ಗೋಣಿಕೊಪ್ಪಲು, ಜು. ೨೭: ಖಾಯಂ ವೇತನಕ್ಕೆ ಪಟ್ಟು ಹಿಡಿದಿರುವ ಆನೆ ಮಾವುತರು, ಕಾವಾಡಿಗರು ತಮ್ಮ ಪಟ್ಟನ್ನು ಇನ್ನೂ ಸಡಿಲಿಸದೆ ಆ.೫ರ ದವರೆಗೆ ಗಡುವು ನೀಡಿದ್ದಾರೆ. ದುಬಾರೆ, ಆನೆಚೌಕೂರು ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದ ಮಾವುತರು ವಿಶ್ವ ಪ್ರಸಿದ್ದ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ತಮ್ಮ ಆನೆಗಳೊಂದಿಗೆ ತೆರಳದಿರಲು ನಿರ್ಧಾರ ಕೈಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಮೂರ್ತಿ ಅವರು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಗೋಣಿಕೊಪ್ಪಲು, ಜು. ೨೭: ಖಾಯಂ ವೇತನಕ್ಕೆ ಪಟ್ಟು ಹಿಡಿದಿರುವ ಆನೆ ಮಾವುತರು, ಕಾವಾಡಿಗರು ತಮ್ಮ ಪಟ್ಟನ್ನು ಇನ್ನೂ ಸಡಿಲಿಸದೆ ಆ.೫ರ ದವರೆಗೆ ಗಡುವು ನೀಡಿದ್ದಾರೆ. ದುಬಾರೆ, ಆನೆಚೌಕೂರು ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದ ಮಾವುತರು ವಿಶ್ವ ಪ್ರಸಿದ್ದ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ತಮ್ಮ ಆನೆಗಳೊಂದಿಗೆ ತೆರಳದಿರಲು ನಿರ್ಧಾರ ಕೈಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಮೂರ್ತಿ ಅವರು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸಣ್ಣ ಬೇಡಿಕೆಯನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ.
ಒಂದು ವೇಳೆ ಈ ಬಾರಿಯೂ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ಮೈಸೂರು ದಸರಾ ಕಾರ್ಯಕ್ರಮಕ್ಕೆ ಆನೆಗಳೊಂದಿಗೆ ಭಾಗವಹಿಸುವುದಿಲ್ಲ ಎಂಬ ವಿಚಾರವನ್ನು ಅಧಿಕಾರಿಯ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ ಮಾವುತರು, ಕಾವಾಡಿಗರ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ, ಆಗಸ್ಟ್ ೫ ರೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
-ಹೆಚ್.ಕೆ. ಜಗದೀಶ್