ಮಡಿಕೇರಿ, ಜು. ೨೮: ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳಿಗೆ ಸಿಲುಕಿ ಕಾಡಾನೆಗಳು ಸಾವಿಗೀಡಾಗುತ್ತಿರುವುದು ಮನುಷ್ಯರು ದುರಂತಗಳಿಗೆ ಸಿಲುಕಿಕೊಳ್ಳುತ್ತಿರುವ ಬಗ್ಗೆ ವಿದ್ಯುತ್ ಇಲಾಖೆ ವತಿಯಿಂದ ಅರಣ್ಯ ಇಲಾಖೆಯ ಜತೆಗೆ ಜಂಟಿ ಸಮಾಲೋಚನಾ ಸಭೆಯನ್ನು ಆಯೋಜಿಸಿ ಚರ್ಚಿಸಲು ನಿರ್ಧರಿಸಲಾಗಿದೆ.
ಈ ಸಭೆಯಲ್ಲಿ ಸೆಸ್ಕ್ನ ಪ್ರಮುಖ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಸಂಭವಿಸುತ್ತಿರುವ ದುರಂತಗಳ ಬಗ್ಗೆ ಪರಿಹಾರ ಕ್ರಮದ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ. ಕೊಡಗು ಅರಣ್ಯ ಪ್ರದೇಶಗಳಿಂದ, ಕಾಫಿ ತೋಟಗಳಿಂದ ಆವೃತ್ತವಾಗಿದ್ದು, ಇಲ್ಲಿ ಅರಣ್ಯ ಇಲಾಖೆಗೆ ಸಂಬAಧಿಸಿದAತೆಯೂ ಹಲವಾರು ಕಾನೂನುಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ವಿದ್ಯುತ್ ಮಾರ್ಗದಲ್ಲಿ ಮರ ಕಡಿಯುವುದು, ವಿದ್ಯುತ್‌ಲೈನ್‌ಗಳನ್ನು ರೆಂಬೆ - ಕೊಂಬೆಗಳಿAದ ಕಾಪಾಡುವುದು ಇಂತಹ ಹಲವು ಕ್ರಮಗಳು ಇಲ್ಲಿನ ಅಗತ್ಯವಾಗಿದೆ.
ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಉಂಟಾಗುವುದರಿAದ ಕೈಗೊಳ್ಳಬೇಕಾಗಿರುವ ಕ್ರಮ, ಅನುಸರಿಸಬೇಕಾದ ಮಾರ್ಗೋಪಾಯದ ಬಗ್ಗೆ ಜಂಟಿಯಾಗಿ ಚರ್ಚಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನೆಲ್ಲಿಹುದಿಕೇರಿ ವಿಭಾಗದಲ್ಲಿ ಎರಡು ಕಾಡಾನೆಗಳು, ಕುಟ್ಟದಲ್ಲಿ ಒಂದು ಕಾಡಾನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ. ಈ ದುರಂತಗಳು ನಡೆಯಲು ಸೆಸ್ಕ್ನ ನಿರ್ಲಕ್ಷö್ಯ ಕಾರಣವಲ್ಲ. ಇದು ನೈಸರ್ಗಿಕ ವಿಕೋಪದ ಪರಿಣಾಮವಾಗಿ ನಡೆದಿರುವ ಘಟನೆಯಾಗಿದೆ ಎಂದು ಸೆಸ್ಕ್ನ ಕಾರ್ಯಪಾಲಕ ಅಭಿಯಂತರರಾದ ಅನಿತಾಬಾಯಿ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರ‍್ರಿಯಿಸಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ಬೃಹತ್ ಮರವೊಂದು ಎತ್ತರಕ್ಕೆ ಹೋಗಿದೆ.
ಇದರ ಕೊಂಬೆ ಮುರಿದು ಅದು ವಿದ್ಯುತ್‌ಲೈನ್ ಮೇಲೆ ಬಿದ್ದಿದೆ. ತಂತಿ ತುಂಡಾದರೂ ಅದು ಕೆಳಗೆ ಬಿದ್ದಿಲ್ಲ. ಕೆಳಕ್ಕೆ ಬಿದ್ದಿದ್ದರೆ ಟ್ರಿಪ್ ಆಗಿ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಆದರೆ ತಂತಿ ಜೋತಾಡುತ್ತಿದ್ದರಿಂದ ಇದೇ (ಮೊದಲ ಪುಟದಿಂದ) ಮಾರ್ಗದಲ್ಲಿ ಬಂದ ಆನೆಗಳಿಗೆ ಸ್ಪರ್ಶಿಸಿ ನೆಲ್ಲಿಹುದಿಕೇರಿಯಲ್ಲಿ ದುರಂತ ಸಂಭವಿಸಿದೆ. ಸೆಸ್ಕ್ ಯಾವ ಕ್ರಮಗಳನ್ನು ಅನುಸರಿಸಬೇಕಿತ್ತೋ ಅದನ್ನು ಪಾಲಿಸಿತ್ತಾದರೂ, ನೈಸರ್ಗಿಕವಾದ ಘಟನೆಯ ಪರಿಣಾಮದಿಂದಾಗಿ ಈ ದುರಂತ ನಡೆದಿದೆ. ಕುಟ್ಟದಲ್ಲಿಯೂ ಅಡಿಕೆತೋಟವೊಂದರಲ್ಲಿನ ವಾರದಿಂದ ಸಮಸ್ಯೆಯಾಗಿದೆ. ಇಲ್ಲಿಯೂ ಸೆಸ್ಕ್ನ ತಪ್ಪು ಇಲ್ಲ ಎಂದು ಅವರು ಹೇಳಿದ್ದಾರೆ.
ದುರಂತ ನಡೆದ ಸ್ಥಳಗಳಿಗೆ ಈಗಾಗಲೇ ಹಾಸನದಿಂದ ವಿದ್ಯುತ್ ಪರಿವೀಕ್ಷಕರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ತಂಡ ಇನ್ನಷ್ಟೆ ವರದಿ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಬಂದು ನಾಡಿನೊಳಗೆ ತಿರುಗಾಡುತ್ತಿರುವದೂ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದೂ ಹೇಳಲಾಗುತ್ತಿದೆ.
ಈ ಎಲ್ಲಾ ಕಾರಣಗಳಿಂದಾಗಿ ಸೆಸ್ಕ್ ಹಾಗೂ ಅರಣ್ಯ ಇಲಾಖೆ ಜಂಟಿ ಸಮಾಲೋಚನೆಯ ಮೂಲಕ ಹಲವು ಪರಿಹಾರ ಕಾರ್ಯವನ್ನು ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.