ಮಡಿಕೇರಿ, ಜು. ೨೭: ಹಾನಿಗೀಡಾಗಿದ್ದ ರಸ್ತೆಯೊಂದನ್ನು ಸ್ಥಳೀಯ ಕೆಲವರು ಸೇರಿ ಕಾಂಕ್ರೀಟ್ ಹಾಕಿ ಸಂಚಾರಕ್ಕೆ ಸುಗಮಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.
ಮರಗೋಡು ಗ್ರಾ.ಪಂ.ನ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿ ಶ್ರೀ ಮೃತ್ಯುಂಜಯ ದೇವಾಲಯಕ್ಕೆ ತೆರಳುವ ಕಾಂಕ್ರೀಟ್ ರಸ್ತೆ ಗುಂಡಿಬಿದ್ದು ರಸ್ತೆ ಹಾನಿಗೀಡಾಗಿತ್ತು. ಇದನ್ನು ಸಿಮೆಂಟ್, ಮರಳು, ಜೆಲ್ಲಿಯಂತಹ ಅಗತ್ಯ ವಸ್ತುಗಳನ್ನು ಉದಾರವಾಗಿ ಒದಗಿಸಿದ ಕೆಲವರು ಸರಿಪಡಿಸಿದ್ದಾರೆ.
ಈ ಕಾರ್ಯದಲ್ಲಿ ಎಸ್. ಕಟ್ಟೆಮಾಡುವಿನ ಭದ್ರಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ನಂದೇಟಿರ ರವಿ ಸುಬ್ಬಯ್ಯ, ಗ್ರಾ.ಪಂ. ಸದಸ್ಯ ಕಳ್ಳೀರ ಬೋಸು ಲವಪ್ಪ, ಲೋಕೇಶ್, ಗಣೇಶ್, ಅಬ್ದುಲ್ ರೆಹಮಾನ್, ಮೋಹನ್, ನಿಶಾನ್, ಪಾರ್ವತಿ, ವೇಣುಗೋಪಾಲ್, ಬಿ. ವಸಂತ, ಉಮೇಶ್, ನಾಸೀರ್, ಅಚ್ಚಕಾಳೆರ ಕಾವೇರಪ್ಪ, ಗ್ರಾಮಸ್ಥರು ಕೈ ಜೋಡಿಸಿದರು.