ಮಡಿಕೇರಿ, ಜು. ೨೩: ಜುಲೈ ಆರಂಭದಿAದ ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುವುದ ರೊಂದಿಗೆ ವ್ಯಾಪಕ ನಷ್ಟಗಳನ್ನು ಉಂಟುಮಾಡಿದ್ದ ಮಳೆ ಇದೀಗ ಆಷಾಢ ಮಾಸದಲ್ಲಿ ಅಚ್ಚರಿದಾಯ ಕವೆಂಬAತೆ ಇಳಿಮುಖವಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಕ್ಷೀಣಗೊಂಡಿದೆ. ಕೇವಲ ಆಗಾಗ್ಗೆ ಸಣ್ಣ ಪ್ರಮಾಣದ ಮಳೆ ಮಾತ್ರ ಅಲ್ಲಲ್ಲಿ ಕಂಡುಬರುತ್ತಿದೆ.
ನಿರAತರವಾಗಿ ಪ್ರತಿದಿನ ಇಂಚುಗಟ್ಟಲೆ ಸುರಿಯುತ್ತಿದ್ದ ಸನ್ನಿವೇಶ ಈಗಿನ ಒಂದರೆಡೆ ದಿನಗಳಿಂದ ಕಂಡುಬರುತ್ತಿಲ್ಲ. ಅಲ್ಲಲ್ಲಿ ಬಿಸಿಲು ಕಂಡುಬರುತ್ತಿದೆ. ಧಾರಾಕಾರ ಮಳೆಯಿಂದ ಪರಿತಪಿಸುವಂತಾಗಿದ್ದ ಜನತೆಗೆ ಈಗಿನ ವಾತಾವರಣ ಒಂದಷ್ಟು ಚೇತೋಹಾರಿಯಾಗಿದೆ. ಆದರೆ ಕೃಷಿ ಕೆಲಸ-ಕಾರ್ಯಗಳನ್ನು ನಡೆಸುವ ಮಂದಿಗೆ ಈ ಬದಲಾವಣೆ ಇದೇ ರೀತಿ ಮುಂದುವರಿದಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡುವಂತಾಗಿದೆ.ಪ್ರಸ್ತುತ ಜಿಲ್ಲೆಯಲ್ಲಿ ಬಹಳಷ್ಟು ಬತ್ತದ ಬಿತ್ತನೆ ಕಾರ್ಯ ಮುಗಿದಿದ್ದು, ಕೆಲವೆಡೆ ನಾಟಿ ಕೆಲಸವೂ ಆರಂಭವಾಗುತ್ತಿದೆ. ಬತ್ತದ ಗದ್ದೆ ನದಿ-ತೋಡಗಳಲ್ಲಿ ಕೆಲದಿನಗಳ ಹಿಂದೆ ಏರಿಕೆಯಾಗಿದ್ದ ನೀರಿನ ಮಟ್ಟವೂ ಇದೀಗ ಇಳಿದಿದೆ.
ಜಿಲ್ಲೆಯಲ್ಲಿ ವಿವಿಧ ರೈತ ಸಂಪರ್ಕ ಕೇಂದ್ರಗಳಿAದ ಸುಮಾರು ಎರಡೂವರೆ ಸಾವಿರ ಕ್ವಿಂಟಾಲ್‌ನಷ್ಟು ಬತ್ತದ ಬಿತ್ತನೆ ಬೀಜವನ್ನು ರೈತರು ಪಡೆದು ಕೊಂಡಿದ್ದಾರೆ. ಅಲ್ಪಾವಧಿ, ಮಧ್ಯಮವಾಧಿ ಹಾಗೂ ಧೀರ್ಘಾವಧಿ ತಳಿಯನ್ನು ಜಿಲ್ಲೆಯಲ್ಲಿ ವಾತಾವರಣ-ಭೌಗೋಳಿಕತೆಗೆ ಪೂರಕವಾಗಿ ಬೆಳೆಯಲಾಗುತ್ತಿದ್ದು, ಇದರ ಸಿದ್ಧತೆಗಳು ನಡೆಯುತ್ತಿರುವುದಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬನಾ ಎಂ. ಶೇಕ್ ಅವರು ತಿಳಿಸಿದ್ದಾರೆ.