ನಾಪೋಕ್ಲು, ಜು. ೨೯: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಸದಸ್ಯರು ಸಮೀಪದ ಹಳೆ ತಾಲೂಕು ಅಂಗನವಾಡಿ ಬಳಿ ಶ್ರಮದಾನ ನಡೆಸಿದರು. ಮಳೆ ಪರಿಣಾಮ ಜಲ ಉದ್ಭವ ಆಗಿ ಅಂಗನವಾಡಿ ಸುತ್ತು ಕೆಸರುಗುಂಡಿ ಆಗಿದ್ದನ್ನು ಶೌರ್ಯ ಸದಸ್ಯರು ಕಲ್ಲು ಹಾಕಿ ಸಮಸ್ಯೆಯನ್ನು ಸರಿಮಾಡಿ ದರಲ್ಲದೆ ಅಂಗನವಾಡಿ ಸುತ್ತು ಚರಂಡಿ ತೋಡಿ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದರು. ಹಳೆತಾಲೂಕು ಒಳ ರಸ್ತೆಯಲ್ಲಿ ಗುಂಡಿ ಬಿದ್ದಿದ್ದ ರಸ್ತೆಯನ್ನು ಶೌರ್ಯ ಸದಸ್ಯರು ದುರಸ್ತಿಪಡಿಸಿದರು. ಈ ಸಂದರ್ಭ ಸೇವೆಯಲ್ಲಿ ಪಂಚಾಯಿತಿ ಸದಸ್ಯೆ ಹೇಮಾ ಅರುಣ್ ಬೇಬ, ಸಂಯೋಜಕಿ ಬಾಳೆಯಡ ದಿವ್ಯ ತಿಮ್ಮಯ್ಯ, ಸದಸ್ಯರಾದ ಉಮಾಲಕ್ಷಿö್ಮ, ಸೋಮಯ್ಯ, ಆಶಾಲತ, ದಿಲೀಶ್, ಪ್ರವೀಣ್, ಯೋಗೀಶ್, ಅಜಿತ್, ಶಂಕರ್, ಪ್ರಿಯಾಂಕ, ಗೀತಾ, ಅಂಗನವಾಡಿ ಕಾರ್ಯಕರ್ತೆ ಕಾಂತಿ, ಸಹಾಯಕಿ ಮಮತಾ ಉಪಸ್ಥಿತರಿದ್ದರು.