ಸಿದ್ದಾಪುರ, ಜು. ೨೩: ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾ.ಪಂ ಹಾಗೂ ಚೆನ್ನಯ್ಯನಕೋಟೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ದುಸ್ಥಿತಿಯಿಂದ ಕೂಡಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಗುಡ್ಲೂರು, ಮೂಡಬೈಲು, ಚೆನ್ನಂಗಿ ಮೂಲಕ ಚೆನ್ನಯ್ಯನಕೋಟೆ ಗ್ರಾಮವನ್ನು ಸಂಪರ್ಕಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹರಸಾಹಸದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಲ್ಲದೆ ಪಾದಾಚಾರಿಗಳು, ಶಾಲಾ ವಿದ್ಯಾರ್ಥಿಗಳು ಕೂಡ ಹದಗೆಟ್ಟ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಇಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯಲ್ಲಿ ಮಳೆಯ ನೀರು ಹರಿದು ಕಿರು ಜಲಪಾತ ಸೃಷ್ಟಿಯಾಗಿದೆ. ಚರಂಡಿ ಕಾಮಗಾರಿಯು ಅರ್ಧಕ್ಕೆ ನಿಲ್ಲಿಸಿರುವುದರ ಪರಿಣಾಮ ಮಳೆಯ ನೀರು ರಸ್ತೆಯ ಮೂಲಕ ಹರಿದು ಸಮೀಪದ ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ರಸ್ತೆಯು ಪೂರ್ಣ ಪ್ರಮಾಣದಲ್ಲಿ ಚೆನ್ನಯ್ಯನಕೋಟೆ ಗ್ರಾ.ಪಂ ಗೆ ಒಳಪಡುತ್ತಿದ್ದು, ಮಾಲ್ದಾರೆ ಗ್ರಾ.ಪಂ ಗುಡ್ಲೂರು ಮೂಲಕ ಹಾದುಹೋಗುವ ರಸ್ತೆಯಾಗಿದೆ. ಗ್ರಾ.ಪಂ. ಅಧ್ಯಕ್ಷರ ವಾರ್ಡ್ನಲ್ಲಿಯೇ ರಸ್ತೆ ಹದಗೆಟ್ಟಿದ್ದು, ಇಲ್ಲಿನ ರಸ್ತೆಯು ಹದಗೆಡಲು ಪ್ರಮುಖ ಕಾರಣ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದು. ಈ ಹಿನ್ನೆಲೆಯಲ್ಲಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನ ಸವಾರರು, ಪಾದಚಾರಿಗಳ ಬಳಕೆಗೆ ಕೂಡ ಈ ರಸ್ತೆ ಯೋಗ್ಯವಲ್ಲ. ಸಮೀಪದ ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ರಸ್ತೆಯು ಪೂರ್ಣ ಪ್ರಮಾಣದಲ್ಲಿ ಚೆನ್ನಯ್ಯನಕೋಟೆ ಗ್ರಾ.ಪಂ ಗೆ ಒಳಪಡುತ್ತಿದ್ದು, ಮಾಲ್ದಾರೆ ಗ್ರಾ.ಪಂ ಗುಡ್ಲೂರು ಮೂಲಕ ಹಾದುಹೋಗುವ ರಸ್ತೆಯಾಗಿದೆ. ಗ್ರಾ.ಪಂ. ಅಧ್ಯಕ್ಷರ ವಾರ್ಡ್ನಲ್ಲಿಯೇ ರಸ್ತೆ ಹದಗೆಟ್ಟಿದ್ದು, ಇಲ್ಲಿನ ರಸ್ತೆಯು ಹದಗೆಡಲು ಪ್ರಮುಖ ಕಾರಣ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದು. ಈ ಹಿನ್ನೆಲೆಯಲ್ಲಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನ ಸವಾರರು, ಪಾದಚಾರಿಗಳ ಬಳಕೆಗೆ ಕೂಡ ಈ ರಸ್ತೆ ಯೋಗ್ಯವಲ್ಲ.