ಪೊನ್ನAಪೇಟೆ, ಜು. ೨೩: ಗ್ರಾಮೀಣ ಭಾಗದ ರೈತರಿಗೆ ಬ್ಯಾಂಕಿನ ಜೊತೆಗೆ ಸಂಪರ್ಕ ಕಲ್ಪಿಸಿ ಬ್ಯಾಂಕ್‌ನಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಟಿ. ಶೆಟ್ಟಿಗೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ವತಿಯಿಂದ ರೈತರಿಗಾಗಿ ಅಂದು-ಇAದು ಎಂದೆAದೂ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಶಿಬಿರವನ್ನು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಟ್ಟಡದಲ್ಲಿ ಆಯೋಜಿಸಲಾಗಿತ್ತು.

ಮಡಿಕೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಮೋಗಿಲಿ ಏಡುಕುಂಡಲುರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸ್ಟೇಟ್ ಬ್ಯಾಂಕ್ ರೈತರ ಜೊತೆಗೆ ಯಾವಾಗಲೂ ಸಂಪರ್ಕದಲ್ಲಿಇರುವ ಸಲುವಾಗಿ ಶಿಬಿರ ಆಯೋಜನೆ ಮಾಡಲಾಗಿದೆ. ಬ್ಯಾಂಕಿನ ವ್ಯವಸ್ಥೆ ಪ್ರತಿ ರೈತರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ. ಇದರ ಸದುಪಯೋಗವನ್ನು ರೈತರು ಪಡೆದುಕೊಂಡು ಬ್ಯಾಂಕಿನೊAದಿಗೆ ನಿಕಟ ಸಂಪರ್ಕ ಹೊಂದಿಕೊAಡರೆ ಸುಲಭವಾಗಿ ಬ್ಯಾಂಕಿAಗ್ ವ್ಯವಹಾರ ನಡೆಸಲು ಅನುಕೂಲವಾಗುತ್ತದೆ ಎಂದರು.

ಉದ್ದಿಮೆದಾರರು ಸಾಲ ಪಡೆಯುವ ಬಗ್ಗೆ, ಸಾಲ ಮರುಪಾವತಿ ಹಾಗೂ ಸಿಬಿಲ್ ಸ್ಕೋರ್ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕೃಷಿ ಸಾಲ, ಹೈನುಗಾರಿಕೆ ಸಾಲ ಹೀಗೆ ಹತ್ತು ಹಲವು ಯೋಜನೆಗಳು, ರೈತರಿಗೆ ಬ್ಯಾಂಕ್‌ನಲ್ಲಿ ಸಿಗುವ ಸಬ್ಸಿಡಿ ಸಾಲಗಳು, ವ್ಯಾಪಾರೋದ್ಯಮದಲ್ಲಿ ಆರೋಗ್ಯಕರ ಸಾಲ ನಿರ್ವಹಣೆ ಹೇಗೆ? ಗುಣಾತ್ಮಕ ಸಾಲ ಪಡೆದು ಸಕಾಲದಲ್ಲಿ ಪಾವತಿಸಿ ಪ್ರಮಾಣಿಕತೆ ಹೊಂದಿದ್ದಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು. ಉದ್ದಿಮೆಗಳು ಮತ್ತು ಸಾಲಗಳ ಸಂಯೋಜನೆ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ. ಸಣ್ಣ ಉದ್ದಿಮೆಗಳು ಸಾಲ ಪಡೆದು ಆರ್ಥಿಕ ಅಭಿವೃದ್ಧಿಯ ಜೊತೆಗೆ ಬಂಡವಾಳ ಹೊಂದಿ ಕೊಂಡು ಯಶಸ್ವಿಯಾಗಬಹುದು ಎಂದರು.

ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದ ಕಾರ್ಯಕ್ರಮ ಸಂಚಾಲಕ ಹಾಗೂ ಮಾಜಿ ಸೈನಿಕರಾದ ಅಪ್ಪಚಂಗಡ ಮೋಟಯ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟಿ. ಶೆಟ್ಟಿಗೇರಿ ಶಾಖೆ ವತಿಯಿಂದ ಆಯೋಜಿಸಿರುವ ರೈತರ ರಾತ್ರಿ ಶಿಬಿರವು ಬಹಳ ಅರ್ಥಗರ್ಭಿತ ವಾಗಿದೆ. ನೇರವಾಗಿ ಬ್ಯಾಂಕ್ ರೈತರ ಬಳಿ ಬಂದು, ರೈತರು ಹಾಗೂ ಬ್ಯಾಂಕಿನ ಜೊತೆಗೆ ಸಮನ್ವಯ ಸಾಧಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿರುವುದು ಎಲ್ಲಾ ರೈತಾಪಿ ವರ್ಗದವರಿಗೂ ಹರ್ಷತಂದಿದೆ ಎಂದರು. ಮಡಿಕೇರಿ ಎಸ್‌ಬಿಐನ ಆರ್‌ಎಸಿಸಿ ಭವಾನಿ ಮಾತನಾಡಿದರು.

ಸನ್ಮಾನ: ಈ ಸಂದÀರ್ಭ ಮಾಜಿ ಸೈನಿಕರಾದ ಕಟ್ಟೇರ ವಿಶ್ವನಾಥ್, ಅಪ್ಪಚಂಗಡ ಮೋಟಯ್ಯ, ಸಿ.ಎ. ಕಾರ್ಯಪ್ಪ, ವಿ.ಎಸ್. ಗಣಪತಿ, ಮಾಜಿ ಸೈನಿಕರ ಪತ್ನಿಯರಾದ ಕೈಬುಲಿರ ಪಾರ್ವತಿ, ಚಂಗುಲAಡ ಪುಣ್ಯವತಿ, ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್, ಸ್ಥಳೀಯ ರೈತರಾದ ಮಚ್ಚಮಾಡ ಎನ್. ಸುಮಂತ್, ಸಿ.ಎಂ. ಪ್ರಜಾ, ಮಾಣೀರ ನಾಚಪ್ಪ, ಚಂಗುಲAಡ ಅಶ್ವಿನಿ ಸತೀಶ್, ಸಾಹಿತಿ ಉಳುವಂಗಡ ಕಾವೇರಿ ಉದಯ ಹಾಗೂ ಟಿ. ಶೆಟ್ಟಿಗೇರಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಎಸ್‌ಬಿಐನ ಸೇಲ್ಸ್ ಮತ್ತು ಬ್ಯುಸಿನೆಸ್ ಡೆವಲಪ್‌ಮೆಂಟ್‌ನ ಮುಖ್ಯ ವ್ಯವಸ್ಥಾಪಕ ಜಗದೀಶ್ ಕಾಮತ್, ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಸರಿತಾ ತಮ್ಮಯ್ಯ, ಬಿಜೆಪಿ ಕೃಷಿ ಮೋರ್ಚಾ ವಲಯಾಧ್ಯಕ್ಷ ಕಟ್ಟೇರ ಈಶ್ವರ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಮನ್ನೇರ ರಮೇಶ್, ಚಟ್ಟಂಗಡ ವಿಜಯ್, ಮಿದೇರೀರ ಸುರೇಶ್, ಮಂದಮಾಡ ಗಣೇಶ್, ಮಚ್ಚಮಾಡ ಮನುಕುಶಾಲಪ್ಪ, ಚೊಟ್ಟೆಯಂಡಮಾಡ ಗೋಕುಲ, ಗ್ರಾಮಸ್ಥರಾದ ಚೊಟ್ಟೆಯಂಡಮಾಡ ಉದಯ, ಪಿಡಿಓ ಕವಿತ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಸಂಭ್ರಮ ಮಹಿಳಾ ಸಂಘ, ಸ್ತಿçà ಶಕ್ತಿ ಸಂಘ ಹಾಗೂ ರೈತ ಸಂಘದವರು ಪಾಲ್ಗೊಂಡಿದ್ದರು. ಟಿ. ಶೆಟ್ಟಿಗೇರಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.