ಮಡಿಕೇರಿ, ಜು. ೨೮: ರೋಟರಿ ಮಡಿಕೇರಿ ವುಡ್ಸ್ನ ವಿದ್ಯಾಸಿರಿ ಯೋಜನೆಯಡಿಯಲ್ಲಿ ಮದೆನಾಡು ಗ್ರಾಮದ ಬಾಲಕೃಷ್ಣ ಎಂಬವರಿಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ.೧೦ ಸಾವಿರ ಧನ ಸಹಾಯ ಮಾಡಲಾಯಿತು.
ಬಾಲಕೃಷ್ಣ ಹಾಗೂ ಅವರ ಪತ್ನಿ ಇಬ್ಬರೂ ವಿಶೇಷಚೇತನರಾಗಿದ್ದು ಅವರ ಕಾಫಿ ತೋಟ ೨೦೧೮ ರಲ್ಲಿ ನಡೆದ ಪ್ರಾಕೃತಿಕ ವಿಕೋಪ ಸಂದರ್ಭ ಹಾನಿಗೀಡಾಗಿದ್ದು, ತಮ್ಮ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿತ್ತು.
ರೋಟರಿ ಮಡಿಕೇರಿ ವುಡ್ಸ್ ಸದಸ್ಯ ಬಾಲಸುಬ್ರಹ್ಮಣ್ಯ ಅವರು ನಾಪೋಕ್ಲು ನಂದಿನಿ ಆಸ್ಪತ್ರೆ ಹಾಗೂ, ವಕೀಲೆ ಮೀನಾ ಕುಮಾರಿ ಅವರ ಸಹಯೋಗದಲ್ಲಿ ಹತ್ತು ಸಾವಿರ ರೂಪಾಯಿಗಳ ಚೆಕ್ ನ್ನು ರೋಟರಿ ಮಡಿಕೇರಿ ವುಡ್ಸ್ ಮುಖಾಂತರ ಬಾಲಕೃಷ್ಣ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ರೋಟರಿ ಮಡಿಕೇರಿ ವುಡ್ಸ್ ನ ಅಧ್ಯಕ್ಷ ಸಂಪತ್ ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ವಕೀಲ ರತನ್ ತಮ್ಮಯ್ಯ ಹಾಗೂ ರೋಟರಿ ಮಡಿಕೇರಿ ವುಡ್ಸ್ನ ಸದಸ್ಯರು ಇದ್ದರು.