ಮಡಿಕೇರಿ, ಜು. ೨೬: ಆಗಿಂಕ ಮಲ್ಟಿಮಿಡಿಯ, ಸುಳ್ಯ ಗೌಡರ ಯುವ ಸೇವಾ ಸಂಘ ಹಾಗೂ ಕೊಡಗು ಗೌಡ ಯುವ ವೇದಿಕೆ ಸಹಯೋಗದಲ್ಲಿ ಆ. ೭ ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಬೆಳಿಗ್ಗೆ ೯.೩೦ಕ್ಕೆ ೩ನೇ ವರ್ಷದ ವಿಶ್ವ ಅರೆಭಾಷೆ ಹಬ್ಬ (ಆಟಿ-೧೮) ನಡೆಯಲಿದೆ. ಈ ನಿಟ್ಟಿನಲ್ಲಿ ಅರೆಭಾಷೆಯಲ್ಲಿ ಆಹ್ವಾನಿತ ಕವಿಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯ ಕ್ರಮದ ಆಯೋಜಕರು ಈ ಬಗ್ಗೆ ಮಾಹಿತಿ ನೀಡಿದರು. ಅರೆಭಾಷೆ ಕವನ ಸ್ಪರ್ಧೆ, ಲಘು ಪ್ರಬಂಧ ಸ್ಪರ್ಧೆ ‘ಹರ್ಟೆ’, ಅರೆಭಾಷೆ ರೀಲ್ಸ್ ಸ್ಪರ್ಧೆ (‘ತಕಥೈ’), ಕಥಾ ಸ್ಪರ್ಧೆ (ಕಥೆ ಕಲ್ಪನೆ), ಹಳೆ ಸಂಪ್ರದಾಯಗಳ ಮಾಹಿತಿಗಳ ಸ್ಪರ್ಧೆ (ಕೊಪ್ಪರಿಗೆ), ಸುಗ್ಗಿ ಶೀರ್ಷಿಕೆ ಯಡಿ ೧೫ ರಿಂದ ೨೦ ನಿಮಿಷದೊಳ ಗಿನ ಲೈವ್ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿದ್ದು, ತಾ. ೭ ರಂದು ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಇದು ಕೇವಲ ಅರೆಭಾಷಿಕರಿಗೆ ಸೀಮಿತವಾಗದೆ, ಅರೆಭಾಷೆಯ ಮೇಲೆ ಪ್ರೀತಿ ಅಭಿಮಾನವಿರುವ ಪ್ರತಿಯೊಬ್ಬರೂ ಭಾಗವಹಿಸ ಬಹುದಾಗಿದೆ.

ಭಾಷೆಯ ಬೆಳವಣಿಗೆ ಮತ್ತು ಅರೆಭಾಷೆಯಲ್ಲಿ ಇರುವ ಪ್ರತಿಭಾನ್ವಿತ ಕಲಾವಿದರಿಗಾಗಿ ಒಂದು ಸದುದ್ದೇಶದ ವೇದಿಕೆಯನ್ನು ಕಲ್ಪಿಸಿಕೊಡÀÄವುದರ ಜೊತೆಗೆ ಅರೆಭಾಷೆಯ ಸಂಸ್ಕೃತಿ, ಸಾಹಿತ್ಯ, ಸಂಪ್ರದಾಯಗಳನ್ನು ಜನಾಂಗದಿAದ ಜನಾಂಗಕ್ಕೆ ತಿಳಿಸುವುದು ಹಾಗೂ ಸಮುದಾಯದ ಒಗ್ಗಟ್ಟನ್ನು ಕಾಯ್ದುಕೊಳ್ಳುವದಾಗಿದೆ. ಜಗತ್ತಿನೆಲ್ಲೆಡೆ ಅರೆಭಾಷೆಯನ್ನು ಪಸರಿಸುವ ನಿಟ್ಟಿನಲ್ಲಿ ತಾಲೂಕು, ಜಿಲ್ಲೆ, ರಾಜ್ಯ ದೇಶ, ವಿದೇಶಗಳಲ್ಲಿ ನೆಲೆಸಿರುವ ಅರೆಭಾಷಿಕರು ಕೂಡ ಅಲ್ಲಲ್ಲಿ ಅರೆಭಾಷೆ ಹಬ್ಬವನ್ನು ಏರ್ಪಡಿಸುತ್ತಿ ದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯ ಕ್ರಮದ ಸಂಚಾಲಕಿ ಕೆದಂಬಾಡಿ ಕಾಂಚನ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ನಿರ್ದೇಶಕರಾದ ನಡುಮನೆ ಪವನ್, ಪುದಿಯನೆರವನ ರಿಶಿತ್ ಮಾದಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಉಪಸ್ಥಿತರಿದ್ದರು.