ಪಾಲಿಬೆಟ್ಟ: ಕಾರ್ಗಿಲ್ ವಿಜಯೋತ್ಸವ ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣೆ ಕಾರ್ಯಕ್ರಮ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ನಡೆಯಿತು. ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ ಏಳನೇ ವರ್ಷದ ಕಾರ್ಯಕ್ರಮ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಗಾಳಿ ಮಳೆ ಚಳಿಯನ್ನು ಲೆಕ್ಕಿಸದೆ ಪ್ರಾಣ ಒತ್ತೆಯಿಟ್ಟು ಗಡಿ ಕಾಯುವ ಮೂಲಕ ದೇಶ ಸೇವೆಮಾಡುವ ಯೋಧರನ್ನ ಪ್ರತಿಯೊಬ್ಬರು ಗೌರವಿಸಬೇಕಾಗಿದೆ. ತಮ್ಮ ಮಕ್ಕಳನ್ನು ದೇಶ ರಕ್ಷಣೆಗೆ ಕಳುಹಿಸಿ ಹುತಾತ್ಮನಾದ ಯೋಧನ ಕುಟುಂಬ ಅತ್ಯಂತ ಸಂಕಷ್ಟದಲ್ಲಿದ್ದು ಇದರ ಬಗ್ಗೆಯೂ ಪ್ರತಿಯೊಬ್ಬರು ಗಮನಹರಿಸಬೇಕಾಗಿದೆ.

ನಾವು ಕಾರ್ಗಿಲ್ ವಿಜಯೋತ್ಸವಕ್ಕೆ ಸೀಮಿತವಾಗದೆ ಕಾರ್ಗಿಲ್‌ನಲ್ಲಿ ಹುತಾತ್ಮರಾದ ಕುಟುಂಬದವರ ಸಂಕಷ್ಟಕ್ಕೆ ಸ್ಪಂದಿಸುವAತಾಗಬೇಕೆAದು ಹೇಳಿದ ಅವರು ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣೆಯನ್ನು ಗ್ರಾಮದಲ್ಲಿ ಆಚರಿಸಲಾಗುತ್ತಿದ್ದು ಕಲಾಂ ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು. ಕೇರಳದ ಉರಗ ತಜ್ಞ ಸುರೇಶ್ ಮಾತನಾಡಿ, ಹಚ್ಚ ಹಸಿರಿನ ಸುಂದರ ಪರಿಸರದೊಂದಿಗೆ ನಾವು ಬದುಕು ಕಟಿಕೊಂಡಿದ್ದೇವೆ ಪರಿಸರದಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ಜೀವನ ಶೈಲಿಯಲ್ಲಿ ಮುನ್ನಡೆಯುತ್ತಿದೆ. ಕೊಡಗು ಕೇರಳ ವ್ಯಾಪ್ತಿಯಲ್ಲಿ ಅನೇಕ ತರಹದ ಉರಗಗಳು ಜೀವಿಸುತ್ತವೆ. ಅವು ಯಾರಿಗೂ ತೊಂದರೆ ಕೊಡಲ್ಲ, ಉರಗಗಳಿಗೆ ತೊಂದರೆಯಾದರೆ ಮನುಷ್ಯನ ಮೇಲೆ ದಾಳಿ ಮಾಡುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡ ೨೫ಸಾವಿರಕ್ಕೂ ಹೆಚ್ಚು ಉರಗಗಳನ್ನ ರಕ್ಷಣೆ ಮಾಡಲಾಗಿದ್ದು ಇದರಲ್ಲಿ ೨ಸಾವಿರಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ಹಾವುಗಳು ಕಂಡು ಬಂದಲ್ಲಿ ಜಿಲ್ಲೆಯಲ್ಲಿರುವ ಉರಗ ರಕ್ಷಕರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಸನ್ಮಾನ ಗೌರವ

ಕೇರಳದ ಪ್ರಖ್ಯಾತ ಉರಗ ತಜ್ಞ ಸುರೇಶ್, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಚೆನ್ನಯ್ಯನ ಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಶಿವಪ್ಪ ಗೋಟಿಯಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಯೋಧರ ಕುಟುಂಬ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಉರಗ ರಕ್ಷಕರು, ಸಮಾಜ ಸೇವಕರನ್ನ ನೆನಪಿನ ಕಾಣಿಕೆ ನೀಡಿ ಗೌರವಿಸ ಲಾಯಿತು. ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ರಕ್ತದಾನ ಶಿಬಿರವು ನಡೆಯಿತು. ಸರ್ವ ಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್, ಮಡಿಕೇರಿ ರಕ್ತನಿಧಿ ಕೇಂದ್ರದ ಕರುಂಬಯ್ಯ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶೀಲಾ, ಗಣೇಶ್, ವಿಜು, ಶಾಲಾ ಮುಖ್ಯಶಿಕ್ಷಕಿ ಸಿದ್ದರಾಜಮ್ಮ, ಪಾಲಿಬೆಟ್ಟ ಸಮಾಜಸೇವಕ ಮುನೀರ್, ಕೊಡಗು ಮಲಯಾಳಿ ಸಂಘದ ಕ್ರೀಡಾ ಸಂಚಾಲಕ ರದೀಶ್, ಡಾ. ವಿಜಯಕಾಂತ್, ಸರ್ವ ಸಹಾಯಿ ಮಿತ್ರ ಮಂಡಳಿಯ ಗೌರ ವಾಧ್ಯಕ್ಷ ವಿಜು ನಾರಾಯಣ್, ಉಪಾಧ್ಯಕ್ಷ ಸಲಾಂ, ಕಾರ್ಯದರ್ಶಿ ಶಶಿ ಅಚ್ಯುತನ್, ಸಹ ಕಾರ್ಯದರ್ಶಿ ಇಂದಿರಾ ಮುರುಗೇಶ್, ಸಂಘಟನ ಕಾರ್ಯದರ್ಶಿ ಮನೋಜ್, ಪ್ರಮುಖರಾದ ಮಹೇಂದ್ರ, ಶಿಲ್ಪ, ಹೇಮಾ ಕಲಾವಿದ ಬಾವಾ ಮಾಲ್ದಾರೆ, ಹರೀಶ್, ವಿನುಕುಮಾರ್ ಸೇರಿದಂತೆ ಮತ್ತಿತರರಿದ್ದರು.ಶನಿವಾರಸಂತೆ: ಇಂದು ಕಾರ್ಗಿಲ್ ವಿಜಯ್ ದಿವಸ್‌ವನ್ನು ಆಚರಿಸಿ ಸಂತಸ ಪಡುವ ಹಾಗೆಯೇ ಅಂದು ಯುದ್ಧದಲ್ಲಿ ಹುತಾತ್ಮರಾದವರ ಬಲಿದಾನವನ್ನೂ ಸ್ಮರಿಸಿ ಪುಷ್ಪಾಂಜಲಿ ಸಮರ್ಪಿಸುವುದು ಕರ್ತವ್ಯವಾಗಿದೆ. ವೀರ ಯೋಧರ ದಿಟ್ಟ ಹೋರಾಟ ಯುವ ಸಮೂಹಕ್ಕೆ ಆದರ್ಶವಾಗಬೇಕು ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎ.ಎನ್. ಮಹೇಶ್‌ಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ನಿವೃತ್ತ ಸೈನಿಕರ ಸಂಘದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ದಿನದ ಪ್ರಯುಕ್ತ ಅವರು ಯುದ್ಧದಲ್ಲಿ ಮಡಿದ ವೀರ ಯೋಧರನ್ನು ಸ್ಮರಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ನಿವೃತ್ತ ಸೈನಿಕ ಕೆ.ವಿ. ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎನ್. ರಘು, ಉಪನ್ಯಾಸಕ ಚಂದ್ರಕಾAತ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಸೈನಿಕರ ತ್ಯಾಗ - ಬಲಿದಾನವನ್ನು ಸ್ಮರಿಸಿದರಷ್ಟೆ ಸಾಲದು, ಯುವ ಜನಾಂಗ ಅವರ ಮತ್ತು ಕುಟುಂಬದವರ ದೇಶಪ್ರೇಮ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಘದ ಉಪಾಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಎಸ್.ಎನ್. ಪಾಂಡು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾಶೇಖರ್, ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯ ಸರ್ದಾರ್ ಅಹಮ್ಮದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರೋಜಮ್ಮೆ, ಶಿಕ್ಷಕ ಕೆ.ಪಿ. ಜಯಕುಮಾರ್, ಆಟೋಚಾಲಕರ, ವಾಹನ ಮಾಲೀಕರ ಸಂಘಗಳ ಪದಾಧಿಕಾರಿಗಳು, ವಿವಿಧ ಶಾಲಾ - ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.

ಕಾರ್ಯಕ್ರಮ ಆರಂಭಕ್ಕೆ ಮೊದಲು ಭಾರತಿ, ಕಾವೇರಿ, ವಿಘ್ನೇಶ್ವರ, ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಗಳು, ಸುಪ್ರಜ ಗುರುಕುಲ ಹಾಗೂ ಸರ್ಕಾರಿ ಹಿರಿಯ, ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಪಟ್ಟಣದ ಬೈಪಾಸ್ ರಸ್ತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ರಾಷ್ಟçಧ್ವಜ ಹಿಡಿದು ದೇಶಪ್ರೇಮದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದು ಕಿತ್ತೂರು ರಾಣಿ ಚೆನ್ಮಮ್ಮ ವೃತ್ತದಲ್ಲಿ ಸಮಾವೇಶಗೊಂಡರು.ಮಡಿಕೇರಿ: ಐಮಂಗಲ - ಮಗ್ಗುಲ ಗ್ರಾಮದ ಅಟಲ್ ಸ್ಕಾರ‍್ಸ್ ಅಕಾಡೆಮಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಚಂದ್ರಶೇಖರ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷೆ ಪೂಜಾ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.ಮಡಿಕೇರಿ: ಐಮಂಗಲ - ಮಗ್ಗುಲ ಗ್ರಾಮದ ಅಟಲ್ ಸ್ಕಾರ‍್ಸ್ ಅಕಾಡೆಮಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಚಂದ್ರಶೇಖರ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷೆ ಪೂಜಾ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.ಮೂರ್ನಾಡು: ಲಯನ್ಸ್ ಕ್ಲಬ್ ಮೂರ್ನಾಡು ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಪುಷ್ಪನಮನದೊಂದಿಗೆ ಗೌರವ ಅರ್ಪಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಸುಬೇಧಾರ್ ಮೇಜರ್ ಸುರೇಶ್ ಹಾಗೂ ಹವಲ್‌ದಾರ್ ಅಶೋಕ್ ಬಿ.ಎಂ. ಅವರು ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂತೂರು - ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಚಂದ್ರಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪಳಂಗAಡ ಪ್ರಕಾಶ್ ಕಾವೇರಿಯಪ್ಪ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಡುವಂಡ ಬಿಂದ್ಯಾ ಬೋಪಣ್ಣ, ಖಜಾಂಚಿ ಮುಲ್ಲೇರ ಪಾಪ ಕಾವೇರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಸಹಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.