ಕೂಡಿಗೆ, ಜು. ೨೪: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದ ರೈತರು ನಾಲೆಯ ನೀರನ್ನು ಅವಲಂಬಿಸಿ ಭತ್ತದ ನಾಟಿ ಕಾರ್ಯವನ್ನು ಮಾಡಲು ಸಿದ್ಧತೆ ನಡೆದಿದೆ. ಈಗಾಗಲೇ ಕೃಷಿ ಇಲಾಖೆಯ ವತಿಯಿಂದ ವಿವಿಧ ಹೈಬ್ರೀಡ್ ತಳಿಯ ಭತ್ತದ ಸಸಿ ಮಡಿಗಳಿಗೆ ಬಿತ್ತನೆ ಕಾರ್ಯಕ್ಕೆ ರೈತರು ಕೆಲಸ ಆರಂಭ ಮಾಡಿದ್ದಾರೆ.

ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಮತ್ತು ನಾಲೆಗಳ ಮೂಲಕ ಮೊದಲ ಹಂತದಲ್ಲಿ ನೀರು ಹರಿಸುವ ಮುಂಚಿತವಾಗಿ ರೈತರು ಸಹಕಾರ ಸಂಘಗಳ ಮತ್ತು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿAದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಸಿದ್ದಾರೆ. ತಮ್ಮ ಜಮೀನಿನಲ್ಲಿ ಸಸಿಮಡಿಗೆ ಸಿದ್ದಪಡಿಸಿದ್ದ ಜಮೀನಿನಲ್ಲಿ ಬಿತ್ತನೆ ಕಾರ್ಯ ನಡೆದಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶವಾದ ಹುದುಗೂರು ಮದಲಾಪುರ ಹೆಬ್ಬಾಲೆ ತೊರೆನೂರು ಶಿರಂಗಾಲ ಗ್ರಾಮಗಳಲ್ಲಿ ಈಗಾಗಲೇ ನಾಲೆಯಲ್ಲಿ ಬರುತ್ತಿರುವ ಸೋರಿಕೆಯ ನೀರನ್ನು ಬಳಕೆ ಮಾಡಿಕೊಂಡು ನಾಟಿ ಕಾರ್ಯದ ಸಿದ್ದತೆಯಲ್ಲಿ ತೊಡಗಿದ್ದಾರೆ. ಈ ಸಾಲಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಸಣ್ಣ ಮಧು, ಬಿಆರ್ ಸೇರಿದಂತೆ ವಿವಿಧ ಹೈಬ್ರೀಡ್ ತಳಿಯ ಬಿತ್ತನೆ ಭತ್ತ ಮತ್ತು ಸಹಕಾರ ಸಂಘಗಳಲ್ಲಿ ರಾಜ್ಯದ ಮತ್ತು ಅಂತರರಾಜ್ಯದ ಹೈಬ್ರೀಡ್ ತಳಿಯ ಬಿತ್ತನೆ ಬೀಜಗಳನ್ನು ರೈತರು ರಿಯಾಯಿತಿ ದರದಲ್ಲಿ ಪಡೆದು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.