬAಧಿಸಿದAತೆ ಮತ್ತು ನಿವೇಶನ ರಹಿತರಿಗೆ ಮನೆಗಳ ನೀಡುವ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿಯನ್ನು ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲದೆ ವಾರ್ಡ್ ಸಭೆಗಳಲ್ಲಿ ಬಂದಿರುವ ಇಲಾಖೆಯವರಿಗೆ ಪಂಚಾಯಿತಿ ವತಿಯಿಂದ ಪತ್ರ ವ್ಯವಹಾರ ಮಾಡಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯ ಎಂದರು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಹೆಬ್ಬಾಲೆ ಪಶು ವೈದ್ಯಾಧಿಕಾರಿ ಸಂಜೀವಕುಮಾರ್ ಆರ್. ಶಿಂಧೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಬಾಸ್ಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅರುಣಾಕುಮಾರಿ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.