ಮಡಿಕೇರಿ, ಜು. ೨೬: ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯಿಂದ ನಗರದ ಹುತಾತ್ಮ ಯೋಧರ ಯುದ್ಧ ಸ್ಮಾರಕದ ಬಳಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ಸಂವಹನ ವಕ್ತಾರ ಟಿ.ಪಿ. ರಮೇಶ್, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಮಡಿದ ವೀರ ಯೋಧರ ಬಲಿದಾನವನ್ನು ನೆನೆಸುತ್ತ ಕೊಡಗಿನ ವೀರ ಯೋಧರ ಕೊಡುಗೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ಮಡಿದ ಕೊಡಗಿನ ವೀರ ಯೋಧರ ಬಗ್ಗೆ ಮಾತನಾಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ವಕ್ತಾರ ತೆನ್ನೀರಾ ಮೈನಾ ದೇಶದ ಹಾಗೂ ಕೊಡಗಿನ ಸೈನಿಕರ ಬಲಿದಾನದ ಬಗ್ಗೆ ಮುಂದಿನ ದಿನಗಳಲ್ಲಿ ಜುಲೈ ೨೬ ರಂದು ಸರಕಾರದಿಂದಲೇ ರಾಷ್ಟಿçÃಯ ಹಬ್ಬದ ರೀತಿಯಲ್ಲಿ ಕಾರ್ಗಿಲ್ ದಿನಾಚರಣೆ ಯನ್ನು ಆಚರಿಸುವಂತಾಗಬೇಕು ಎಂದರು.
ಈ ಸಂದರ್ಭ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಬಿ.ವೈ., ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ ಎಚ್., ಪದಾಧಿಕಾರಿಗಳಾದ ಟಿ.ಎಂ. ಅಯ್ಯಪ್ಪ, ಸೇವಾದಳದ ಅಧ್ಯಕ್ಷ ಕಾನೇಹಿತ್ಲು ಮೊಣ್ಣಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಮಾಜಿ ಸೈನಿಕರ ಘಟಕದ ಅಧ್ಯಕ್ಷ ಗಣೇಶ್, ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಅಂಬೇಕಲ್ ನವೀನ್, ಹಿರಿಯರಾದ ಅಂಬೇಕಲ್ ಕುಶಾಲಪ್ಪ, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಹಿಳಾ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷ ಕಲಿಲ್ ಭಾಷಾ, ಅಲ್ಪಸಂಖ್ಯಾತ ಘಟಕದ ನಗರ ಅಧ್ಯಕ್ಷ ಕೆ.ಜಿ. ಪೀಟರ್, ಹಿಂದುಳಿದ ಘಟಕದ ಅಧ್ಯಕ್ಷ ಜಿ.ಸಿ. ಜಗದೀಶ್, ನಗರ ಮಹಿಳಾ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಎಸ್ಸಿ ಘಟಕದ ಅಧ್ಯಕ್ಷ ಮುದ್ದುರಾಜ್, ಮಡಿಕೇರಿ ನಗರ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಯಾಕೂಬ್, ಸದಾ ಮುದ್ದಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಪಿ., ಕಾರ್ಯಕರ್ತರುಗಳಾದ ಹನೀಫ್, ಅಣ್ಣಪ್ಪ, ದಿವ್ಯ, ರಿಯಾಜುದ್ದೀನ್, ಖಾಲಿದ್, ಸೈಮನ್, ರಾಜಣ್ಣ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಜರಿದ್ದರು.