ಶನಿವಾರಸಂತೆ, ಜು. ೨೪: ಸಮೀಪದ ನಾಕಲಗೋಡು ಗ್ರಾಮದಲ್ಲಿ ಮನೆ ಜಾಗದ ಬಗ್ಗೆ ೨ ಕುಟುಂಬಗಳ ನಡುವೆ ಹಲ್ಲೆ, ಘರ್ಷಣೆ ನಡೆದು ದೂರು ದಾಖಲಾಗಿದೆ. ಉಭಯ ಕಡೆಯವರು ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
ನಾಕಲಗೋಡು ಗ್ರಾಮದ ಮುಖ್ಯರಸ್ತೆ ಬದಿ ವೇದಾವತಿ - ಮಂಜುನಾಥ್ ಆಚಾರ್ ದಂಪತಿ ಶೀಟಿನ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ಜು. ೧೮ರಂದು ಮನೆಗೆ ಬೀಗ ಹಾಕಿ ಹೊರಹೋಗಿದ್ದರು. ರಾತ್ರಿ ಹಿಂತಿರುಗಿ ಬಂದಾಗ ಕಣಗಲು ಗ್ರಾಮದ ಸಣ್ಣಪ್ಪ (ಡೀಲಾಕ್ಷ), ನಾಗಯ್ಯ, ಲಕ್ಷಿö್ಮÃ, ಕಮಲಮ್ಮ ಮನೆಯೊಳಗೆ ಸೇರಿಕೊಂಡಿದ್ದು, ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದರೆನ್ನಲಾಗಿದೆ. ಅದೇ ಸಮಯಕ್ಕೆ ನಾಕಲಗೋಡು ಗ್ರಾಮದ ಬಸವರಾಜ್, ಶಶಾಂಕ್, ಚಿದಾನಂದ್ ಎಂಬವರು ಮನೆಯೊಳಗೆ ಬಂದು ಮನೆಯಿಂದ ಹೊರ ಹೋಗುವಂತೆ ಹೇಳಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದರು. ಮಂಜುನಾಥ್ ಆಚಾರ್ ಅವರ ಜೇಬಿನಲ್ಲಿದ್ದ ರೂ. ೨೫ ಸಾವಿರವನ್ನೂ ಕಿತ್ತುಕೊಂಡರು. ಅಷ್ಟರಲ್ಲಿ ರವಿ ಮತ್ತು ಅಶ್ವಿತ ಎಂಬವರು ಅಲ್ಲಿಗೆ ಬಂದು ಜಗಳ ಬಿಡಿಸಿದ್ದು, ಹೊರಹೋಗಿದ್ದ ಮಗ ಲೋಕೇಶ್ ಮನೆಗೆ ಬಂದ ನಂತರ ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿರುವುದಾಗಿ ವೇದಾವತಿ ತಿಳಿಸಿದ್ದಾರೆ.
ಮತ್ತೊಂದು ದೂರು
ಇದೇ ರೀತಿ ಲಕ್ಷಿö್ಮÃ- ಸಣ್ಣಪ್ಪ (ಡೀಲಾಕ್ಷ) ದಂಪತಿಯೂ ಜು. ೧೮ರಂದು ತಮ್ಮ ಸ್ವಾಧೀನದಲ್ಲಿದ್ದ ಜಾಗಕ್ಕೆ ಮಂಜುನಾಥ್ - ವೇದಾವತಿ ದಂಪತಿ, ಮಗ ಲೋಕೇಶ್, ಹಂಡ್ಲಿ ಗ್ರಾಮದ ರವಿಕುಮಾರ್ ಅಕ್ರಮ ಪ್ರವೇಶ ಮಾಡಿ ಮನೆ ಕಟ್ಟುತ್ತಿದ್ದು, ತಡೆಯಲು ಹೋದಾಗ ಜಾತಿ ನಿಂದನೆಯ ಮಾತುಗಳನ್ನಾಡಿ ವಸ್ತç ಹರಿದು ಹಾಕಿ ಹಲ್ಲೆ ನಡೆಸಿದರು. ವೀಡಿಯೋ ಮಾಡುತ್ತಿದ್ದ ಶಶಾಂಕ್ ಅವರಿಗೆ ಬೆದರಿಕೆ ಹಾಕಿದರು. ಮನೆಯಿಂದ ಹೊರ ಹಾಕಿದರು. ಹಲ್ಲೆಯಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಯಿತು. ಜಾಗದ ತಕರಾರಿನ ಬಗ್ಗೆ ಗ್ರಾಮದ ಹಿರಿಯರು, ಪೊಲೀಸರು, ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಾಗಕ್ಕೆ ಸೂಕ್ತ ದಾಖಲಾತಿಗಳು ಇಲ್ಲದಿರುವುದರಿಂದ ಕಂದಾಯ ಇಲಾಖೆಯವರು ಜಾಗವನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡರು ಎಂದು ಲಕ್ಷಿö್ಮÃ ಶುಕ್ರವಾರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ೨ ಕುಟುಂಬಗಳ ದೂರಿನ ಹಿನ್ನೆಲೆ ಡಿವೈಎಸ್ಪಿ ಶೈಲೇಂದ್ರ ಹಾಗೂ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ತನಿಖೆ ಕೈಗೊಂಡಿದ್ದಾರೆ.