ಮಡಿಕೇರಿ, ಜು. ೨೭: ಕರ್ನಾಟಕ ಸರಕಾರವು ನಾಗರಿಕರು ತಮ್ಮ ಸ್ವಂತ ಖಾಸಗಿ ಜಮೀನಿನ ನಕ್ಷೆಯನ್ನು ಸ್ವಾವಲಂಬಿ ಆ್ಯಪ್ ಮೂಲಕ ಸ್ವಯಂ ಸರ್ವೆ ಮಾಡಿ ಸಿದ್ಧಪಡಿಸಿಕೊಳ್ಳುವ ಬಗ್ಗೆ ಅಧಿಸೂಚನೆ ಮೂಲಕ ವ್ಯವಸ್ಥೆ ಜಾರಿಗೊಳಿಸಿದೆ.
ಈ ಸಂಬAಧ ೧೧ ಇ ನಕ್ಷೆ ತತ್ಕಾಲ್ ಪೋಡಿ, ಪ್ರಿ ಅಲಿನೇಷನ್ ನಕ್ಷೆ ಮತ್ತು ವಿಭಾಗಕ್ಕೆ ಸಂಬAಧಿಸಿದAತೆ ಸಾರ್ವಜನಿಕರು ತಮ್ಮ ಜಮೀನುಗಳ ಅಳತೆ ಕಾರ್ಯಕ್ಕಾಗಿ ಸ್ವಾಲಂಬಿ ಆ್ಯಪ್ನ ವೆಬ್ಸೈಟ್ ವಿಳಾಸ ಡಿಜseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಈ ವೆಬ್ಸೈಟ್ನಲ್ಲಿ ಅಳತೆ ಕಾರ್ಯಕ್ಕಾಗಿ ಅರ್ಜಿ ಸಲ್ಲಿಸಿ, ತಾವೇ ಅಳತೆ ಕಾರ್ಯ ಪೂರೈಸಿಕೊಂಡು, ಸರ್ವೆ ದಾಖಲೆಗಳನ್ನು ಪಡೆಯುವ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ಭೂದಾಖಲೆಗಳ ಉಪನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.