ಮಡಿಕೇರಿ, ಜು. ೨೪: ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದ ಕಾರಣದಿಂದ ಸ್ಥಗಿತಗೊಂಡಿದ್ದ ದುಬಾರೆಯ ರಿವರ್ ರ್ಯಾಫ್ಟಿಂಗ್ ಪುನರಾರಂಭಗೊAಡಿದ್ದು, ಜಲಕ್ರೀಡೆಯಲ್ಲಿ ತೊಡಗಲು ವಿವಿಧ ಭಾಗಗಳಿಂದ ಪ್ರವಾಸಿಗರು ದುಬಾರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಪ್ರಕೃತಿ ವಿಕೋಪ, ಕೋವಿಡ್ನಿಂದ ದುಬಾರೆಯ ಜಲಕ್ರೀಡೆ ಕಳೆಗುಂದಿತ್ತು. ಇದೀಗ ದುಬಾರೆಯ ರಿವರ್ ರ್ಯಾಫ್ಟಿಂಗ್ ತನ್ನ ಹಳೆಯ ಗತವೈಭವಕ್ಕೆ ಮರಳಿದ್ದು, ದುಬಾರೆಯ ಜಲಕ್ರೀಡೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದುಬಾರೆಯಲ್ಲಿ ಬೆಳಗ್ಗೆ ೯.೩೦ ಗಂಟೆಯಿAದ ಸಂಜೆ ೪.೩೦ವರೆಗೆ ರಿವರ್ ರ್ಯಾಫ್ಟಿಂಗ್ ನಡೆಸಲಾಗುತ್ತಿದೆ. ೩೫ ಮಾಲೀಕರು ೬೫ ಬೋಟ್ಗಳನ್ನು ಹೊಂದಿದ್ದಾರೆ. ನಿಗದಿಪಡಿಸಲಾದ ಶುಲ್ಕ ಪಾವತಿಸಿ ಬೋಟ್ನಲ್ಲಿ ೬ ರಿಂದ ಎಂಟು ಮಂದಿಗೆ ಕುಳಿತುಕೊಂಡು ರ್ಯಾಫ್ಟಿಂಗ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ೭ ಕಿ.ಮೀ.ವರೆಗೆ ನದಿಯಲ್ಲಿ ರ್ಯಾಫ್ಟಿಂಗ್ ಸಾಗುತ್ತದೆ.
ನುರಿತ ಗೈಡ್ಗಳು ರ್ಯಾಫ್ಟ್ ಮುನ್ನಡೆಸುತ್ತಿದ್ದು, ರ್ಯಾಫ್ಟಿಂಗ್ ಆರಂಭಕ್ಕೂ ಮೊದಲು ಗೈಡ್ಗಳು ಜಲಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಸೂಕ್ತ ನಿರ್ದೇಶನಗಳನ್ನು ನೀಡುತ್ತಾರೆ. ಯಾವುದೇ ಅಪಾಯ ಸಂಭವಿಸದAತೆ ಲೈಫ್ ಜಾಕೆಟ್, ಹೆಲ್ಮೆಟ್ಗಳನ್ನು ರ್ಯಾಫ್ಟಿಂಗ್ನಲ್ಲಿ ಪಾಲ್ಗೊಳ್ಳುವವರಿಗೆ ನೀಡಲಾಗುತ್ತದೆ. ದುಬಾರೆಯ ಕಾವೇರಿ ನದಿಯ ಸಾಹಸಮಯವಾದ ಜಲಕ್ರೀಡೆಯ ೭ ಕಿ.ಲೋ.ಮೀ ನಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ರ್ಯಾಪಿಡ್ ಸಿಗುತ್ತದೆ.
ಈ ನಾಲ್ಕು ಭಾಗಗಳಲ್ಲಿ ರ್ಯಾಪಿಡ್ ಮಾಡುವುದೇ ಸಾಹಸಮಯವಾಗಿರುತ್ತದೆ. ಜಲಕ್ರೀಡೆ ಮಾಡುವ ಸಂದರ್ಭದಲ್ಲಿ ಆಸಕ್ತರಿಗೆ ನೀರಿನಲ್ಲಿ ಈಜಾಡಲು ಕೂಡ ಅವಕಾಶ ನೀಡಲಾಗುತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಮೇಲುಸ್ತುವಾರಿ ಸಮಿತಿ ರೂಪಿಸಿರುವ ನಿಯಮಕ್ಕೆ ಬದ್ಧವಾಗಿ ರ್ಯಾಫ್ಟಿಂಗ್ ಮಾಡಲಾಗುತ್ತಿದೆ.
ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್ ಮೂಲಕ ರ್ಯಾಫ್ಟಿಂಗ್ ನಿರ್ವಹಣೆ ಮಾಡಲಾಗುತ್ತಿದೆ. ನುರಿತ ಗೈಡ್ಗಳು ರ್ಯಾಫ್ಟ್ ಮುನ್ನಡೆಸುತ್ತಿದ್ದಾರೆ ಎಂದು ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿಜು ಚಂಗಪ್ಪ ತಿಳಿಸಿದ್ದಾರೆ.