ಸೋಮವಾರಪೇಟೆ, ಜು. ೨೭: ಸಮೀಪದ ಗಣಗೂರು ಗ್ರಾಮದಲ್ಲಿ ಇಂದು ಬೆಳಗ್ಗಿನ ಜಾವ ವಾಸದ ಮನೆ ಮೇಲೆ ಕಾಡಾನೆ ಧಾಳಿ ನಡೆಸಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಪಾರ್ವತಿ ಅವರ ವಾಸದ ಮನೆಯ ಮುಂಭಾಗ ಆಗಮಿಸಿರುವ ಕಾಡಾನೆ, ಮನೆಯ ಕಿಟಕಿ ಸರಳುಗಳನ್ನು ಜಖಂಗೊಳಿಸಿ ಕೋಣೆಯ ಒಳಭಾಗ ಶೇಖರಿಸಿಟ್ಟಿದ್ದ ಭತ್ತ ಹಾಗೂ ಅಕ್ಕಿಯನ್ನು ತಿಂದಿದೆ. ಕಿಟಕಿಯ ಪಕ್ಕದ ಗೋಡೆಯನ್ನು ತನ್ನ ದಂತದಿAದ ತಿವಿದು ಜಖಂಗೊಳಿಸಿದೆ.
ಇAದು ಬೆಳಿಗ್ಗೆ ೪ ಗಂಟೆ ಸುಮಾರಿಗೆ ಮನೆ ಬಳಿಗೆ ಆಗಮಿಸಿರುವ ಕಾಡಾನೆ, ಮನೆಯ ಕಿಟಕಿಯನ್ನು ಜಖಂಗೊಳಿಸಿದೆ. ಅಕ್ಕಿ ಮೂಟೆಯನ್ನು ಎಳೆದು ತಿಂದಿದೆ. ಈ ಸಂದರ್ಭ ಮನೆಯೊಳಗಿದ್ದ ಪಾರ್ವತಿ ಹಾಗೂ ಸಂಬAಧಿಯೋರ್ವರು ಲೈಟ್ ಹಾಕಿ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ನಂತರ ಕಾಡಾನೆ ಸ್ಥಳದಿಂದ ತೆರಳಿದೆ.
ಮನೆಯಿಂದ ತೆರಳಿದ ಕಾಡಾನೆ ಸಮೀಪದಲ್ಲೇ ಇರುವ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿದ್ದು, ತೋಟದಲ್ಲಿದ್ದ ಬಾಳೆ, ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿದೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟು ಧಾಳಿ ನಡೆಸುತ್ತಿವೆ. ಇವುಗಳಿಂದ ಸಾರ್ವಜನಿಕರಿಗೆ ಮುಕ್ತಿ ನೀಡಬೇಕಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿ ಆನೆ ಕಂದಕ ಹಾಗೂ ಸೋಲಾರ್ ಬೇಲಿಯನ್ನು ಸಮರ್ಪಕಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.