ಮಡಿಕೇರಿ, ಜು. ೨೭: ದಕ್ಷಿಣ ಕೊಡಗಿನ ಹರಿಹರ ಗ್ರಾಮದ ಪ್ರಗತಿಪರ ಬೆಳೆಗಾರರ ಕೇಂದ್ರ ಮತ್ತು ಕಾಫಿ ಬೋರ್ಡ್ ಶ್ರೀಮಂಗಲ ಇವರ ಜಂಟಿ ಆಶ್ರಯದಲಿ ಹರಿಹರದ ಪ್ರಗತಿಪರ ಬೆಳೆಗಾರರ ಕೇಂದ್ರದಲ್ಲಿ ಕಾಫಿ ಬೆಳೆಯ ಬಗ್ಗೆ ಕಾರ್ಯಾಗಾರ ನಡೆಸಲಾಯಿತು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನಡಾಫ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಮಣ್ಣು ಪರೀಕ್ಷೆ, ಕಾಫಿ ಗಿಡಗಳಿಗೆ ಗೊಬ್ಬರದ ಬಳಕೆ, ಮುಂಗಾರು ಹಂಗಾಮಿನಲ್ಲಿ ಕಾಫಿ ತೋಟದ ನಿರ್ವಹಣೆ, ಪ್ರಸ್ತುತ ಕಾಫಿ ಗಿಡಗಳಿಗೆ ಬಾಧಿಸುತ್ತಿರುವ ರೋಗದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಶ್ರೀಮಂಗಲ ಕಾಫಿ ಬೋರ್ಡ್ನ ಸುನಿಲ್ ಕುಮಾರ್ ಅವರು ಮಾತನಾಡಿ ಕಾಫಿ ಗಿಡ ಕಸಿ ಮಾಡುವ ವಿಧಾನ, ಕಾಫಿ ಗಿಡ ಮರುನಾಟಿಯ ಬಗ್ಗೆ ತಿಳಿಸಿದರು.
ಹರಿಹರ ಪ್ರಗತಿಪರ ಬೆಳೆಗಾರರ ಕೇಂದ್ರದ ಅಧ್ಯಕ್ಷರಾದ ಕಟ್ಟೆರ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಗ್ರಾಮದ ಕಾಫಿ ಬೆಳೆಗಾರರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.