ಮಡಿಕೇರಿ, ಜು. ೨೭: ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ಈ ಹಿಂದಿನ ಸರಕಾರ ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ಸುಳ್ಳು ಕಮ್ಯುನಲ್ ಗೂಂಡಾ - ರೌಡಿಶೀಟರ್ ಪಟ್ಟಿಯನ್ನು ರದ್ದುಪಡಿಸಬೇಕು, ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಿರುವ ಮತ್ತು ಕಾರ್ಯಕರ್ತರ ಮನೆಗೆ ಅಕ್ರಮ ಪ್ರವೇಶ ಮಾಡಿ ಕಿರುಕುಳ ನೀಡಲು ಸೂಚಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ, ಗೋಮಾಂಸ ಮಾರಾಟ, ಅಕ್ರಮ ಗೋಸಾಗಾಟ ತಡೆಯಬೇಕು, ಜಿಲ್ಲೆಯಲ್ಲಿರುವ ಬಾಂಗ್ಲಾ ಮೂಲದ ಅಸ್ಸಾಂ ಹೆಸರಿನ ವಲಸಿಗ (ಕಾರ್ಮಿಕ)ರ ಗಡಿಪಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕು, ಮತಾಂತರ ಮತ್ತು ಲವ್ ಜಿಹಾದ್ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಪ್ರಮುಖ ಆಗ್ರಹಗಳ ಈಡೇರಿಕೆಗಾಗಿ ತಾ. ೨೯ರಂದು ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ವಾಹನ ಜಾಥಾ, ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ತಾ.೨೯ರಂದು ಜಿಲ್ಲೆಯ ಎಲ್ಲಾ ೫ ತಾಲೂಕುಗಳಿಂದಲೂ ಹಿಂದೂ ಕಾರ್ಯಕರ್ತರು ವಾಹನ ಜಾಥಾ / ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೆೆÃರಿಗೆ ತೆರಳಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.